ನಮಸ್ಕಾರ ವೀಕ್ಷಕರೇ, ಕನ್ನಡ ಚಿತ್ರರಂಗದಲ್ಲಿ ಇದೀಗ ಸಾಲು ಸಾಲು ಸಿನಿಮಾಗಳು ತೆರೆ ಕಾಣುತ್ತಲೇ ಇದೆ, ಮತ್ತು ಅಭಿಮಾನಿಗಳಿಗಂತೂ ಇದು ಹಬ್ಬದ ಊಟ ಎಂದೆ ಹೇಳಬಹುದು. ಇನ್ನು ಬರುವ ತಿಂಗಳುಗಳಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿ ಕಾಯುತ್ತಿದ್ದು ಹಲವಾರು ಸಿನಿಮಾಗಳು ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಿಸುತ್ತಾ ಇದೆ.
ಹಲವು ಸಿನಿಮಾಗಳು ಟೀಸರ್ ನಲ್ಲಿಯೇ ಸಖತ್ ಹೈಪನ್ನು ಕ್ರಿಯೇಟ್ ಮಾಡಿದೆ. ಹೀಗೆ ಬಹುನಿರೀಕ್ಷಿತ ಸಿನಿಮಾಗಳಲ್ಲಿ ತೋತಾಪುರಿ ಸಿನಿಮಾ ಕೂಡ ಒಂದು . ಇನ್ನು ತೋತಾಪುರಿ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ನಟಿಸುತ್ತಿದ್ದು, ಅವರು ಈ ಹಿಂದೆ ನಟಿಸಿದ್ದ ನೀರ್ ದೋಸೆ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಅವರು ಕೈಜೋಡಿಸಿದ್ದಾರೆ.
ಇದು ಬಹಳ ಮಟ್ಟಿಗೆ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಕನ್ನಡ ಈ ಹಿಂದೆಯೇ ನೀರ್ ದೋಸೆ ಚಿತ್ರಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು ಮತ್ತು ಕಾಮಿಡಿ ಕಾಂಬಿನೇಷನ್ ಇದು ಬಹಳಷ್ಟು ಹಿಟ್ ಆಗಿ ಪರಿಣಮಿಸಿತ್ತು. ಇದೀಗ ಮತ್ತೆ ಅವರಿಬ್ಬರ ಜೋಡಿ ಯಾವ ಮಟ್ಟಿಗೆ ಸಕ್ಸಸ್ ಆಗಲಿದೆ ಎಂದು ಕಾದು ನೋಡಬೇಕಿದೆ.
ಇನ್ನು ಈ ಚಿತ್ರದಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಿದೆ. ಇನ್ನು ಈ ಸಿನಿಮಾದಲ್ಲಿ ಸುಮನ್ ರಂಗನಾಥ್ ಅದಿತಿ ಪ್ರಭುದೇವ್ , ಡಾಲಿ ಧನಂಜಯ ಹೀಗೆ ಹಲವಾರು ಸಪೋರ್ಟಿಂಗ್ ಕ್ಯಾರೆಕ್ಟರ್ಗಳು ಕೂಡ ಇದೆ. ಇನ್ನು ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಬಹಳ ಸದ್ದು ಮಾಡಿದೆ.
ಬರೋಬ್ಬರಿ ಮೂರು ಮಿಲಿಯನ್ ಗಿಂತ ಅಧಿಕ ಜನ ಟ್ರೈಲರ್ ಅನ್ನು ವೀಕ್ಷಿಸಿದ್ದಾರೆ. ಈ ಸುದ್ದಿಗಳೇ ಈ ಸಿನಿಮಾದ ಹೈಪ್ ಹೆಚ್ಚಿಸುತ್ತಿದೆ. ಮತ್ತು ಈ ಸಿನಿಮಾದ ಸಾಂಗ್ ಗಳು ಕೂಡ ಬಹಳಷ್ಟು ಸದ್ದು ಮಾಡಿದೆ. ಇನ್ನು ಸಿನಿಮಾದ ಪ್ರಮೋಷನ್ ಗೆ ಅಧಿತಿ ಪ್ರಭುದೇವ ಅವರು ತೆರಳಿದ್ದಾಗ ಒಂದು ಬಸ್ ನ ಮೇಲೆ ಅವರ ತೋತಾಪುರಿ ಸಿನಿಮಾದ ಪೋಸ್ಟರ್ ಅಂಟಿಸಲಾಗಿತ್ತು.
ಇನ್ನು ಅದನ್ನು ವೀಕ್ಷಿಸಿ ಅಲ್ಲೇ ಪಕ್ಕದಲ್ಲಿದ್ದ ಬಾ*ರ್ ಮುಂದೆ ತೆರಳುವಾಗ ಅದಿತಿ ಪ್ರಭುದೇವ್ ಅವರಿಗೆ ಬಿ*ಯರ್ ಕೊಡ್ರಪ್ಪ ಎಂದು ಕಾಲೆಳೆದಿದ್ದಾರೆ ನಿರ್ದೇಶಕರು. ಇನ್ನು ಈ ಚಿತ್ರದಲ್ಲಿರುವ ಬಾಗ್ಲು ತೆಗಿ ಮೇರಿ ಜಾನ್ ಹಾಡಂತೂ ಸಕ್ಕತ್ತು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ದಿನಗಳಲ್ಲಿ ಇದು ಯಾವ ಮಟ್ಟಿಗೆ ಹಿಟ್ಟು ನೀಡುತ್ತದೆ ಮತ್ತು ಯಾವ ರೀತಿಯಾಗಿ ಸಕ್ಸಸ್ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಮತ್ತು ಸಿನಿಮಾ ತಂಡ ಅದರ ಪ್ರಮೋಷನ್ ಅಲ್ಲೂ ಕೂಡ ಬಿಸಿಯಾಗಿದ್ದು ಅವರಿಗೆ ಯಶಸ್ಸು ಸಿಗಲಿ ಎಂದು ಹಲವರು ಬಯಸಿದ್ದಾರೆ.