ಪ್ರಶಾಂತ ಸಂಬರಗಿಗೆ ಎಡಗಾಲಲ್ಲಿ ಗುದ್ದಿ ಹೋಗ್ತೀನಿ ಎಂದ ಗುರೂಜಿ! ಯಾಕೆ ಗೊತ್ತಾ …

Bigboss News

ಕನ್ನಡ ಕಿರುತೆರೆಯ ನಂಬರ್ ಒನ್ ರಿಯಾಲಿಟಿ ಕಾರ್ಯಕ್ರಮ ಎಂದರೆ ಅದು ನಮ್ಮ ಬಿಗ್ ಬಾಸ್. ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ 8 ಸೀಸನ್ ಗಳನ್ನು ಹಾಗೂ ಒಂದು ಓಟಿಟಿ ಸೀಸನ್ ಅನ್ನಿ ಯಶಸ್ವಿಯಾಗಿ ಪೂರ್ಣ ಗೊಳಿಸಿದೆ. ಇನ್ನು ಇದೀಗ ಕಲರ್ಸ್ ಕನ್ನಡ ವಾಹಿನಿ ಮತ್ತೊಂದು ಸೀಸನ್ ಜೊತೆಗೆ ಹಲವಾರು ಸ್ಪರ್ಧಿಗಳೊಂದಿಗೆ ಪ್ರೇಕ್ಷಕರ ಎದುರು ಬಂದಿದೆ.

ಹೌದು ಇದೀಗ ಬಿಗ್ ಬಾಸ್ ಸೀಸನ್ 9 ಕಾರ್ಯಕ್ರಮ ಶುರುವಾಗಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಬೇರೆ ಎಲ್ಲಾ ಸೀಸನ್ ಗಳಿಗಿಂತಲೂ ತುಂಬಾ ವಿಭಿನ್ನವಾಗಿರಲಿದೆ. ಹೌದು ಈ ಬಾರಿ ನವೀನರು ಹಾಗೂ ಪ್ರವೀಣರ ನಡುವಿನ ಜಟಾಪಟಿಯನ್ನು ವೀಕ್ಷಕರು ನೋಡಿ ಆನಂದಿಸಬಹುದು.

ಬಿಗ್ ಬಾಸ್ ಸೀಸನ್ 9 ಇದೆ ಭಾನುವಾರದಿಂದ ಶುರುವಾಗಿದೆ. ಇನ್ನು ಈ ಬಾರಿ ಬಿಗ್ ಬಾಸ್ ಗೆ ಕಳೆದ ಸೀಸನ್ ನ ಸ್ಪರ್ಧಿಗಳು ಹಾಗೂ ಬಿಗ್ ಬಾಸ್ ಓಟಿಟಿಯ ಸ್ಪರ್ಧಿಗಳ ಜೊತೆಗೆ ಹೊಸ ಸ್ಪರ್ಧಿಗಳು ಕೂಡ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಈ ಬಾರಿ ಸ್ಪರ್ಧಿಗಳಿಗೆ ಕಾಂಪಿಟೇಶನ್ ತುಂಬಾನೇ ಇದೆ ಎಂದರೆ ತಪ್ಪಾಗಲಾರದು.

ಪ್ರಶಾಂತ್ ಸಂಬರಗಿ, ದೀಪಿಕಾ ದಾಸ್, ದಿವ್ಯಾ ಉರುಡುಗ, ಅನುಪಮಾ ಗೌಡ, ಅರುಣ್ ಸಾಗರ್, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್ ಸೇರಿ ಒಟ್ಟು 9 ಮಂದಿ ಹಳೆಯ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ನಟಿ ಕಾವ್ಯಶ್ರೀ ಗೌಡ, ನೇಹಾ ಗೌಡ, ಮಯೂರಿ, ದರ್ಶ್ ಚಂದ್ರಪ್ಪ, ವಿನೋದ್ ಗೊಬ್ಬರಗಾಲ, ಐಶ್ವರ್ಯ ಪಿಸ್ಸೆ, ನವಾಜ್, ರೂಪೇಶ್ ರಾಜಣ್ಣ ಹಾಗೂ ಅಮೂಲ್ಯ ಗೌಡ ಸೇರಿ 9 ಮಂದಿ ಹೊಸಬರು ಬಿಗ್‌ಬಾಸ್‌ ಮನೆ ಸೇರಿದ್ದಾರೆ. ಒಟ್ಟು 18 ಜನ ಸ್ಪರ್ಧಿಗಳು ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಮೊದಲ ದಿನವೇ ಪ್ರಶಾಂತ್ ಸಂಬರ್ಗಿ ಹಾಗೂ ಆರ್ಯವರ್ಧನ್ ಗುರೂಜಿ ನಡುವೆ ಬೆಂಕಿ ಹಚ್ಚಿಕೊಂಡಿದೆ. ಆರ್ಯವರ್ಧನ್ ಗುರೂಜಿ ತಾವು 10 ಲಕ್ಷಕ್ಕೂ ಹೆಚ್ಚು ಜನರಿಗೆ ಜೋತಿಷ್ಯ ಹೇಳಿರುವುದಾಗಿ ಮನೆಯಲ್ಲಿ ಹೇಳಿತ್ತಾರೆ. ಇದಕ್ಕೆ ಪ್ರಶಾಂತ್ ಸಂಗರ್ಬಿ ಸುಮ್ಮಸುಮ್ಮನೆ ಇಲ್ಲ ಸಲ್ಲದನ್ನು ಹೇಳಬೇಡಿ ಎಂದು ಆರ್ಯವರ್ಧನ್ ಗುರೂಜಿಗೆ ಹೇಳುತ್ತಾರೆ.

ಹೀಗೆ ಮಾತಿಗೆ ಮಾತು ಬೆಳೆದು ಮನೆಯಲ್ಲಿ ಮೊದಲ ದಿನವೇ ಜಗಳ ಶುರುವಾಗಿದೆ. ಇನ್ನು ಈ ಜಗಳಕ್ಕೆ ದರ್ಶ ಚಂದ್ರಪ್ಪ ಕೂಡ ಸಾತ್ ಕೊಟ್ಟಿದ್ದು ಸಾಕಷ್ಟು ವಾದವಿಧಾಗಳು ನಡೆದಿದೆ. ಇನ್ನು ಮಾತಿಗೆ ಮಾತು ಬೆಳೆದು ಆರ್ಯವರ್ಧನ್ ಗುರೂಜಿ ಪ್ರಶಾಂತ್ ಗೆ ನನ್ನ ಮಣಕಾಲಿನಲ್ಲಿ ಗುದ್ದಿ ಹೊಡೆಯುತ್ತೇನೆ ಎಂದಿದ್ದಾರೆ. ಇನ್ನು ಸದ್ಯ ಈ ಪ್ರೊಮೋ ಬಿಡುಗಡೆಯಾಗಿದ್ದು, ಸಖತ್ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *