ಸಿನಿಮಾರಂಗ ಎನ್ನುವುದು ಅಷ್ಟು ಸುಲಭದ ಮಾತಲ್ಲ, ಸಿನಿಮಾರಂಗದಲ್ಲಿ ಕೆಲಸ ಮಾಡುವ ನಟ ನಟಿಯರು ಸಾಕಷ್ಟು ಸವಾಲುಗಳನ್ನು ಎದಿರಿಸಬೇಕಾಗುತ್ತದೆ. ಒಂದು ಒಳ್ಳೆಯ ಸಿನಿಮಾದಲ್ಲಿ ಅಭಿನಯುಸಲು ಸಾಕಷ್ಟು ಕಲಾವಿದರು ಕಷ್ಟ ಪಡುತ್ತಾರೆ.
ಇನ್ನು ಇತ್ತೀಚೆಗೆ ಸಿನಿಮಾರಂಗದ ಕರಾಳ ಸತ್ಯವನ್ನು ಕೆಲ ನಟ ನಟಿಯರು ಬಹಿರಂಗವಾಗಿ ಮಾತನಾಡಿ ಎಲ್ಲವನ್ನು ಬಿಚ್ಚಿಡುತ್ತಿದ್ದಾರೆ. ಸಿನಿಮಾರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ಸಾಕಷ್ಟು ಕಲಾವಿದರು ಎದುರಿಸಿದ್ದಾರೆ. ಇನ್ನು ಇತ್ತೀಚೆಗೆ ಈ ಬಗ್ಗೆ ಒಬ್ಬೊಬ್ಬರಾಗಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ನಟಿ ಹಾಗೂ ನಿರೂಪಕಿ ವಿಷ್ಣು ಪ್ರಿಯಾ ಈ ಬಗ್ಗೆ ಮಾತನಾಡಿದ್ದರು. ಇನ್ನು ಸಿನಿಮಾರಂಗದಲ್ಲಿ ಇವೆಲ್ಲಾ ಕಾಮನ್ ಇನ್ನು ಇದನ್ನು ಒಪ್ಪಿಕೊಳ್ಳುವುದು ಇಲ್ಲದೆ ಇರುವುದು ಅವರವರಿಗೆ ಬಿಟ್ಟಿದ್ದು ಎಂದಿದ್ದರು. ಇನ್ನು ಜೊತೆಗೆ ಈ ರೀತಿಯ ಅನುಭವ ಕೇವಲ ನಟಿಯರಿಗೆ ಅಲ್ಲ ನಟರು ಕೂಡ ಅನುಭವಿಸುತ್ತಾರೆ ಎಂದಿದ್ದರು.
ಇನ್ನು ಇದೀಗ ಇದೆ ಕ್ಯಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮತ್ತೊಬ್ಬ ನಟಿ ಮಾತನಾಡಿದ್ದಾರೆ. ಹೌದು ಹಿಂದಿ ಕಿರುತೆರೆಯ ಖ್ಯಾತ ನಟಿಯೊಬ್ಬರು ತಮಗಾದ ಕೆಟ್ಟ ಅನುಭವದ ಬಗ್ಗೆ ಇದೀಗ ಮನಬಿಚ್ಚಿ ಮಾತನಾಡಿದ್ದಾರೆ. ಹಾಗಾದರೆ ಆ ನಟಿ ಯಾರು? ಹೇಳಿದ್ದೇನು ನೋಡೋಣ ಬನ್ನಿ…
ಹಿಂದಿ ಕಿರುತೆರೆಯ ಖ್ಯಾತ ನಟಿ ರತನ್ ರಜಪೂತ್ ಸಂತೋಷಿ ಮಾ ಧಾರವಾಹಿಯ ಮೂಲಕ ಸಂತೋಷಿ ಎಂದೇ ಗುರುತಿಸಿಕೊಂಡಿದ್ದಾರೆ. ಇನ್ನು ಸದ್ಯ ನಟಿ ಕಿರುತೆರೆಯಿಂದ ಕೊಂಚ ದೂರ ಉಳಿದಿದ್ದು, ತಮ್ಮದೇ ಆದ ಯೂಟ್ಯೂಬ್ ಚಾನಲ್ ನಲ್ಲಿ ಆಗಾಗ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ.
ನಟಿ ರತನ್ ರಜಪೂತ್ ನಾನು ಸಿನಿಮಾರಂಗದಲ್ಲಿ ಕೆಲಸ ಕೇಳಿಕೊಂಡು ಹೋದಾಗ, ಒಬ್ಬ ಖ್ಯಾತ ನಿರ್ಮಾಪಕ ನಿನ್ನ ಕೂದಲು ಹಾಗೂ ಚರ್ಮ ಒಂದು ರೀತಿ ಇದೆ, ನಿನ್ನ ಕಂಪ್ಲೀಟ್ ಲುಕ್ ಬದಲಾಯಿಸುತ್ತೇನೆ ಅದಕ್ಕಾಗಿ ಹಣದ ಖರ್ಚು ನಾನು ನೋಡಿಕೊಳ್ಳುತ್ತೆನೆ. ಅದಕ್ಕಾಗಿ ನೀನು ನನ್ನ ಸ್ನೇಹಿತೆಯಾಗಿರಬೇಕು ಎಂದಿದ್ದರು.
ಅದಕ್ಕೆ ನಾನು ನಿಮ್ಮ ಮಗಳ ಸಮಾನ ನಾನು ಹೇಗೆ ಸ್ನೇಹಿತೆಯಾಗಿರಲಿ ಎಂದೇ ಅದಕ್ಕೆ ಅವರು ಸಿನಿಮಾರಂಗದಲ್ಲಿ ಇದು ಕಾಮನ್. ಒಂದು ವೇಳೆ ನನ್ನ ಮಗಳು ನಟಿಯಾಗಬೇಕು ಎಂದು ಬಯಸಿದರೆ ಅವಳ ಜೊತೆ ಕೂಡ ನಾನು ಮ,ಲಗುತ್ತೇನೆ ಎಂದರು ಇದನ್ನು ಕೇಳಿ ನಾನು ಅಲ್ಲಿಂದ ಹೊರಬಂದೆ. ನಂತರ ನಾನು ಎಂದಿಗೂ ಸಿನಿಮಾಗಳಲ್ಲಿ ನಟಿಸಲು ಪ್ರಯತ್ನಿಸಲಿಲ್ಲ ಎಂದು ತಮ್ಮ ಕೆಟ್ಟ ಅನುಭವದ ಬಗ್ಗೆ ನಟಿ ರತನ್ ಮಾತನಾಡಿದ್ದಾರೆ.