ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ ಈಗಾಗಲೇ 10 ತಿಂಗಳೇ ಕಳೆದು ಹೋಗಿದೆ. ಅಪ್ಪು ಅವರು ಇನ್ನು ನಮ್ಮ ಜೊತೆ ಇಲ್ಲ ಎಂದು ನೆನೆದರೆ ನಿಜಕ್ಕೂ ಕಣ್ಣೀರು ಬರುತ್ತದೆ. ಅಂತಹ ಮಹಾತ್ಮನನ್ನು ಇಷ್ಟು ಬೇಗ ಕರೆದುಕೊಂಡು ಆ ದೇವರ ಬಹಳ ದೊಡ್ಡ ತಪ್ಪು ಮಾಡಿದ ಎಂದರೆ ತಪ್ಪಾಗುವುದಿಲ್ಲ.
ಇನ್ನು ಅಪ್ಪು ಅವರನ್ನು ಕಳೆದುಕೊಂಡು ನಮಗೆ ಇಷ್ಟು ದುಃಖವಾಗಿದ್ದರೆ, ಅವರನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಶ್ವಿನಿ ಅವರ ಪರಿಸ್ಥಿತಿ ಹೇಗಿರಬೇಕು ಎಂದು ನೀವೇ ಯೋಚನೆ ಮಾಡಿ. ಇನ್ನು ಇದೀಗ ಅಪ್ಪು ಅಭಿಮಾನಿಗಳು ಮಾಡಿರುವ ಕೆಲಸ ಅಶ್ವಿನಿ ಅವರ ಮುಖದ ಮೇಲೆ ಖುಷಿ ತಂದಿದೆ.
ಹೌದು ಅಪ್ಪು ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ಹೋದ ನಂತರ ಅವರ ನೆನಪುಗಳಲ್ಲೇ ಅದೆಷ್ಟೋ ಜನ ಬದುಕುತ್ತಿದ್ದಾರೆ. ಇನ್ನು ಅವರ ಅಭಿಮಾನಿಗಳು ಅಪ್ಪು ನಡೆದ ದಾರಿಯಲ್ಲೇ ಇದೀಗ ನಡೆಯುತ್ತಿದ್ದಾರೆ. ಅಪ್ಪು ರೀತಿಯೇ ದಿನಕ್ಕೊಂದು ಒಳ್ಳೆಯ ಕೆಲಸ ಮಾಡುತ್ತಾ ಅಪ್ಪು ಅವರನ್ನು ನಮ್ಮೊಂದಿಗೆ ಜೀವಂತವಾಗಿದ್ದಾರೆ ಎನ್ನುವ ಭಾವನೆ ಬರುವಂತೆ ಮಾಡುತ್ತಿದ್ದಾರೆ.
ಇನ್ನು ರಾಜ್ಯದ ಅದೆಷ್ಟೋ ರಸ್ತೆಗಳಿಗೆ ಪುನೀತ್ ರಾಜ್ ಕುಮಾರ್ ಹೆಸರನ್ನು ಇಡಲಾಗಿದೆ. ಇನ್ನು ಅದೆಷ್ಟೋ ಜಾಗಗಳಲ್ಲಿ ಪುನೀತ್ ಅವರ ಪುತ್ಥಳಿಗಳನ್ನು ಸಹ ಸ್ಥಾಪಿಸಲಾಗಿದೆ. ಇನ್ನು ಇದೆ ರೀತಿ ಹೊಸಪೇಟೆಯಲ್ಲಿ ಸಹ ಅಪ್ಪು ಅವರ ಪ್ರತಿಮೆ ಸ್ಥಾಪಿಸಲಾಗುತ್ತಿದ್ದು, ಸದ್ಯ ಈ ವಿಷಯ ಸಖತ್ ವೈರಲ್ ಆಗುತ್ತಿದೆ.
ಹೌದು ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇನ್ನು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಲಕ್ಷಗಳ ಸಂಖ್ಯೆಯಲ್ಲಿ ಜನ ಸೇರಿದ್ದರು.
ಇನ್ನು ಇದೀಗ ಇದೆ ರೀತಿಯಲ್ಲಿ 21 ಅಡಿ ಎತ್ತರದ ಪ್ರತಿಮೆಯನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ನಗರದಲ್ಲಿ ಸ್ಥಾಪಿಸಲಾಗಿದೆ. ಇನ್ನು ಸದ್ಯ ಈ ಪ್ರೀತಿಮೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಇನ್ನು ಇದೀಗ ಅಪ್ಪು ಅವರ ಮೇಲೆ ಅವರ ಅಭಿಮಾನಿಗಳು ಇಟ್ಟಿರುವ ಪ್ರೀತಿ ನೋಡಿ ಅಶ್ವಿನಿ ಅವರು ತುಂಬಾ ಖುಷಿ ಪಟ್ಟಿದ್ದಾರೆ. ಬೇರೆ ರಾಜ್ಯಗಳಲ್ಲಿ ಸಹ ಅಪ್ಪು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…