ಕನ್ನಡ ಚಿತ್ರರಂಗದ ಮೇರು ನಟಿ ಎಂದರೆ ಅದು ನಮ್ಮ ಲೀಲಾವತಿ ಅಮ್ಮ, ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ ಮಾತಿನಲ್ಲಿ ಹೇಳಲಾಗದು. ಇನ್ನು ಸದ್ಯ ಲೀಲಾವತಿಯವರು ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದು ಬಿಟ್ಟಿದ್ದಾರೆ. ಇನ್ನು ತಮ್ಮ ಮಗ ವಿನೋದ್ ಜೊತೆಗೆ ತಮ್ಮ ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.
ಇನ್ನು ತಮ್ಮ ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಾ ಜೀವನ ನಡೆಸುತ್ತಿರುವ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಅವರು ತಮ್ಮನ್ನು ತಾವು ಸಮಾಜಮುಖಿ ಕೆಲಸಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಇನ್ನು ಅದೆಷ್ಟೋ ಜನರಿಗೆ ಲೀಲಾವತಿಯವರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
ಕಳೆದ ತಿಂಗಳು ಅ,ನಾರೋಗ್ಯದಿಂದ ಬಳಲುತ್ತಿದ್ದ ಲೀಲಾವತಿ ಅವರನ್ನು ಚಿತ್ರರಂಗದ ಅನೇಕ ಕಲಾವಿದರು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿಕೊಂಡಿದ್ದರು. ಇನ್ನು ಡಿ ಬಾಸ್ ದರ್ಶನ್ ಅವರು ಕೂಡ ಲೀಲಾವತಿ ಅವರಿಗೆ ಕರೆ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿಕೊಂಡಿದ್ದರು.
ಇನ್ನು ತಮ್ಮನ್ನು ತಾವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಲೀಲಾವತಿ ಹಾಗೂ ವಿನೋದ್ ರಾಜ್ ಇತ್ತೀಚೆಗೆ ಆಸ್ಪತ್ರೆ ಒಂದನ್ನು ಕಟ್ಟಿಸಿದ್ದರು. ಇನ್ನು ಈ ಆಸ್ಪತ್ರೆ ಅನಾವರಣಕ್ಕೆ ಸಿ ಎಂ ಬೊಮ್ಮಾಯಿ ಅವರು ಬಂದಿದ್ದರು. ಇನ್ನು ಇದೀಗ ಈ ಆಸ್ಪತ್ರೆಯ ಬಗ್ಗೆ ಡಿ ಬಾಸ್ ದರ್ಶನ್ ಮಾತನಾಡಿದ್ದಾರೆ. ಹಾಗಾದರೆ ದರ್ಶನ್ ಹೇಳಿದ್ದೇನು ನೋಡೋಣ ಬನ್ನಿ..
ನಟಿ ಲೀಲಾವತಿ ಅವರ ಬಹು ದಿನದ ಕನಸ್ಸು ಸೆಪ್ಟೆಂಬರ್ 28 ರಂದು ನನಸ್ಸಾಗಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಲೀಲಾವತಿ ತಮ್ಮ ಸ್ವಂತ ಖರ್ಚಿನಲ್ಲಿ ನೆಲಮಂಗಳದ ಸೋಲದೇವನ ಹಳ್ಳಿಯಲ್ಲಿ ಕಟ್ಟಿಸಿರುವ ಅಸ್ಪತ್ರೆಯನ್ನು ಕರ್ನಾಟಕದ ಸಿ ಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ.
ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡಬೇಕೆಂದು ಕಾಯುತ್ತಿದ್ದ ಲೀಲಾವತಿ, ಕೊನೆಗೂ ಬಡಜನರಿಗೆ ಉಪಯೋಗವಾಗುವಂತೆ ಅಸ್ಪತ್ರೆಯೊಂದನ್ನು ಕಟ್ಟಿಸಿದ್ದಾರೆ. ಇನ್ನು ಈ ಬಗ್ಗೆ ಇದೀಗ ನಟ ದರ್ಶನ್ ಮಾತನಾಡಿದ್ದು, ಲೀಲಾವತಿ ಅವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂತಹ ಒಳ್ಳೆಯ ಗುಣ ದೊಡ್ಡ ಮನಸ್ಸಿರುವ ವ್ಯಕ್ತಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ಲೀಲಾವತಿ ಅಮ್ಮನವರ ಈ ಕೆಲಸ ಅದೆಷ್ಟೋ ಜನರಿಗೆ ಮಾದರಿಯಾಗಿದೆ. ನಾನು ಸಹ ಶೀಘ್ರದಲ್ಲೇ ಆಸ್ಪತ್ರೆಗೆ ಭೇಟಿ ನೀಡುತ್ತೇನೆ ಎಂದಿದ್ದಾರೆ ದರ್ಶನ್. ಇನ್ನು ಈ ವಿಷಯ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..