ಅವಕಾಶಗಳಿಲ್ಲದೆ ಗಾಡಿಲಿ ತರಕಾರಿ ಮಾರಲು ಹೊರಟಿದ್ದ ನಟ ಟೆನ್ನಿಸ್ ಕೃಷ್ಣ ಬದುಕಿನ ಕಣ್ಣೀರ ಕಥೆ-

ಸ್ಯಾಂಡಲವುಡ್

ಬಂಧುಗಳೇ ನಮಸ್ಕಾರ ಒಂದಿಷ್ಟು ಕಲಾವಿದರ ಪರಿಸ್ಥಿತಿಯನ್ನು ನೆನೆಸಿಕೊಂಡರೆ ನಿಜವಾಗಲೂ ಬೇಸರ ಆಗುತ್ತೆ ಕಣ್ರೀ. ಒಂದು ಕಾಲದಲ್ಲಿ ಮೆರೆದಾಡಿದ ಅಂತಹ ಒಂದು ಕಾಲದಲ್ಲಿ ಉತ್ತಮ ಸ್ಥಾನದಲ್ಲಿದಂತಹ ಕಲಾವಿದರು ಇದೀಗ ಅವಕಾಶಕ್ಕಾಗಿ ಹೊಸಬರ ಮುಂದೆ ಬೇಡಿ ಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಕಮಿಷನ್ ಕೊಡುತ್ತೀವಿ ದಯವಿಟ್ಟು ಅವಕಾಶ ಮಾಡಿಕೊಡಿ ರಪ್ಪ ದಯವಿಟ್ಟು ಚಾನ್ಸ್ ಕೊಡಿ ಎನ್ನುವ ರೀತಿಯಲ್ಲಿ ಬೇಡಿ ಕೊಳ್ಳುವಂತಹ ಪರಿಸ್ಥಿತಿ ಒಂದಷ್ಟು ಕಲಾವಿದರಿಗೆ ಇದೆ.

ನಾನು ಈಗಾಗಲೇ ಸಾಲುಸಾಲು ಒಂದಷ್ಟು ಕಲಾವಿದರ ಜೀವನವನ್ನು ಸದ್ಯದ ಪರಿಸ್ಥಿತಿಯನ್ನು ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ. ಅದರಲ್ಲಿ ಒಬ್ಬ ಕಲಾವಿದರ ಬಗ್ಗೆ ಹೇಳಿಲ್ಲ ಅಂದ್ರೆ ಬಹಳ ಬಹಳ ತಪ್ಪಾಗುತ್ತದೆ. ಅದು ಟೆನಿಸ್ ಕೃಷ್ಣ ಅವರಿಗೆ ಸಂಬಂಧಪಟ್ಟ ಹಾಗೆ. ನೀವು ಇತ್ತೀಚಿನ ದಿನಗಳಲ್ಲಿ ಯೋಚನೆ ಮಾಡಿರಬಹುದು. ಈಗಿನ ಸಿನಿಮಾಗಳಲ್ಲಿ ಯಾಕೆ ಟೆನ್ನಿಸ್ ಕೃಷ್ಣ ಕಾಣಿಸಿಕೊಳ್ಳುತ್ತಿಲ್ಲ. ಒಂದು ಕಾಲದಲ್ಲಿ ನಮಗೆ ಕಾಮಿಡಿಯನ್ ಅಂದ್ರೆ ನೆನಪಾಗುತ್ತಿದ್ದದ್ದು ಟೆನಿಸ್ ಕೃಷ್ಣ ಸಾಧುಕೋಕಿಲ. ಬೇರೆ ಬೇರೆ ಎಲ್ಲರೂ ಕೂಡ ಇದ್ದರು ಪ್ರಮುಖವಾದ ಹಾಸ್ಯನಟರು ಅಂದರೆ ಟೆನ್ನಿಸ್ ಕೃಷ್ಣ ಮತ್ತು ಸಾಧು ಕೋಕಿಲ.

ಸಾಧುಕೋಕಿಲ ಈಗಲೂ ಕೂಡ ಸಿನಿಮಾರಂಗದಲ್ಲಿ ಆಕ್ಟಿವ್ ಆಗಿದ್ದಾರೆ ಈಗಲೂ ಕೂಡ ಸಾಲು-ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಟೆನ್ನಿಸ್ ಕೃಷ್ಣ ಮಾತ್ರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ. ಎಲ್ಲೋ ಒಂದೊಂದು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅಂತಹ ಪರಿಸ್ಥಿತಿ ಟೆನ್ನಿಸ್ ಕೃಷ್ಣ ಅವರಿಗೆ ಬಂದಿದೆ. ಹಾಗಾದರೆ ಟೆನ್ನಿಸ್ ಕೃಷ್ಣ ಅವರಿಗೆ ಯಾಕೆ ಹೀಗಾಯಿತು. ಸದ್ಯ ಅವರ ಬದುಕು ಹೇಗಿದೆ. ಆರ್ಥಿಕವಾಗಿ ಯಾವ ರೀತಿ ಯಾಗಿದ್ದಾರೆ. ಸಂಕಷ್ಟದಲ್ಲಿದ್ದಾರ.

ಯಾಕೆ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಅದೆಲ್ಲವನ್ನು ಕೂಡ ಇವತ್ತಿನ ಮಾಹಿತಿಯಲ್ಲಿ ಹೇಳುತ್ತಾ ಹೋಗುತ್ತೇವೆ. ಇದಕ್ಕೂ ಮುನ್ನ ಟೆನ್ನಿಸ್ ಕೃಷ್ಣ ಅವರಿಗೆ ಸಂಬಂಧಪಟ್ಟ ಹಾಗೆ ಒಂದಷ್ಟು ವಿಚಾರಗಳನ್ನು ನಾನು ನಿಮ್ಮ ಮುಂದೆ ಹೇಳುತ್ತೇನೆ. ಟೆನ್ನಿಸ್ ಕೃಷ್ಣ ಮೂಲತಹ ಉತ್ತರ ಕರ್ನಾಟಕದವರು. ಆರಂಭದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ದುಡಿಸಿಕೊಂಡ ಅಂತಹವರು. ಸಿನಿಮಾ ಇಂಡಸ್ಟ್ರಿಗೆ ಬಹಳ ಆಸೆ ಪಟ್ಟು ಬಂದಂತವರು. 19 90 ರ ಸುಮಾರಿಗೆ ಅವರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಾರೆ.

ಅವರ ತಂದೆ ಟೆನ್ನಿಸ್ ಕೋಚ್ ಆಗಿದ್ದರು ಇವರು ಕೂಡ ಟೆನ್ನಿಸ್ ಆಡುತ್ತಿದ್ದರಂತೆ ಈ ಕಾರಣಕ್ಕಾಗಿ ಟೆನಿಸ್ ಅಂತ ಹೆಸರು ಬಂತು ಅಂತ ಕೂಡ ಹೇಳಲಾಗುತ್ತದೆ. ಟೆನಿಸ್ ಕೃಷ್ಣ ಸಾವಿರ ಒಂಬೈನೂರ ತೊಂಬತ್ತು ರ ದಶಕದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಪಿಕ್ ನಲ್ಲಿ ಇದ್ದಂತಹ ಸಂದರ್ಭದಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಾರೆ. ರಾಜ ಕೆಂಪು ರೋಜ ಎನ್ನುವಂತಹ ಸಿನಿಮಾ ಮೂಲಕ ಒಂದಷ್ಟು ಚಿಕ್ಕಪುಟ್ಟ ಪಾತ್ರಗಳು ಅವರಿಗೆ ಸಿಗುತ್ತಾ ಆಗುತ್ತೆ. ಜೀವನ ಚೈತ್ರ ಅಣ್ಣಾವ್ರ ಜೊತೆಗೆ ಅಭಿನಯ ಅಂದರೆ ಸಾಮಾನ್ಯ ವಾದಂತಹ ವಿಚಾರವಲ್ಲ.

ತರ್ಲೆ ನನ್ ಮಗ ಸಿನಿಮಾದಲ್ಲಿ ಕಲಿಯುಗ ಸೀತೆ ಎನ್ನುವಂತ ಸಿನಿಮಾದಲ್ಲಿ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಟೆನ್ನಿಸ್ ಕೃಷ್ಣ ಅಭಿನಯಿಸುತ್ತಾ ಹೋಗುತ್ತಾರೆ. ಆದರೆ ಟೆನ್ನಿಸ್ ಕೃಷ್ಣ ಗೆ ಬಹಳ ದೊಡ್ಡ ಮಟ್ಟಿಗೆ ಹೆಸರು ತಂದುಕೊಟ್ಟಂತಹ ಸಿನಿಮಾ ಅಂದರೆ ಅಪ್ಪ ನಂಜಪ್ಪ ಮಗ ಗುಂಜಪ್ಪ ಎನ್ನುವಂತ ಸಿನಿಮಾ ಬಹಳ ದೊಡ್ಡ ಮಟ್ಟಿಗೆ ಹೆಸರು ತಂದು ಕೊಡುತ್ತೇನೆ. ಆನಂತರ ಟೆನ್ನಿಸ್ ಕೃಷ್ಣ ಎಲ್ಲಿಯವರೆಗೂ ಬಂದುಬಿಡುತ್ತಾರೆ ಅಂದರೆ ಹೀರೋ ಆಗುವ ಹಂತದವರೆಗೂ ಕೂಡ ಬಂದುಬಿಡುತ್ತಾರೆ. ಅಷ್ಟರಮಟ್ಟಿಗೆ ಟೆನ್ನಿಸ್ ಕೃಷ್ಣ ಅವರ ಪ್ರಖ್ಯಾತಿ ಇರುತ್ತದೆ.

ಅವರ ನಟನೆಯ ಸ್ಟೈಲ್ಗೆ ಅವರ ಮ್ಯಾನರಿಸಂ ಗೆ ಅವರ ಧ್ವನಿಗೆ ಎಲ್ಲರೂ ಕೂಡ ಫಿದಾ ಆಗಿದ್ದಾರೂ. ಬಹುತೇಕ ಆಗಿನ ಕಲಾವಿದರ ಜೊತೆ ಗೆ ಅಂದ್ರೆ ದೊಡ್ಡ ಸ್ಟಾರ್ ಗಳು ಯಾರಿದ್ದರೂ ಅವರೆಲ್ಲರ ಜೊತೆಗೆ ಅಭಿನಯಿಸಿದಂತೆ ಕ್ಯಾತಿ ಟೆನ್ನಿಸ್ ಕೃಷ್ಣ ಅವರಿಗೆ ಇದೆ. ಗಡಿಬಿಡಿ ಅಳಿಯ ಚೆಲುವ ಕೌರವ ತುತ್ತ ಮುತ್ತ ಪಟೇಲ ಸಿನಿಮಾದಲ್ಲಿ ಅಂತಹ ಪಾತ್ರ ಅದ್ಭುತ. ಯಜಮಾನ ಸಿನಿಮಾದಲ್ಲಿ ಸೂರಪ್ಪ ಸಿನಿಮಾದಲ್ಲಿ. ದಿಗ್ಗಜರು ಮೇಕಪ್ಪು ಲವ ಕಶ ಇತ್ತೀಚಿಗೆ ವೀರಮದಕರಿ ಬುಲ್ ಬುಲ್ ಉಪ್ಪಿಟ್ಟು ಇಲ್ಲಿಯವರೆಗೂ ಕೂಡ ಟೆನ್ನಿಸ್ ಕೃಷ್ಣ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಹೋಗುತ್ತಾರೆ.

ಆದರೆ ಇತ್ತೀಚಿಗೆ ತೀರಾ ತೀರಾ ಅವಕಾಶಗಳು ಕಡಿಮೆಯಾಗಿಬಿಟ್ಟಿದೆ. ಒಂದು ಕಾಲದಲ್ಲಿ ಟೆನ್ನಿಸ್ ಕೃಷ್ಣ ರೇಖಾ ದಾಸ್ ಅವರ ಜೋಡಿ ಆಗಿರಬಹುದು ಟೆನ್ನಿಸ್ ಕೃಷ್ಣ ಮತ್ತು ದೊಡ್ಡಣ್ಣ ಅವರ ಜೋಡಿ ಆಗಿರಬಹುದು ಜಗ್ಗೇಶ್ ಮತ್ತೆ ಟೆನ್ನಿಸ್ ಕೃಷ್ಣ ಅವರ ಕಾಂಬಿನೇಷನ್ ಆಗಿರಬಹುದು ಇದೆಲ್ಲವೂ ಕೂಡ ಸಿಕ್ಕಾಪಟ್ಟೆ ಹಿಟ್ಟಾದ ಅಂತಹ ಕಾಂಬಿನೇಷನ್. ಈ ಕಾಂಬಿನೇಷನ್ ಇದ್ದರೆ ಮಾತ್ರ ಸಿನಿಮಾ ಗೆಲ್ಲುತ್ತೆ. ಎನ್ನುವಂತಹ ಹಂತದವರೆಗೂ ಕೂಡ ಇತ್ತು.

ಆದರೆ ಇತ್ತೀಚಿಗೆ ಯಾರ ಕಾಂಬಿನೇಷನ್ ಅಲ್ಲೂ ಕೂಡ ಟೆನ್ನಿಸ್ ಕೃಷ್ಣ ಕಾಣಿಸಿಕೊಳ್ಳುತ್ತಿಲ್ಲ. ಇದರ ಎಲ್ಲರ ನಡುವೆ ಇತ್ತೀಚಿಗೆ ಕರೆದು ಒಂದು ಒಳ್ಳೆಯ ಅವಕಾಶಗಳನ್ನು ಮಾಡಿಕೊಟ್ಟಂತಹ ಅವರು ಅಂದರ್ ಟೆನ್ನಿಸ್ ಕೃಷ್ಣ ಅವರಿಗೆ ಒಂದು ರೀತಿಯಲ್ಲಿ ಜೀವನವನ್ನು ಕೊಟ್ಟಂತಹವರು ಅಂದರೆ ಒಂದು ಕಡೆಯಿಂದ ಕಿಚ್ಚ ಸುದೀಪ್ ಅವರು. ಅವಕಾಶವೇ ಇಲ್ಲದಂತಹ ಸಂದರ್ಭದಲ್ಲಿ ವೀರಮದಕರಿ ಸಿನಿಮಾದಲ್ಲಿ ಅದ್ಭುತವಾದಂತಹ ಪಾತ್ರವನ್ನು ಕೊಡುತ್ತಾರೆ.

ಈಗಲೂ ಕೂಡ ಟೆನ್ನಿಸ್ ಕೃಷ್ಣ ಅವರು ನೆನಪಿಸಿಕೊಳ್ಳುತ್ತಾರೆ. ಅದು ಕೂಡ ಸಾಧುಕೋಕಿಲ ಅವರಿಗೆ ಸಿಕ್ಕ ಬೇಕಾಗಿದ ಅಂತಹ ಪಾತ್ರ ಅದು ಆಕಸ್ಮಿಕವಾಗಿ ಟೆನ್ನಿಸ್ ಕೃಷ್ಣ ಅವರಿಗೆ ಸಿಗುತ್ತೆ. ಬಿಗ್ ಹಿಟ್ ಆಗುತ್ತೆ. ಆ ಕಾಂಬಿನೇಷನ್ ಆನಂತರ ಬುಲ್ಬುಲ್ ಸಿನಿಮಾದಲ್ಲಿ ಒಂದು ಅವಕಾಶವನ್ನು ದರ್ಶನ್ ಅವರು ಮಾಡಿಕೊಡುತ್ತಾರೆ. ಒನ್ ಸೆಕೆಂಡ್ ಸುದೀಪ್ ಅವರು ಮಾಣಿಕ್ಯ ಸಿನಿಮಾದಲ್ಲೂ ಕೂಡ ಅವಕಾಶ ಮಾಡಿಕೊಡುತ್ತಾರೆ. ಬಹಳ ಚಿಕ್ಕ ರೋಲ್ ಆಗಿರುತ್ತೆ.

ಟೆನ್ನಿಸ್ ಕೃಷ್ಣ ಅವರ ಪರಿಸ್ಥಿತಿಯಲ್ಲಿ ಎಲ್ಲಿಯವರೆಗೂ ಬಂದಿದೆ ಅಂದರೆ ಕೇವಲ ಹೊಸಬರ ಸಿನಿಮಾಗಳಲ್ಲಿ ಮಾತ್ರ ಸಣ್ಣಪುಟ್ಟ ರೋ ಲ್ ಗಳನ್ನು ಕೊಡುತ್ತಾರೆ. ಬಹಳ ಕಡಿಮೆ ಸಂಭಾವನೆಗೆ. ಒಂದು ಮತ್ತೊಂದು ಸೀರಿಯಲ್ ಗಳಲ್ಲಿ ಕೂಡ ಸಾಧಾರಣವಾದ ಅಂತಹ ಪಾತ್ರಗಳು ಸಿಗುತ್ತದೆ. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾದಲ್ಲಿ ಅವಕಾಶ ಸಿಕ್ಕರೂ ಕೂಡ ಬರಿ ಸಿನಿಮಾದಲ್ಲಿ ಒಂದು ನಿಮಿಷ ಎರಡು ನಿಮಿಷ ನು ರೋಲ್ ಹಂತದವರೆಗೆ ಟೆನ್ನಿಸ್ ಕೃಷ್ಣ ಅವರು ಬಂದಿದ್ದಾರೆ. ಅದು ಕೂಡ ಸಿಗುತ್ತಿಲ್ಲ.

ಎಲ್ಲೋ ಒಂದೊಂದು ಸಿನಿಮಾಗಳಲ್ಲಿ ಮಾತ್ರ. ಅವರಿಗೆ ಪಾತ್ರಗಳು ಸಿಗುತ್ತದೆ. ಇಷ್ಟರಮಟ್ಟಿಗೆ ಅವರು ಅವಕಾಶಗಳಿಲ್ಲದೆ ಪರದಾಡುವ ಸ್ಥಿತಿ ಆಗಿದೆ. ಇತ್ತೀಚಿನ ಸಂದರ್ಶನ ಅವರು ಹೇಳಿಕೊಳ್ಳುತ್ತಾರೆ ದಯವಿಟ್ಟು ಅವಕಾಶ ಕೊಡ್ರಪ್ಪ ಬೇಕಾದರೆ ನಿಮಗೆ ಕಮಿಷನ್ ಕೊಡುತ್ತೇನೆ. ನನಗೊಂದು ಚಾನ್ಸ್ ಕೊಡ್ರಪ್ಪ ಅಂತ ಹೇಳಿ. ನೋಡಿ ಅಂತಹ ಮೇರು ಕಲಾವಿದ ಇಡೀ ಕರ್ನಾಟಕಕ್ಕೆ ಗೊತ್ತಿರುವಂತಹ ಕಲಾವಿದ ಒಂದು ಕಾಲದಲ್ಲಿ ಒಳ್ಳೆ ಸಂಭಾವನೆ ಒಳ್ಳೆ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಂತ ಕಲಾವಿದ ಹೊಸಬರ ಮುಂದೆ ಕೈಯೊಡ್ಡಿ ಬೇಡಿ ಕೊಳ್ಳುವಂತಹ ಪರಿಸ್ಥಿತಿ ಟೆನ್ನಿಸ್ ಕೃಷ್ಣ ಅವರಿಗೆ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *