ನಮಸ್ಕಾರ ವೀಕ್ಷಕರೇ, ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸೀಸನ್ 9ರ ಜರ್ನಿ ಪ್ರಾರಂಭವಾಗಿದ್ದು, ಅದರಲ್ಲಿ ಪ್ರವೀಣರೊಂದಿಗೆ ನವೀನರು ಆಟವಾಡಿ ಗೆಲ್ಲುಬೇಕು ಎಂಬಂತೆ ಹಲವು ಸ್ಪರ್ಧಿಗಳು ಭಾಗವಹಿಸಿದ್ದು ಈ ಮೊದಲ ಭಾಗವಹಿಸಿದ್ದ ಸ್ಪರ್ಧಿಗಳು ಕೂಡ ಇದ್ದಾರೆ.
ಅದರೊಂದಿಗೆ ಹೊಸಬರು ಕೂಡ ಇದ್ದಾರೆ. ಆದರೆ ಇದೀಗ ಇವರಿಬ್ಬರ ನಡುವೆ ಹೊಂದಾಣಿಕೆ ಆಗುತ್ತಿಲ್ಲ ಎಂಬ ವಿಚಾರಗಳು ಎಲ್ಲರಿಗೂ ಕೂಡ ತಿಳಿದೇ ಇದೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ವೀಕ್ಷಿಸುವ ವೀಕ್ಷಕರು ಕೂಡ ಈ ಅಭಿಪ್ರಾಯಗಳಿಗೆ ಬಂದಿರುತ್ತಾರೆ.
ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಾ ಕಳಪೆ ಪಟ್ಟವನ್ನು ನೀಡುತ್ತಾ ಇರುತ್ತಾರೆ. ಹೀಗಿರುವಾಗ ಬಿಗ್ ಬಾಸ್ ಮನೆಗೆ ತಾವು ಏಕೆ ಬಂದಿದ್ದೇವೆ ಎಂಬುದನ್ನು ಮರೆತು ಒಬ್ಬರಮೇಲೊಬ್ಬರು ಕಾಲು ಎಳೆಯುತ್ತಾ ಮತ್ತು ಒಬ್ಬರ ಮೇಲೆ ಒಬ್ಬರು ಯಾವಾಗಲೂ ಆರೋಪ ಮಾಡುತ್ತಾ ದಿನಗಳನ್ನು ಸಾಗಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕಳಪೆ ಆಟಗಾರ ಎನ್ನುವ ಪಟ್ಟ ಪಡೆಯುವುದು ಸಾಮಾನ್ಯ ವಿಷಯವಲ್ಲ. ಇನ್ನು ಇದೀಗ ಇದೆ ಕಳಪೆ ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಯುದ್ಧವೇ ನಡೆದಿದ್ದು, ಮುಂದಿನ ದಿನಗಳಲ್ಲಿ ಇದು ಏನಾಗಬಹುದು ಮತ್ತು ಕಿಚ್ಚ ಸುದೀಪ್ ಅವರು ಇದಕ್ಕೆ ಎಲ್ಲದಕ್ಕೂ ಮಾತನಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಅದೇನೆ ಇರಲಿ ಅರುಣ್ ಸಾಗರ್ ಅವರು ಯಾವುದೇ ರೂಲ್ಸ್ ಮತ್ತು ರೆಗ್ಯುಲೇಷನ್ಸ್ ಅನ್ನು ಫಾಲೋ ಮಾಡುತ್ತಿಲ್ಲ ಎಂದು ರೂಪೇಶ್ ಶೆಟ್ಟಿ ಅವರು ಹೇಳಿದರೆ. ಇನ್ನು ಅನುಪಮಾ ಮತ್ತು ಸ್ನೇಹ ಗೌಡ ಅವರು ರೂಪೇಶ್ ಶೆಟ್ಟಿ ಯಾರೊಂದಿಗೂ ಬೆರೆಯುತ್ತಿಲ್ಲ, ಅವರು ಇನ್ನು ಓಪನಪ್ ಆಗಬೇಕು ಎಂದು ಹೇಳಿದ್ದಾರೆ.
ಆದರೆ ರೂಪೇಶ್ ಶೆಟ್ಟಿ ಮಾತ್ರ ನಾನು ಇರುವುದೇ ಹೀಗೆ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ . ಇನ್ನು ಮುಂದಿನ ದಿನಗಳಲ್ಲಿ ಈ ವಿಚಾರಗಳು ಏನಾಗಬಹುದು ಎಂದು ವೀಕ್ಷಕರು ಗಮನಿಸುತ್ತಾ ಇದ್ದಾರೆ. ಇನ್ನು ಟಾಸ್ ಗಳನ್ನು ಮಾಡುತ್ತಾ ಅದರಲ್ಲಿಯೂ ಕೂಡ ಕಳಪೆ ಪ್ರದರ್ಶನ ನೀಡುತ್ತಿರುವುದು ವಿಪರ್ಯಾಸ.
ಇನ್ನು ರೂಪೇಶ್ ಶೆಟ್ಟಿ, ಮಾತನಾಡುತ್ತಿರುವ ವೇಳೆಯಲ್ಲಿ ನಾನು ಹೋರಾಟ ಮಾಡುತ್ತಾ ಬಂದವನು ಎಂದರು. ಅದಕ್ಕೆ ದೀಪಿಕಾ ಅವರು ಇಲ್ಲಿ ಹೋರಾಟದ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದಿದ್ದಾರೆ. ಆದರೆ ರೂಪ ಶೆಟ್ಟಿ ನಾನು ಮಾತನಾಡುವಾಗ ನನ್ನ ಮಾತಿನ ಮಧ್ಯದಲ್ಲಿ ನೀವು ಬಾಯಿ ಹಾಕಬೇಡಿ ಎಂದು ಅವರ ಮೇಲು ಕೂಡ ಕೋಪಗೊಂಡಿದ್ದಾರೆ.
ಮುಂಬರುವ ದಿನಗಳಲ್ಲಿ ಇವರ ಕೋಪ ಯಾವ ಮಟ್ಟಕ್ಕೆ ತಲುಪುತ್ತದೆ ಎಂದು ನೋಡಬೇಕು ಮತ್ತು ಇತರ ಮಧ್ಯೆ ರೂಪೇಶ್ ಶೆಟ್ಟಿ ಅವರು ಮೈಕ್ ಅನ್ನು ತೆಗೆದಿಟ್ಟು ನಾನು ಬಿಗ್ ಬಾಸ್ ಮನೆಯಿಂದ ಹೊರ ನಡೆಯುತ್ತೇನೆ ಎಂದು ಹೊರಟಿದ್ದರು ಆದರೆ ಅಲ್ಲಿರುವವರು ಅವರನ್ನು ತಡೆದಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..