ಕನ್ನಡದ ಓ ಟಿ ಟಿ ಬಿಗ್ ಬಾಸ್ ಸೀಸನ್ ನಲ್ಲಿ ತಮ್ಮ ಮಾತು, ವ್ಯಕ್ತಿತ್ವ ಹಾಗೂ ತಮ್ಮ ಆಟದ ಮೂಲಕ ಘಮನ ಸೆಳೆದು ಬಿಗ್ ಬಾಸ್ ಸೀಸನ್ 9ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಸ್ಪರ್ಧಿ ರಾಕೇಶ್ ಅಡಿಗ. ಇನ್ನು ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ರಾಕೇಶ್ ಅವರ ಪ್ರಾಕ್ಟಿಕಲ್ ಮಾತು ಎಲ್ಲರ ಗಮನ ಸೆಳೆದಿತ್ತು.
ಪೂರ್ತಿ ಸೋನು ಗೌಡ ಹಾಗೂ ಜಯಶ್ರೀ ಜೊತೆಗೆ ಅವರು ಬಹಳ ಆಪ್ತರಾಗಿದ್ದರು. ತಾವು ಕೇವಲ ಪ್ಲರ್ಟ್ ಮಾಡುವುದಾಗಿಯೂ ಯಾವುದೇ ಸೀರಿಯಸ್ ರಿಲೇಷನ್ ಶಿಪ್ ಗೆ ಸಿದ್ಧವಿಲ್ಲವೆಂದು ರಾಕೇಶ್ ಹೇಳಿದ್ದರು. ಇನ್ನು ಬಿಗ್ ಬಾಸ್ ಟಿವಿ ಸೀಸನ್ ಗೆ ಬಂದ ನಂತರ ರಾಕೇಶ್ ಕೊಂಚ ಸೈಲೆಂಟ್ ಆಗಿ ಬಿಟ್ಟಿದ್ದಾರೆ.
ಬಿಗ್ ಬಾಸ್ ಟಿವಿ ಸೀಸನ್ ನಲ್ಲಿ ರಾಕೇಶ್ ಯಾವ ಹುಡುಗಿ ಸ್ಪರ್ಧಿಗಳ ಬಳಿ ಮಾತನಾಡಿದನ್ನು ನಾವು ಘಮಣಿಸಿರಲಿಲ್ಲ. ಇನ್ನು ತುಂಬಾ ಸೈಲೆಂಟ್ ಆಗಿದ್ದ ರಾಕೇಶ್ ಇದೀಗ ಮತ್ತೆ ತಮ್ಮ ಟ್ರ್ಯಾಕ್ ಗೆ ಮರಳಿದ್ದಾರೆ. ಹಾಗಾದರೆ ರಾಕೇಶ್ ಮಾಡಿದ್ದೇನು ನೋಡೋಣ ಬನ್ನಿ..
ಇಷ್ಟು ದಿನ ತುಂಬಾ ಸೈಲೆಂಟ್ ಆಗಿದ್ದ ರಾಕೇಶ್ ಇದೀಗ ತಮ್ಮ ವಲಯಕ್ಕೆ ಮರಳಿದ್ದಾರೆ. ತಮ್ಮ ಗೆಳೆಯ ರೂಪೇಶ್ ಶೆಟ್ಟಿಯ ಜೊತೆಗೆ ತುಂಬಾ ಆಪ್ತರಾಗಿರುವ ಸಾನಿಯಾ ಅಯ್ಯರ್ ಅವರನ್ನು ತಾವು ಪ್ರೀತಿಸುತ್ತಿರುವುದಾಗಿ, ರಾಕೇಶ್ ಹೇಳಿಕೆ ನೀಡಿದ್ದಾರೆ. ಸದ್ಯ ಈ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ರಾಕೇಶ್ ಸಾನಿಯಾ ಅವರ ಲೋಟದಲ್ಲಿ ಕಾಫ್ಹಿ ತೆಗೆದುಕೊಂಡು ಕುಡಿಯುತ್ತಿದ್ದರು. ಇನ್ನು ಇದನ್ನು ನೋಡಿದ ಆರ್ಯವರ್ಧನ್ ಗುರೂಜಿ ಏನಿದು ಸಾನಿಯಾಳ ಲೋಟದಲ್ಲಿ ಏಕೆ ಕಾಫ್ಹಿ ಕುಡಿಯುತ್ತಿಡಿಯಾ ಎಂದು ಕೇಳಿದರು. ಇದಕ್ಕೆ ರಾಕೇಶ್, ಸಾನಿಯಾಳನ್ನು ಲವ್ ಮಾಡುತ್ತಿದ್ದೇನೆ, ಅದಕ್ಕೆ ಅವಳ ಲೋಟದಲ್ಲಿ ಕಾಫ್ಹಿ ಕುಡಿಯುತ್ತಿದ್ದೇನೆ ಎಂದಿದ್ದಾರೆ.
ಇದನ್ನು ಕೇಳಿದ ಆರ್ಯವರ್ಧನ್ ಗುರೂಜಿ ಸಾನಿಯಾ ರೂಪೇಶ್ ಗೆ ಬೀಳುತ್ತಿಲ್ಲ ಎಂದರೆ ನಿನಗೆಲ್ಲಿಂದ ಬೀಳುತ್ತಾಳೆ ಹೇಳು ಎಂದಿದ್ದಾರೆ. ಇನ್ನು ಇದಕ್ಕೆ ಉತ್ತರಿಸಿದ ರಾಕೇಶ್ ನಾನು ಬಸ್ ಇದ್ದ ಹಾಗೆ, ನಾನು ಹೋಗಿ ಹಾರನ್ ಹೊಡೆಯುತೇನೆ, ಹತ್ತಿದರೆ ಹತ್ತಲಿ ಇಲ್ಲವಾದರೆ ಮುಂದಕ್ಕೆ ಹೋಗುತ್ತೇನೆ ಎಂದಿದ್ದಾರೆ.
ಇನ್ನೊಂದು ಕಡೆ ರೂಪೇಶ್ ಹಾಗೂ ಕಾವ್ಯಶ್ರೀ ಹತ್ತಿರವಾಗುತ್ತಿದ್ದಾರೆ. ಇನ್ನು ಇದು ಸಾನಿಯಾಗೆ ಸಹಿಸಲು ಆಗುತ್ತಿಲ್ಲ. ಇನ್ನು ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಕಥೆ ಹುಟ್ಟಿಕೊಳ್ಳುತ್ತಿದ್ದು ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು ಈ ಪುಟಕ್ಕೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಾಮೆಂಟ್ ಬಾಕ್ಸನಲ್ಲಿ ತಿಳಿಸಿ..