ಸೋಷಿಯಲ್ ಮಿಡಿಯಾದಲ್ಲಿ ತನ್ನ ಹಾಡಿನ ಮೂಲಕ ಬಹಳ ಸದ್ದು ಮಾಡುತ್ತಿದ್ದ ವ್ಯಕ್ತಿ ಕಾಫಿ ನಾಡು ಚಂದು. ಯಾವಾಗಲೂ ವಿಭಿನ್ನವಾದ ಶೈಲಿಯಲ್ಲಿ ಹುಟ್ಟುಹಬ್ಬದ ಹಾಡುಗಳನ್ನು ಬರೆದು ಅದನ್ನು ಹಾಡುವ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಮೊದ ಮೊದಲು ತನ್ನ ಸ್ನೇಹಿತರಿಗೆ ಹಾಗೂ ಆತ್ಮೀಯರಿಗೆ ಹುಟ್ಟುಹಬ್ಬದ ಶುಭ ಕೊರಲು ಹ್ಯಾಪಿ ಬರ್ಥ್ ಡೇ ಎಂದು ಹಾಡನ್ನು ಹಾಡಿ ಅದನ್ನು ತನ್ನ ಸೋಷಿಯಲ್ ಮೀಡಿಯಾದ ಅಕೌಂಟ್ ನಲ್ಲಿ ಹಂಚಿಕೊಳ್ಳುತ್ತಿದ್ದರು. ಈ ಹಾಡು ಎಷ್ಟರ ಮಟ್ಟಿಗೆ ಫ್ಹೇಮಸ್ ಆಯಿತು ಎಂದರೆ, ಎಲ್ಲರೂ ಕಾಫಿ ನಾಡು ಚಂದು ಅವರನ್ನು ಅನುಕರಿಸಲು ಶುರು ಮಾಡಿದರು.
ಇನ್ನು ಸಾಕಷ್ಟು ಸೋಷಿಯಲ್ ಮಿಡಿಯಾದಲ್ಲಿ ಮೊದ ಮೊದಲು ಟ್ರೋಲ್ ಆದ ಕಾಫಿ ನಾಡು ಚಂದು ನಂತರ ಬಹಳ ಜನಪ್ರಿಯತೆ ಕೂಡ ಪಡೆದುಕೊಂಡರು. ಇನ್ನು ಇದೀಗ ಚಂದು ಯಾವುದೇ ಸ್ಟಾರ್ ಗೆ ಕಡಿಮೆ ಇಲ್ಲದಂತೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಫಾಲೋವರ್ಸ್ ಹೊಂದಿದ್ದಾರೆ.
ಇನ್ನು ತನ್ನ ಚಟುವಟಿಕೆಗಳ ಜೊತೆಗೆ ಕಾಫಿ ನಾಡು ಚಂದು ತನ್ನ ದುಡಿಮೆಯಲ್ಲಿ ಸಹ ತುಂಬಾ ಪ್ರಾಮಾಣಿಕ. ಬೆಳ್ಳಗೆ ಆಟೋ ಓಡಿಸಿ ಸಂಜೆಯ ನಾಲ್ಕರ ನಂತರ ಹಾಡನ್ನು ಹಾಡುತ್ತಾನೆ ಚಂದು. ಇನ್ನು ಆಟೋ ಓಡಿಸಿದ ದುಡ್ಡಿನಲ್ಲಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ ಚಂದು.
ಇನ್ನು ಇತ್ತೀಚೆಗೆ ಕಾಫಿ ನಾಡು ಚಂದು ಎಷ್ಟು ಫ್ಹೇಮಸ್ ಆಗಿದ್ದಾರೆ ಎಂದರೆ ಎಲ್ಲಿ ನೋಡಿದರು ಯಾವ ರೀಲ್ಸ್ ನೋಡಿದರೂ ಅವರ ಅನುಕರಣೆ ನೋಡಬಹುದು. ಇನ್ನು ಕಾಫಿ ನಾಡು ಚಂದು ಅನೇಕ ಸೆಲೆಬ್ರೆಟಿಗಳ ಮೇಲೆ ಕೂಡ ಹಾಡನ್ನು ಮಾಡಿ ಹಾಡಿದ್ದಾರೆ.
ನಿರೂಪಕಿ ಅನುಶ್ರೀ, ಶಿವಣ್ಣ, ಅಪ್ಪು ಸೇರಿದಂತೆ ಇವರ ಮೇಲೆ ಚಂದು ಹಾಡು ಬರೆದು ಹಾಡಿದ್ದಾರೆ. ಆದರೆ ಇತ್ತೀಚೆಗೆ ಚಂದು ಕಾಣೆಯಾಗಿಬಿಟ್ಟಿದ್ದರು. ಕಾಫಿ ನಾಡು ಚಂದು ಅವರ ಯಾವುದೇ ಹಾಡು ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ಇದೀಗ ಮತ್ತೊಂದು ಹಾಡಿನ ಮೂಲಕ ಚಂದು ಎಲ್ಲರನ್ನು ರಂಜೆಸಿದ್ದಾರೆ.
ಮಳೆಯಲ್ಲಿ ಛತ್ರಿ ಇಡಿದು ಕಾಫಿ ನಾಡು ಚಂದು ಸಿಂಡ್ರೆಲ್ಲಾ ಹೋ ಸಿಂಡ್ರೆಲಾ ಇಡ್ಕೊ ಬಾರೆ ಅಂಬರೆಲ್ಲಾ ಎಂದು ಹಾಡು ಹಾಡುತ್ತಾ ಕುಣಿದಿದ್ದಾರೆ. ಈ ವಿಡಿಯೋ ಮತ್ತು ಹಾಡು ನೋಡಲು ತುಂಬಾ ತಮಾಷೆಯಾಗಿದ್ದು, ಈ ವಿಡಿಯೋ ನೋಡಿ ಎಲ್ಲರೂ ಹೊಟ್ಟೆ ಹುಣ್ಣಾಗುವವರೆಗೂ ನಕ್ಕಿದ್ದಾರೆ. ಇನ್ನು ಈ ವೀಡಿಯೋ ನಿಮಗೂ ಇಷ್ಟವಾದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..