ತನ್ನ ಚಟಪಟ ಮಾತಿನ ಮೂಲಕ ಕರುನಾಡ ಅದೆಷ್ಟೋ ಜನರ ಹೃದಯದಲ್ಲಿ ಮನೆ ಮಾಡಿರುವ ಪುಟಾಣಿ ಹುಡುಗಿ ವಂಶಿಕಾ ಅಂಜಲಿ ಕಶ್ಯಪ. ವಂಶಿಕಾಳ ಹೆಸರು ಇದೀಗ ಕಿರುತೆರೆಯಲ್ಲಿ ಬಹಳನೇ ಫೇಮಸ್. ಬಾಲನಟನಾಗಿ ಸಾಕಷ್ಟು ಗುರುತಿಸಿಕೊಂಡಿದ್ದ ಮಾಸ್ಟರ್ ಆನಂದ ಮಗಳೇ ಈ ವಂಶಿಕಾ ಅಂಜನಿ ಕಶ್ಯಪ.
ಮಾಸ್ಟರ್ ಆನಂದ್ ಹೇಗೆ ಚಿಕ್ಕ ವಯಸ್ಸಿನಲ್ಲಿ ಬಾಲ ಕಲಾವಿದನಾಗಿ ತಮ್ಮ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಮಪಾದಿಸಿಕೊಂಡಿದ್ದರು. ಅದೇ ರೀತಿ ವಂಶಿಕಾ ಕೂಡ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಜನಪ್ರಿಯತೆ ಪಡೆದು ಕೊಂಡಿದ್ದಾರೆ.
ಇನ್ನು ವಂಶಿಕಾ ಪುಟಾಣಿ ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ನಮ್ಮಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಗಳನ್ನು ಗೆದ್ದು ವಂಶಿಕಾ ಕನ್ನಡಿಗರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.
ಇನ್ನು ವಂಶಿಕಾ ಇತ್ತೀಚೆಗೆ ಒಂದು ಜಾಹೀರಾತಿನಲ್ಲಿ ಸಹ ಕಾಣಿಸಿಕೊಂಡಿದ್ದರು. ಇನ್ನು ಈ ಮೂಲಕ ವಂಶಿಕಾ ಕಿರುತೆರೆ ಲೋಕದಲ್ಲಿ ಬಹಳ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ವಂಶಿಕಾಳಿಗೆ ಇದೀಗ ಸಿನಿಮಾ ಆಫ್ಹರ್ ಗಳು ಕೂಡ ಹರಿಸಿ ಬರುತ್ತಿದೆಯಂತೆ. ಇನ್ನು ಶೀಘ್ರದಲ್ಲೇ ಸಿನಿಮಾರಂಗಕ್ಕೂ ಕೂಡ ವಂಶಿಕಾ ಎಂಟ್ರಿ ನೀಡಲಿದ್ದಾರೆ.
ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ವಂಶಿಕಾ ಅದೆಷ್ಟೋ ಸ್ಕಿಟ್ ಗಳಲ್ಲಿ ಅದ್ಭುತವಾಗಿ ನಟಿಸಿ, ಯಾವುದೇ ದೊಡ್ಡ ಸ್ಟಾರ್ ನಟಿಗೂ ಕಡಿಮೆ ಇಲ್ಲದಂತೆ ಅಭಿನಯಿಸಿದ್ದರು. ಇನ್ನು ವಂಶಿಕಾ ಅಭಿನಯಕ್ಕೆ ಜಡ್ಜ್ಸ್ ಗಳಾದ ಶೃತಿ ಹಾಗೂ ಸೃಜನ್ ಲೋಕೇಶ್ ಬೆರಗಾಗಿದ್ದರು. ಇನ್ನು ವಂಶಿಕಾ ತನ್ನ ತಂದೆಯನ್ನು ಮೀರಿಸುತ್ತಾಳೆ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇನ್ನು ಇದೀಗ ವಂಶಿಕಾ ನಿರೂಪಕಿಯಾಗಿ ಸಹ ಎಂಟ್ರಿ ಕೊಡಲಿದ್ದಾರೆ. ಹೌದು ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ಈ ಬಾರಿ ನಿರಂಜನ್ ದೇಶ್ ಪಾಂಡೆ ಜೊತೆಗೆ ವಂಶಿಕಾ ಕೂಡ ನಿರೂಪಣೆ ಮಾಡಲಿದ್ದು, ಇನ್ನು ಸದ್ಯ ಈ ಪ್ರೊಮೋ ಬಿಡುಗದೆಯಾಗಿದ್ದು, ಸದ್ಯ ಸಖತ್ ವೈರಲ್ ಆಗುತ್ತಿದೆ.
ಇನ್ನು ಪುಟಾಣಿ ವಂಶಿಕಾ ತನ್ನ ಮಾತಿನ ಮೂಲಕವೇ ಅದೆಷ್ಟೋ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ವಂಶಿಕಾ ಮತ್ತು ಮಾಸ್ಟರ್ ಆನಂದ್ ಶಾಲೆಗೆ ಹೋಗಿ ಬರುತ್ತಿರುವಾಗ ಅಲ್ಲಿನ ಅದೆಷ್ಟೋ ಶಾಲೆ ಮಕ್ಕಳು ಹಾಗೂ ಅಲ್ಲಿನ ಕೆಲವು ಅಭಿಮಾನಿಗಳು ವಂಶಿಕಾ ವಂಶಿಕಾ ಎಂದು ಸೆಲ್ಫಿಗಾಗಿ ಮುಗಿ ಬಿದ್ದಿದ್ದಾರೆ. ಇನ್ನು ವಂಶಿಕಾ ಒಂದೇ ಸಲ ಅಷ್ಟು ಜನರನ್ನು ನೋಡಿ ಶಾಕ್ ಆಗಿದ್ದಾರೆ. ಸದ್ಯ ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ವಿಷಯ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..