ಬಿಗ್ ಬಾಸಗೆ ಬರಲು ನಟಿ ಮಯೂರಿ ಮಾಡಿರುವ ಕೆಲಸವೇನು ಗೊತ್ತಾ . ಅಬ್ಬಾ ಎಲ್ಲರ ಕಣ್ಣಲ್ಲಿ ನೀರು , ಮಾಡಿದ್ದೇನು ಗೊತ್ತಾ ನೋಡಿ.

Bigboss News

ನಮಸ್ಕಾರ ವೀಕ್ಷಕರೆ, ಇದೀಗ ಕಿರುತೆರೆಯ ರಿಯಾಲಿಟಿ ಶೋ ಆದ ಬಿಗ್ ಬಾಸ್ ಬಹಳಷ್ಟು ಸದ್ದು ಮಾಡಿದೆ. ಇನ್ನು ಈ ಬಾರಿ ಅಂತು ಎಲ್ಲರ ನಿರೀಕ್ಷೆ ಲೆವೆಲ್ ಹೆಚ್ಚಿದೆ, ಕಾರಣ ಈ ಬಾರಿ ಹೊಸ ಕಂಟೆಸ್ಟೆಂಟ್ಗಳೊಂದಿಗೆ ಈಗಾಗಲೇ ಮುಗಿದಿರುವ ಸೀಸನ್ಗಳಲ್ಲಿ ಇದ್ದ ಕಂಟೆಸ್ಟಟಂಟ್ ಗಳು ಕೂಡ ಇದ್ದಾರೆ.

ಪ್ರವೀಣರೊಂದಿಗೆ ನವೀನರು ಎಂಬ ಥೀಮ್ ಅಡಿಯಲ್ಲಿ ಈ ಸರಿ ಬಿಗ್ ಬಾಸ್ ಸೆಟ್ಟೇರಿದ್ದು . ಎಲ್ಲರಲ್ಲಿಯೂ ಕುತೂಹಲ ಬಹಳ ಹೆಚ್ಚಿದೆ. ಈ ಬಾರಿ ಇದು ಡಬಲ್ ಧಮಾಕ ಆಗಬಹುದು ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಈ ಬಾರಿ ಬಿಗ್ ಬಾಸ್ ನಲ್ಲಿ ಹಲವರು ಎಂಟ್ರಿ ನೀಡಿದ್ದು ಹೊಸ ಪರಿಚಯಗಳು ಕೆಲವರಾದರೆ ಇನ್ನು ಓ ಟಿ ಟಿ ಯಲ್ಲಿ ಬಿಗ್ ಬಾಸ್ ಮನೆಗೆ ಸೆಲೆಕ್ಟ್ ಆದ ಕಂಟೆಸ್ಟೆಂಟ್ಗಳು ಕೂಡ ಇದ್ದಾರೆ .

ಹಲವಾರು ಹೊಸ ಪ್ರತಿಭೆಗಳು ಕೂಡ ಈ ಬಾರಿ ಹೆಸರು ಮಾಡಲಿದೆ ಎಂದು ಹಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕಿಚ್ಚ ಅವರ ಹೊಸ ಲುಕ್ ಇನ್ನು ಹೆಚ್ಚಾಗಿ ಕುತೂಹಲವನ್ನು ಸೃಷ್ಟಿ ಮಾಡಿದೆ. ಇನ್ನೂ ಅವರ ನಿರೂಪಣೆ ಮತ್ತು ಅವರ ಮಾತುಗಾರಿಕೆ ಎಲ್ಲರನ್ನೂ ಕೂಡ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇನ್ನು ಈ ಬಾರಿ ಬಿಗ್ ಬಾಸ್ ಸೀಸನ್ ಗೆ ಅಶ್ವಿನಿ ನಕ್ಷತ್ರದ ಖ್ಯಾತಿಯ ಮೈಯೂರಿ ಅವರು ಎಂಟ್ರಿ ನೀಡಿದ್ದು, ಅವರು ಒಂದುವರೆ ವರ್ಷದ ತಮ್ಮ ಮಗನನ್ನು ಬಿಟ್ಟು ಬರುವ ವೇಳೆ ಬಹಳ ಭಾವುಕರಾದರು. ಅಶ್ವಿನಿ ನಕ್ಷತ್ರದ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ ಮಯೂರಿಯವರು ತುಂಬಾನೇ ಫೇಮಸ್ ಆದರು ಮತ್ತು ಆನಂತರ ನಾಗತೀಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಡಿಯಲ್ಲಿ ತೆರೆಕಂಡ ಚಿತ್ರ ಇಷ್ಟಕಾಮ್ಯದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

ಇವರು ನಟಿಸಿದ ಶಶಾಂಕ್ ನಿರ್ದೇಶನದ ಕೃಷ್ಣಲೀಲಾ ಸಿನಿಮಾ ಬಹಳಷ್ಟು ಹಿಟ್ ಆಯಿತು. ಇನ್ನು ಆನಂತರ ಅವರು ಪೊಗರು ಚಿತ್ರದಲ್ಲಿ ಸರ್ಪೋಟಿಂಗ್ ಕ್ಯಾರೆಕ್ಟರ್ ಆಗಿ ಧ್ರುವ ಸರ್ಜಾ ಅವರಿಗೆ ತಂಗಿಯ ಪಾತ್ರದಲ್ಲಿ ಕೂಡ ಕಾಣಿಸಿಕೊಂಡರು. ಆನಂತರ ಅವರು ತಮ್ಮ ಆತ್ಮೀಯ ಸ್ನೇಹಿತನಾದ ಅರುಣ್ ಅವರನ್ನು ತುಂಬಾ ಸಿಂಪಲ್ ಆಗಿ ದೇವಸ್ಥಾನದಲ್ಲಿ ಮದುವೆಯಾದರು.

ನಂತರ ವೈವಾಹಿಕ ಜೀವನದಲ್ಲಿ ತುಂಬಾ ಖುಷಿಯಿಂದ ಇದ್ದರು. ಇದೀಗ ಬಿಗ್ ಬಾಸ್ ಗೆ ಎಂಟ್ರಿ ನೀಡಿರುವ ಮೈಯೂರಿಯವರು ಹೊಸ ಚಾಲೆಂಜ್ಗೆ ಕೈ ಹಾಕಿದ್ದಾರೆ. ಇದು ಯಾವ ಮಟ್ಟಿಗೆ
ಸಕ್ಸಸ್ ಅನ್ನು ನೀಡುತ್ತದೆ ಎಂಬುದನ್ನು
ಕಾದು ನೋಡಬೇಕಿದೆ.

ಇನ್ನು ಮಯೂರಿಯವರನ್ನು ಬಿಗ್ ಬಾಸ್ ವೇದಿಕೆಯಿಂದ ಬಿಗ್ ಬಾಸ್ ಮನೆಯೊಳಗೆ ಕಳುಹಿಸಿಕೊಡಲು ಇಡೀ ಕುಟುಂಬವೇ ಆಗಮಿಸಿತ್ತು. ಜೊತೆಗೆ ಅವರ ಪುಟಾಣಿ ಮಗು ಒಂದುವರೆ ವರ್ಷದಾಗಿದ್ದು ಆ ಮಗು ಕೂಡ ಅವರನ್ನು ಕಳುಹಿಸಿಕೊಡಲು ಬಿಗ್ ಬಾಸ್ ವೇದಿಕೆ ಏರಿತ್ತು .

ಮತ್ತು ಅವರು ತಮ್ಮ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಯೊಳಗೆ ಹೋಗಬೇಕಾದರೆ ಬಹಳ ಭಾವುಕರಾದರು. ಮನೆಯೊಳಗೆ ಅವರ ಮುಂದಿನ ದಿನಗಳು ಸಾಗಲಿದ್ದು ಯಾವ ರೀತಿಯಾಗಿ ಅವರು ಯಶಸ್ಸನ್ನು ಕಾಣಲಿದ್ದಾರೆ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *