ಸೋಷಿಯಲ್ ಮಿಡಿಯಾದಲ್ಲಿ ಹಾಸ್ಯ ವಿಡಿಯೋಗಳು ಸಕತ್ ವೈರಲ್ ಆಗುತ್ತಾ ಇರುತ್ತದೆ. ಕೆಲವು ಹಾಸ್ಯ ವಿಡಿಯೋಗಳು ತುಂಬಾ ಚೆನ್ನಾಗಿದ್ದು, ಈ ರೀತಿಯ ವಿಡಿಯೋಗಳಿಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಸ್ ಕೂಡ ಬರುತ್ತದೆ. ಇನ್ನು ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಹಾಸ್ಯ ವಿಡಿಯೋಗಳ ಮೂಲಕವೇ ಸಾಕಷ್ಟು ಜನರ್ಪಿಯತೆ ಪಡೆದುಕೊಂಡವರು ನಿಖಿಲ್ ಹಾಗೂ ನಿಷಾ.
ನಿಖಿಲ್ ಹಾಗೂ ನಿಷಾ ಈ ಹೆಸರನ್ನು ನೀವು ಕೇಳಿಯೇ ಇರುತ್ತೀರಾ, ಈ ಇಬ್ಬರೂ ಅಣ್ಣ ತಂಗಿ. ತಮ್ಮ ಮನೆಯಲ್ಲಿನ ದೈನಂದಿನ ಚಟುವಟಿಕೆಗಳನ್ನು ಹಾಸ್ಯದ ರೀತಿ ವಿಡಿಯೋ ಮಾಡಿ ಅದನ್ನು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇನ್ನು ತಮ್ಮ ವಿಡಿಯೋಗಳ ಮೂಲಕ ಎಲ್ಲರಿಗೂ ಸಾಕಷ್ಟು ಮನರಂಜನೆ ನೀಡುವ ಈ ಜೋಡಿ, ಇತ್ತೀಚೆಗೆ ಇವರ ಜೊತೆಗೆ ಮಧು ಗೌಡ ಕೂಡ ಸೇರಿಕೊಂಡಿದ್ದಾರೆ. ಹೌದು ಮಧು ಗೌಡ ಹೆಸರು ಕೂಡ ನೀವು ಕೇಳಿರುತ್ತೀರಾ, ಈಕೆ ಕೂಡ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ರೀಲ್ಸ್ ಮಾಡುವ ಮೂಲಕ ಹೆಸರು ಮಾಡಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾ ಸ್ಟಾರ್ ಗಳಾದ ಈ ಇಬ್ಬರೂ ಆಗಾಗ ವಿಡಿಯೋಗಳನ್ನು ಮಾಡಿ ತಮ್ಮ ಕಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುತ್ತಾರೆ. ಇನ್ನು ಇದೀಗ ಮಧು ಗೌಡ ಹಾಗೂ ನಿಷಾ ಇಬ್ಬರೂ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ.
ಮೈಸೂರು ದಸರಾ ಹಬ್ಬ ಎಷ್ಟು ವಿಶೇಷ ಎನ್ನುವುದು ಎಲ್ಲರಿಗೂ ಗೊತ್ತು, ದಸರಾ ಸಮಯದಲ್ಲಿ ಮೈಸೂರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅದರಲ್ಲಿ ಒಂದು ಆಹಾರ ಮೇಳ, ಈ ಆಹಾರ ಮೇಳದಲ್ಲಿ ಎಲ್ಲ ರೀತಿಯ ಆಹಾರಗಳನ್ನು ನೀವು ಸವಿಯಬಹುದು.
ಇನ್ನು ಈ ಆಹಾರ ಮೇಳಕ್ಕೆ ಮಧು ಗೌಡ ಜೊತೆಗೆ ನಿಷಾ ಹಾಗೂ ಅವರ ಸ್ನೇಹಿತೆ ದಿಶಾ ಭೇಟಿ ನೀಡಿದ್ದಾರೆ. ಇನ್ನು ಅಲ್ಲಿನ ಕೆಲವು ತಿಂಡಿಗಳನ್ನು ತಿಂದು ಅದರ ರೇಟಿಂಗ್ ನೀಡಿದ್ದಾರೆ. ಇನ್ನು ಈ ವಿಡಿಯೋ ಸದ್ಯ ಸೂಚಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಆಹಾರ ಮೇಳದಲ್ಲಿ ಗೋಬಿ, ಪಾನಿಪೂರಿ, ಮಟ್ಕಾ ಕುಕ್ಫಿ, ಸೇರಿದಂತೆ ಇನ್ನು ಹಲವಾರು ತಿಂಡಿಗಳನ್ನು ತಿಂದು ಅದರ ರೇಟಿಂಗ್ ನೀಡಿದ್ದಾರೆ. ಸದ್ಯ ಈ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಮಧು ಗೌಡ ಅವರು ಹಂಚಿಕೊಂಡಿದ್ದು, ಸದ್ಯ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..