ಹಿರಿಯ ನಟಿ ಎಂ.ಎನ್ ಲಕ್ಷ್ಮಿದೇವಿಗೆ ಅವಕಾಶ ಸಿಕ್ತಿಲ್ವಾ? ಈ ನಟಿ ಎಲ್ಲಿದ್ದಾರೆ?

Uncategorized

ಬಂಧುಗಳೇ ನಮಸ್ಕಾರ ನಾವೊಂದಿಷ್ಟು ಹಳೆಯ ಕಲಾವಿದರನ್ನ ಮರೆತೇಬಿಟ್ಟಿದ್ದೇವೆ. ಇತ್ತೀಚಿಗೆ ಅವರಿಗೆ ಅವಕಾಶ ಸಿಗದ ಅಂತ ಕಾರಣಕ್ಕಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕೂಡ ಕಡಿಮೆಯಾಗಿದೆ. ಮತ್ತೊಂದು ಕಡೆ ವೀಕ್ಷಕರಾಗಿ ಇರುವಂತಹ ನಾವು ಕೂಡ ಹೆಚ್ಚು ಕಡಿಮೆ ಅವರ ಮುಖವನ್ನು ಅವರ ಪ್ರೆಸೆನ್ಸ್ ಅನ್ನ ಮರೆತೆ ಬಿಟ್ಟಿದ್ದೇವೆ. ಅದರಲ್ಲಿ ಒಬ್ಬರು ಎಂ ಎನ್ ಲಕ್ಷ್ಮೀದೇವಿ. ಎಂಎ ನ್ ಲಕ್ಷ್ಮೀದೇವಿ ಅಂತ ಇದ್ದ ಹಾಗೆ ಅದೆಷ್ಟು ಜನರಿಗೆ ಗೊತ್ತಾಗುತ್ತೆ ಇಲ್ವೋ ಗೊತ್ತಿಲ್ಲ.

ಯಜಮಾನ ಚಿತ್ರದ ಅಮ್ಮಮ್ಮ ಪಾತ್ರದಾರಿ ಅಂತ ಇದ್ದ ಹಾಗೆ ಗೊತ್ತಾಗುತ್ತೆ. ಯಜಮಾನ ಸಿನಿಮಾದ ಆ ಪಾತ್ರವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ ಬಿಡಿ. ಅದಕ್ಕೂ ಮುಂಚೇನೆ ಲಕ್ಷ್ಮೀದೇವಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅದ್ಭುತವಾದಂತಹ ಪಾತ್ರಗಳನ್ನು ಪೋಷಣೆ ಮಾಡುವ ಮೂಲಕ ಗಮನವನ್ನು ಸೆಳೆದ ಅಂಥವರು. ಹಾಗಾದರೆ ಎಂ ಎನ್ ಲಕ್ಷ್ಮೀದೇವಿ ಸದ್ಯ ಏನು ಮಾಡುತ್ತಿದ್ದಾರೆ. ಅವರಿಗೆ ಅವಕಾಶಗಳು ಸಿಗು ತ್ತ ಇದಿಯ. ಸಿನಿಮಾ ಇಂಡಸ್ಟ್ರಿ ಅವರಿಗೆ ಯಾವ ರೀತಿಯಾಗಿ ನಟಿಸಿ ಕೊಳ್ಳುತ್ತಾ ಇದೆ.

ಹಾಗೇನೆ ಲಕ್ಷ್ಮಿದೇವಿಯವರು ಸದ್ಯದ ಸಿನಿಮಾ ಇಂಡಸ್ಟ್ರಿ ಬಗ್ಗೆ ಏನು ಹೇಳುತ್ತಿದ್ದಾರೆ. ಅದೆಲ್ಲವನ್ನು ಕೂಡ ಇವತ್ತಿನ ಮಾಹಿತಿಯನ್ನು ನೋಡುತ್ತಾ ಹೋಗೋಣ. ಅದಕ್ಕೂ ಮುನ್ನ ಎಂ ಎನ್ ಲಕ್ಷ್ಮಿದೇವಿಯವರಿಗೆ ಪಟ್ಟ ಒಂದಿಷ್ಟು ವಿಚಾರಗಳನ್ನು ನೀಮಗೆ ಹೇಳುತ್ತಾ ಹೋಗುತ್ತೇನೆ. ಎಂಎನ್ ಲಕ್ಷ್ಮೀದೇವಿ ಒಂದು ವಿಶಿಷ್ಟವಾದ ಅಂತಹ ದಾಖಲೆ ಬರೆದಿದ್ದಾರೆ. ಕಾರಣ 60 ವರ್ಷಗಳ ತಮ್ಮ ಸಿನಿಮಾ ಜರ್ನಿಯಲ್ಲಿ 1000ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿ ದಂತಹ ನಟಿ.

ಒಂದು ರೀತಿ ದಾಖಲೆ ಕೆಲವೇ ಕೆಲವು ಮಂದಿಯಲ್ಲಿ ಮಾತ್ರ ಹೆಸರು ಇದ್ದಿದ್ದು. ದಾಖಲೆ ಇದೆ. ಅದರಲ್ಲಿ ಎಂ ಎನ್ ಲಕ್ಷ್ಮೀದೇವಿ ಅವರು ಕೂಡ ಒಬ್ಬರು. 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಂದರೆ ಸಾಮಾನ್ಯವಾದ ಅಂತಹ ವಿಚಾರ ಅಲ್ಲವೇ ಅಲ್ಲ. ಎಂ ಎನ್ ಲಕ್ಷ್ಮೀದೇವಿ ಹುಟ್ಟಿದ್ದು 19 34 ರಲ್ಲಿ. ಅವರ ವಯಸ್ಸು ಸುಮಾರು 87 88ರ ಆಸುಪಾಸು ಮೂಲತಹ ಮಂಡ್ಯದವರು ಅವರು. ಅವರು ಬೇಸಿಕಲಿ ಸಿಂಗರ್. ಗಾಯಕಿಯಾಗಿದ್ದ ರು.

ಗಾಯಕಿಯಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಾರೆ. ಒಂದಷ್ಟು ಸಿನಿಮಾಗಳಲ್ಲಿ ಆರಂಭದ ದಿನಗಳಲ್ಲಿ ಹಾಡನ್ನು ಕೂಡ ಹಾಡುತ್ತಾರೆ. ನೋಡು ದಕ್ಕೂ ಕೂಡ ಅವಾಗ ಬಹಳ ಚೆನ್ನಾಗಿದ್ದ ಕಾರಣಕ್ಕಾಗಿ ನೃತ್ಯವನ್ನು ಅಭ್ಯಾಸ ಕೂಡ ಮಾಡುತ್ತಾರೆ. ನೃತ್ಯ ಅಭ್ಯಾಸ ಮಾಡಿದ ಕಾರಣಕ್ಕಾಗಿ ನೋಡುವುದಕ್ಕೂ ಚೆನ್ನಾಗ್ ಇದ್ದಂತಹ ಕಾರಣಕ್ಕಾಗಿ ಸಿನಿಮಾಗಳಲ್ಲಿ ಅವಕಾಶಗಳು ಸಿಗುವುದಕ್ಕೆ ಶುರುವಾಗುತ್ತವೆ. ಶ್ರೀನಿವಾಸ ಕಲ್ಯಾಣ ಎನ್ನುವಂತ ಸಿನಿಮಾದಲ್ಲಿ ಆರಂಭದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ.

ಅದಾದನಂತರ ಒಂದಿಷ್ಟ್ ಅವಕಾಶಗಳು ಸಿಗುವುದಕ್ಕೆ ಶುರುವಾಗುತ್ತದೆ. 19 53 ರಿಂದಲೇ ಸಿನಿಮಾ ಇಂಡಸ್ಟ್ರಿ ಕಣ್ಣುಬಿಡುತ್ತಿದ್ದ ಅಂತಹ ಸಂದರ್ಭದಲ್ಲಿ ಎಂ ಎನ್ ಲಕ್ಷ್ಮಿದೇವಿಯವರು ಅಭಿನಯಿಸುವುದಕ್ಕೆ ಶುರು ಮಾಡಿಕೊಂಡಿದ್ದರು ನೋಡಿ. ಆನಂತರ ಸೌಭಾಗ್ಯಲಕ್ಷ್ಮಿ ರಾಯರ ಸೊಸೆ ರತ್ನಗಿರಿ ರಹಸ್ಯ ಈ ರೀತಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತ ಹೋಗುತ್ತಾರೆ. ಆನಂತರ ಅವರಿಗೆ ಬಹಳ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದು ನರಸಿಂಹರಾಜು ಅವರ ಜೊತೆಗೆ ಕಾಣಿಸಿಕೊಂಡ ಅಂತಹ ಒಂದು ಹಾಡು.

ಯಾರು ಯಾರು ನೀ ಯಾರು. ಈ ಹಾಡು ನಿಮಗೆಲ್ಲರಿಗೂ ಕೂಡ ನೆನಪಿರಬಹುದು. ಅದರಲ್ಲಿ ನರಸಿಂಹರಾಜು ಹಾಗೂ ಎಂ ಎನ್ ಲಕ್ಷ್ಮೀದೇವಿ ಅವರ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಆನಂತರ ಇವರಿಬ್ಬರ ಜೋಡಿಯ ಕೂಡ ಬಹಳ ದೊಡ್ಡ ಮಟ್ಟಿಗೆ ಪ್ರಖ್ಯಾತಿಯನ್ನು ಪಡೆದು ಕೊಂಡಿದ್ದು. ಆನಂತರ ಎಂ ಎನ್ ಲಕ್ಷ್ಮೀದೇವಿ ಹಿಂತಿರುಗಿ ನೋಡಿದ್ದೇ ಇಲ್ಲ. ನಾನಾ ರೀತಿಯ ಪಾತ್ರಗಳನ್ನು ಮಾಡುತ್ತಾ ಹೋದರು. ಆರಂಭದಲ್ಲಿ ಹೀರೋಯಿನ್ ಗೆಳತಿಯಾಗಿ ಹೀರೋಯಿನ್ ಗೆ ಸರಿಸಮನಾದ ಅಂತಹ ಪಾತ್ರಗಳಲ್ಲಿ ಆನಂತರ ಬರುತ್ತಾ ಬರುತ್ತಾ ಪೋಷಕ ಕಲಾವಿದೆಯಾಗಿ.

ಅತಿಯಾಗಿ ಅಥವಾ ದೊಡ್ಡವನಾಗಿ ಚಿಕ್ಕಮ್ಮ ನಾಗೀ ಹೀಗೆ ನಾನಾ ಪಾತ್ರಗಳು. ಒಂದಿಷ್ಟು ಸಿನಿಮಾಗಳಲ್ಲಿ ಪಾಸಿಟಿವ್ ರೋಲ್ ಇದ್ದರೆ ಒಂದಷ್ಟು ಸಿನಿಮಾಗಳಲ್ಲಿ ನೆಗೆಟಿವ್ ರೋಲ್ ಅನ್ನು ಕೂಡ ಮಾಡಿದ್ದಾರೆ. ಬತ್ತ ಬತ್ತ ಅಜ್ಜಿ ಪಾತ್ರಕ್ಕೆ ಅಂ ತೋ ಫಿಕ್ಸ್ ಆಗಿಬಿಟ್ಟರು. ಬಹುತೇಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ. ಆನಂತರ ಒಂದಷ್ಟು ಸಿನಿಮಾಗಳನ್ನು ಹೇಳುತ್ತಾ ಹೋಗುವುದಾದರೆ ಗಾಳಿಗೋಪುರ ವೀರಕೇಸರಿ ಆನಂತರ ಒಂದು ದಶಕ ಕಳೆದ ಮೇಲೆ ಯಜಮಾನ ರಾಮಕೃಷ್ಣ ಕುಟುಂಬ ಇತ್ತೀಚಿಗೆ ಟಗರು ಸಿನಿಮಾ ರಾಜಾಹುಲಿ ಸಿನಿಮಾ

ಆ ನಂತರವೂ ಕೂಡ ಒಂದಿಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೀರಿಯಲ್ಗಳನ್ನು ಕೂಡ ಮಾಡಿದ್ದಾರೆ. ಲಕ್ಷ್ಮಿದೇವಿಯವರು. ಅದರಲ್ಲಿ ಒಂದಷ್ಟು ಪಾತ್ರಗಳಲ್ಲಿ ಮರೆಯುವುದಕ್ಕೆ ಸಾಧ್ಯವಿಲ್ಲ. ನಾನು ಆರಂಭದಲ್ಲಿ ಹೇಳಿದ ಹಾಗೆ ಯಜಮಾನ ಸಿನಿಮಾದಲ್ಲಿನ ಪಾತ್ರ. ಹಾಗೆ ನನಗೆ ಬಹಳ ಇಷ್ಟವಾದ ಸಿನಿಮಾ ಅಂದರೆ ಅವರದು ರಾಮಕೃಷ್ಣ ಸಿನಿಮಾ ದಲ್ಲಿನ ಪಾತ್ರ. ದೊಡ್ಡಣ್ಣ ನವರ ತಾಯಿಯಾಗಿ ರವಿಚಂದ್ರನ್ ಮತ್ತು ಜಗ್ಗೇಶ್ ಅವರಿಗೆ ಅಜ್ಜಿಯಾಗಿ ಪಾತ್ರದಲ್ಲಿ ಕಾಣಿಸಿಕೊಂಡಿರುತ್ತಾರೆ. ಆ ಪಾತ್ರವನ್ನು ಅಂತೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಬಿಡಿ.

ಅದರಲ್ಲಿ ಅವರು ಸ್ವಲ್ಪ ಮಟ್ಟಿಗೆ ಒಂದು ಲಾಂಗ್ ಆಗಿರುವಂತಹ ಅಥವಾ ಒಂದು ಸುದೀರ್ಘವಾದ ಅಂತಹ ಪಾತ್ರ ಸಿಕ್ಕಿತ್ತು. ಅದಾದ ನಂತರ ಅವರು ಹೇಳಿಕೊಂಡಿರುವ ಅಷ್ಟರಮಟ್ಟಿಗೆ ಅಧಿಕ ಪಾತ್ರಗಳು ಸಿಕ್ಕಿದ್ದು ಕಡಿಮೆಯೇ. ಯಜಮಾನ ಸಿನಿಮಾ ಅಂತ ಬಿಡಿ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಯಜಮಾನ ಸಿನಿಮಾದಲ್ಲಿ ಪ್ರಮುಖ ಪಾತ್ರಧಾರಿಯಾಗಿ ಗುರುತಿಸಿಕೊಂಡಿದ್ದರು. ಅಮ್ಮಮ್ಮನ ಹೊರತಾಗಿ ನಾವು ಎಜಮಾನ ಸಿನಿಮಾವನ್ನು ನೋಡುವುದಕ್ಕೂ ಕೂಡ ಸಾಧ್ಯವಿಲ್ಲ.

ಇಷ್ಟರಮಟ್ಟಿಗೆ ಕನ್ನಡ ಸಿನಿಮಾದಲ್ಲಿ ಒಳ್ಳೆಯ ಹೆಸರನ್ನು ಮಾಡಿದಂಥವರು ಎಂ ಎನ್ ಲಕ್ಷ್ಮೀದೇವಿ. ಅವರು. ಆದ್ದರಿಂದ ಇತ್ತೀಚಿಗೆ ಗಮನಿಸುವುದು ಹೋಗುವುದಾದರೆ ಇತ್ತೀಚಿಗೆ ಅವರಿಗೆ ಹೇಳಿಕೊಳ್ಳುವಷ್ಟು ರ ಮಟ್ಟಿಗೆ ಅವಕಾಶಗಳು ಸಿಗುತ್ತಿಲ್ಲ. ಹಾಗೆ ಎಂ ಎನ್ ಲಕ್ಷ್ಮೀದೇವಿ ಅವರು ಕೂಡ ಒಂದಷ್ಟು ಸಿನಿಮಾಗಳಿಗೆ ಕರೆದರೆ ಸ್ವತಃ ಅವರೇ ಹೋಗುತ್ತಾ ಇಲ್ಲ ಅಂತೆ. ಕೆಲಸ ಇಲ್ಲದಿದ್ದರೂ ಅಡ್ಡಿಯಿಲ್ಲ. ಮನೆಯಲ್ಲಿ ಕುಳಿತುಕೊಳ್ಳದ ಆದರು ಅಡಿ ಇಲ್ಲ ನಾನು ಹೋಗುವುದಿಲ್ಲ ಅಂತ.

ಅದಕ್ಕೆ ಒಂದು ಸಂದರ್ಶನವೊಂದರಲ್ಲಿ ಕಾರಣವನ್ನು ಹೇಳಿದ್ದಾರೆ. ಯಾಕೆ ನಾನು ಹೋಗುತ್ತಾ ಇಲ್ಲ ಅಂತ ಹೇಳಿ. ಈ ಹಿಂದೆ ಅವರು ಸಿನಿಮಾ ಶೂಟಿಂಗ್ ಗೆ ಹೋದಾಗ ಬಹಳ ಖುಷಿಯಾಗಿ ಇರುತ್ತಾ ಇರುತ್ತಾರಂತೆ. ಒಂದು ಫ್ಯಾಮಿಲಿಯ ವಾತಾವರಣ ಇರುತ್ತಿತ್ತಂತೆ. ಅವರು ಡಾಕ್ಟರ್ ರಾಜಕುಮಾರ್ ಅಂತಹ ನಟರನ್ನ ಹಿಡಿದು ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ಮಾಡಿದಂತಹ ವರು. ವಿಷ್ಣುವರ್ಧನ್ ಅವರ ಜೊತೆಗೆ ತುಂಬಾ ಉತ್ತಮವಾದಂತಹ ಆತ್ಮೀಯ ಭಾವನೆ ಇಟ್ಟುಕೊಂಡು ಅಂತಹವರು. ಲಕ್ಷ್ಮಿದೇವಿಯವರು. ಹಾಗೂ ವಿಷ್ಣುವರ್ಧನ್ ಅವರು ಡಾಕ್ಟರ್ ರಾಜಕುಮಾರ್ ಅವರು ಶಂಕರ್ ನಾಗ್ ಅವರು. ಇವರೆಲ್ಲರೂ ಕೂಡ ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದ ರಂತೆ.

Leave a Reply

Your email address will not be published. Required fields are marked *