ನಮಸ್ಕಾರ ವೀಕ್ಷಕರೇ, ಚಂದನವನದ ಮುದ್ದು ಗೊಂಬೆ ಮೇಘನಾ ರಾಜ್, ಅವರು ಚಿರಂಜೀವಿ ಸರ್ಜಾ, ಅವರ ನಿ*ಧನದ ಬಳಿಕ ಬಹಳಷ್ಟು ಕುಗ್ಗಿ ಹೋಗಿದ್ದರು. ಆದರೆ ಮಗ ರಾಯನ್ ಬೆಳವಣಿಗೆಯೊಂದಿಗೆ ಇದೀಗ ಎಲ್ಲವನ್ನು ಮರೆತು ಹೊಸ ಜೀವನಕ್ಕೆ ಕಾಲಿಡಲು ಮುಂದಾಗುತ್ತಾ ಇದ್ದಾರೆ.
ಅದರಂತೆ ಅವರು ಹೊಸ ಸಿನಿಮಾಗಳಲ್ಲಿ ನಟಿಸುವುದಾಗಿ ಮತ್ತು ಹೊಸ ಸಿನಿಮಾಗಳಿಗೆ ಸಹಿ ಕೂಡ ಮಾಡಿದ್ದಾರೆ ಎಂಬ ವಿಚಾರಗಳು ತಿಳಿದೇ ಇದೆ. ಇದರೊಂದಿಗೆ ಮಗನ ಆರೈಕೆಯನ್ನು ಕೂಡ ಅವರು ನೋಡಿಕೊಳ್ಳುತ್ತಿದ್ದಾರೆ. ಇನ್ನು ನಟಿ ಮೇಘನಾ ರಾಜ್ ಅವರು ಚಿರು ನಿ*ಧನದ ಬಳಿಕ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಸಿನಿಮಾದಿಂದ ಬಹಳಷ್ಟು ಬ್ರೇಕ್ ಪಡೆದುಕೊಂಡಿದ್ದ ಮೇಘನಾ ರಾಜ್ ಆನಂತರ ಅವರು ರಿಯಾಲಿಟಿ ಶೋ ನ ಜಡ್ಜ್ ಆಗಿ ಕೂಡ ಬಂದಿದ್ದರು. ಇದೀಗ ಮೇಘನಾ ರಾಜ್ ಅವರು ಹೊಸ ಜೀವನ ಪ್ರಾರಂಭಿಸಲು ಮುಂದಾಗಿದ್ದಾರೆ. ಇನ್ನು ಮೇಘನಾ ರಾಜ್ ಅವರಿಗೆ ಪನ್ನಾಗಬಣ್ಣ ಮತ್ತು ಚಿರಂಜೀವಿ ಸರ್ಜಾ ಮತ್ತು ಅವರ ಕಾಂಬಿನೇಷನ್ನಲ್ಲಿ ಒಂದು ಸಿನಿಮಾ ಮಾಡಬೇಕೆಂದು ಮೊದಲಿನಿಂದಲೂ ಆಸೆ ಇತ್ತು.
ಆದರೆ ಚಿರು ನಮ್ಮನ್ನೆಲ್ಲ ಅಗಲಿರುವುದು ವಿಪರ್ಯಾಸ, ಆದರೆ ಅದನ್ನು ಕೂಡ ಮನಸ್ಸಿಗೆ ತರದೆ ಮಗನಿಗಾಗಿ ತಮ್ಮ ಜೀವನವನ್ನು ಮತ್ತೆ ಪ್ರಾರಂಭಿಸಲು ಹೊರಟಿರುವ ಮೇಘನಾ ರಾಜ್ ಅವರು ಪನ್ನಾಗ ಬಣ್ಣ ನಿರ್ಮಾಣದಲ್ಲಿ ಮತ್ತು ವಿಶಾಲ್ ನಾಯಕತ್ವದಲ್ಲಿ ತಯಾರಾಗುತ್ತಿರುವ ಸಿನಿಮದಲ್ಲಿ ನಟಿಸುತ್ತಿದ್ದಾರೆ.
ಈ ಸಿನಿಮಾ ಅವರ ಜೀವನದಲ್ಲಿ ಬಹು ಮುಖ್ಯ ಸಕ್ಸಸ್ ತಂದುಕೊಡುತ್ತದೆ ಎಂದು ಅನೇಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಶುರುವಾಗಿದ್ದು ಸಿನಿಮಾ ಹೇಗೆ ಮೂಡಿಬರುತ್ತದೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ.
ಇನ್ನು ಮೇಘನಾ ರಾಜ್ ಅವರು ನಟಿಸುತ್ತಿರುವ ವಿಶಾಲ್ ನಾಯಕತ್ವದ ಸಿನಿಮಾ ವಾಗಿರುವಂತಹ ಸಿನಿಮಾ ಯಾವ ಟೈಟಲ್ ನಲ್ಲಿ ಇದೆ ಎಂಬ ಸುದ್ದಿಯನ್ನು ಇನ್ನು ರಿವೀಲ್ ಮಾಡಿಲ್ಲ. ಇದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಪ್ರಜ್ವಲ್ ದೇವರಾಜ್ ಅವರು ಮಾತ್ರ ಇದರಲ್ಲಿ ಪೊಲೀಸ್ ಆಫೀಸರ್ ಆಗಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಇದಕ್ಕೆ ಪ್ರಜ್ವಲ್ ದೇವರಾಜ್ ಅವರು ಕೂಡ ಪ್ರತಿಕ್ರಿಯೆ ನೀಡಿ ಹೌದು ಎಂದು ಹೇಳಿದ್ದಾರೆ. ಇನ್ನು ಈ ಇಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಯಾವ ರೀತಿಯಾಗಿ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಕಮೆಂಟ ಬಾಕ್ಸನಲ್ಲಿ ತಿಳಿಸಿ..