25 ಕೋಟಿ ಲಾಟರಿ ಗೆದ್ದ ಮೇಲೆ ಎಲ್ಲರ ಬದುಕು ಬದಲಾಗಿ ಬಿಡುತ್ತದೆ. ಆದರೆ ಇಲ್ಲಿ ಇದೀಗ ಒಬ್ಬ ವ್ಯಕ್ತಿಯ ಬದುಕು ಬದಲಾಗಿರುವ ರೀತಿ ನೋಡಿದರೆ ಖಂಡಿತವಾಗಿಯೂ ಶಾಕ್ ಆಗುತ್ತಿರಾ. ಆ 25 ಕೋಟಿ ಲಾಟರಿ ನನಗೆ ಹೊಡೆಯದೆ ಇದ್ದಿದ್ದರೆ ಎಷ್ಟೋ ಚೆನ್ನಾಗುರುತ್ತಿತ್ತು ಎಂದಿದ್ದಾರೆ ಆ ವ್ಯಕ್ತಿ. ಹಾಗಾದರೆ 25 ಕೋಟಿ ಗೆದ್ದಿದ್ದರು ಈ ವ್ಯಕ್ತಿ ಹೀಗೆ ಹೇಳಲು ಕಾರಣ ಏನು ತಿಳಿಸುತ್ತೇವೆ ಬನ್ನಿ..
ಕೇರಳದ ಓಣಂ ಲಾಟ್ರಿಯಲ್ಲಿ ಒಬ್ಬ ವ್ಯಕ್ತಿ ಬರೋಬ್ಬರಿ 25 ಕೋಟಿ ಲಾಟ್ರಿ ಗೆದ್ದಿರುವುದು ಬಹುತೇಕ ಎಲ್ಲರಿಗೂ ಸಹ ಗೊತ್ತೇ ಇರುತ್ತದೆ. ಆದರೆ ಟ್ಯಾಕ್ಸ್ ಎಲ್ಲಾ ಕಟ್ಟಾಗಿ ಸುಮಾರು 18 ಕೋಟಿ ಇವರ ಅಕೌಂಟ್ ಗೆ ಬರುತ್ತದೆ. ಆದರೆ ಅಲ್ಲಿ ಆಗಿದ್ದೆ ಬೇರೆ, ಒಮ್ಮೆ ಈ ವ್ಯಕ್ತಿ 25 ಕೋಟಿ ಗೆದಿದ್ದಾರೆ ಎಂದು ತಿಳಿದ ಮೇಲೆ ನ್ಯಾಶನಲ್ ಚಾನಲ್ ಹಾಗೂ ಅಲ್ಲಿನ ಸ್ಥಳಿಯ ವಾಹಿನಿಗಳು ಈ ವ್ಯಕ್ತಿಯ ಸಂದರ್ಶನ ಮಾಡಿದರು.
ಈ ವೇಳೆ ಆ ವ್ಯಕ್ತಿಗೆ ಎಲ್ಲರೂ ಈ 25 ಕೋಟಿ ಹಣವನ್ನು ಏನು ಮಾಡುತ್ತೀರಾ ಎಂದು ಕೇಳಿದ್ದರು. ಅದಕ್ಕೆ ಆ ವ್ಯಕ್ತಿ ಸದ್ಯಕ್ಕೆ ನಾನು ಏನು ಡಿಸೈಡ್ ಮಾಡಿಲ್ಲ ಎಂದು ಹೇಳುತ್ತಿದ್ದರು. ಆದರೆ ಇದೀಗ ಇಲ್ಲೇ ಸಮಸ್ಯೆ ಎದುರಾಗಿದೆ, ಇನ್ನು ಈ ವಿಷಯ ತಿಳಿದ ಇವರ ಕುಟುಂಬಸ್ಥರು ಇವರ ಮನೆಯ ಮುಂದೆ ಸಹಾಯ ಕೇಳಲು ಬಂದಿದ್ದಾರೆ.
ಇನ್ನು ಇವರ ಆಪ್ತರ ಜೊತೆಗೆ ಹಲವಾರು ಎಂಜಿಯೋಗಳು ಕೂಡ ಇವರ ಮನೆಯ ಮುಂದೆ ಇದೆ. ನಮಗೆ ಸಹಾಯ ಮಾಡಿ ನಮಗೆ ಸಹಾಯ ಮಾಡಿ ನಾವು ಕಷ್ಟಗಳಲ್ಲಿ ಇದ್ದೇವೆ ಎಂದು. ಇನ್ನು ಕೆಲವರು ಇವರನ್ನು ಎಲ್ಲಿ ನೋಡಿದರೂ, ನಾಡು ರಸ್ತೆಯಲ್ಲಿ ನಿಲ್ಲಿಸಿ ಹಣವನ್ನು ಕೇಳಿತ್ತಿದ್ದಾರೆ.
ಇನ್ನು ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಹಾಗೂ ಅಲ್ಲಿನ ಪಕ್ಕದ ಹಳ್ಳಿಯ ಜನರು ಕೂಡ ಇವರ ಮನೆಯ ಮುಂದೆ ಬರುತ್ತಿದ್ದಾರೆ. ಈ ಕಾರಣದಿಂದ ಇವರು ತಮ್ಮ ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಇನ್ನು ಅವರ ಸ್ನೇಹಿತರು ಕೂಡ ಇವರ ಬಳಿ ಸಹಾಯ ಕೇಳುತ್ತಿದ್ದಾರೆ.
ಇನ್ನು ಈ ಕಾರಣದಿಂದ ಇವರಿಗೆ ಮನಃಶಾಂತಿ ಇಲ್ಲದಂತಾಗಿದೆ. ಈ 25 ಕೋಟಿ ಯಾಕಾದ್ರು ಬಂತೋ, ಮೊದಲು ಆಟೋ ಓಡಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದೆ. ಆದರೆ ಈ 25 ಕೋಟಿ ಗೆದ್ದನಂತರ ಆ ಹಣ ಕೂಡ ಇನ್ನು ನನ್ನ ಅಕೌಂಟ್ ಗೆ ಬಂದಿಲ್ಲ.
ಚೆಕ್ಕನ್ನು ಹಾಗೆ ಇಟ್ಟಿದ್ದೇನೆ, ಆದರೂ ಕೂಡ ನನ್ನ ಮನಃಶಾಂತಿಯನ್ನ ಕಳೆದುಕೊಂಡಿದ್ದೇನೆ. ಇನ್ನು ಈ ಲಾಟ್ರಿ ಬರದೆ ಇದ್ದರೆ ಚೆನ್ನಾಗಿರುತ್ತಿತ್ತು ಎಂದು ಕೇರಳದ ಈ ಆಟೋ ಚಾಲಕ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…