ರಾಯನ್ ಫಿಲ್ಮ ಇಂಡಸ್ಟ್ರಿಗೆ ಯಾವಾಗ ಎಂಟ್ರಿ ಎಂದು ಕೇಳಿದ ಪ್ರಶ್ನೆಗೆ ಮೇಘನಾ ಕೊಟ್ಟ ಉತ್ತರ ನೋಡಿ….!!

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡ ಚಿತ್ರರಂಗದಲ್ಲಿ ಬಹು ಭಾಷಾ ನಟಿಯಾಗಿ ಆಗಮಿಸಿದಂತಹ ಮೇಘನಾ ರಾಜ್ ಅವರು ಇದೀಗ ಒಂದು ಸಂದರ್ಶನದಲ್ಲಿ ತಮ್ಮ ಮಗನ ಬಗ್ಗೆ ಮಾತನಾಡಿದ್ದು ಅವರು ಯಾವೆಲ್ಲ ಮಾತುಗಳನ್ನು ಆಡಿದ್ದಾರೆ ಎಂಬುದನ್ನು ತಿಳಿಯಬೇಕಿದೆ.

ಮೇಘನಾ ರಾಜ್ ಅವರು ಎಲ್ಲೆಡೆ ಎಲ್ಲಿಯೂ ಕೂಡ ಬಹಳಷ್ಟು ಸುದ್ದಿಯಾಗಿದ್ದಾರೆ ಮತ್ತು ಅವರು ಜನ ಮೆಚ್ಚಿದ ನಾಯಕಿಯಾಗಿಯೂ ಕೂಡ ಇದ್ದಾರೆ. ಇತ್ತೀಚೆಗೆ ಮೇಘನಾ ರಾಜ್ ಅವರು ನ್ಯಾಷನಲ್ ಫಾಗ್ ಅವಾರ್ಡ್ ಅನ್ನು ಕೂಡ ತಮ್ಮ ಮುಡಿಗೆರಿಸಿಕೊಂಡಿದ್ದಾರೆ.

ಇನ್ನು ಸದ್ಯ ಮೇಘನಾ ರಾಜ್ ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ವರ್ಷಗಳ ನಂತರ ನಟಿ ಸಿನಿಮಾರಂಗಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿದ್ದು, ಇದು ನಿಜಕ್ಕೂ ಅವರ ಅಭಿಮಾನಿಗಳಿಗೆ ಖುಷಿ ತರುವಂತಹ ವಿಚಾರವಾಗಿದೆ.

ಇದರ ಜೊತೆಗೆ ಮೇಘನಾ ಅವರು ದಿನ ತಮ್ಮ ಮಗನೊಂದಿಗೆ ಕಳೆಯುವಂತಹ ಹಲವು ಕ್ಷಣಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾ ಎಲ್ಲಾ ಅಭಿಮಾನಿಗಳನ್ನು ಚಿರಂಜೀವಿ ಸರ್ಜಾ ಅವರ ನೆನಪುಗಳ ಮೂಲಕ ರಾಯನ್ ಅನ್ನು ತೋರಿಸುತ್ತಾ ಎಲ್ಲರಿಗೂ ಚಿರಂಜೀವಿ ಅವರ ನೋವನ್ನು ಮರೆಸುತ್ತಾ ಇದ್ದಾರೆ.

ಇದರ ಜೊತೆಗೆ ಮೇಘನಾ ರಾಜ್ ಅವರು ಅವರ ಮಗನ ಬಗ್ಗೆ ಅತಿ ಹೆಚ್ಚು ಗಮನವನ್ನು ಕೂಡ ವಹಿಸುತ್ತಿದ್ದಾರೆ. ಹಾಗಾಗಿ ತಾವು ಎಲ್ಲೇ ಹೋದರು ಎಲ್ಲಿ ಬಂದರೂ ಮಗನನ್ನು ಜೊತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದಾರೆ ಮೇಘನಾ ರಾಜ್. ಇನ್ನು ಸದ್ಯ ಈ ಇಬ್ಬರೂ ಜೊತೆಗಿರುವ ಫೋಟೋಗಳು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.

ಇದರ ಜೊತೆಗೆ ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಮೇಘನಾ ರಾಜ್ ಅವರನ್ನು ತಮ್ಮ ಮಗ ರಾಯನ್ ಅನ್ನು ಇಂಡಸ್ಟ್ರಿಗೆ ಯಾವಾಗ ಪರಿಚಯ ಮಾಡಿಸುತ್ತೀರಿ ಎಂದು ಕೇಳಿದಾಗ. ಅವರು ರಾಯನ್ ಮೊದಲು ಸ್ಕೂಲ್ ಮೆಟ್ಟಿಲು ಹತ್ತಲಿ ನಂತರ ಇಂಡಸ್ಟ್ರಿಗೆ ಬರಲಿ ಎಂದು ಹೇಳಿದ್ದಾರೆ.

ಅದು ಮಾತ್ರವಲ್ಲದೆ ರಾಯನ್ ಇವಾಗ ಇನ್ನು ತನ್ನ ಸ್ಕೂಲ್ ಫ್ರೆಂಡ್ಸ್, ಸ್ಕೂಲ್ ಮಕ್ಕಳು ಹೀಗೆ ತನ್ನ ಜೀವನವನ್ನು ನಡೆಸಲಿ ಎಂದು ಕೂಡ ಮಾತನಾಡಿರುವ ಇವರು ಮುಂದುವರೆಯುತ್ತಾ ರಾಯನ್ ಬಗ್ಗೆ ಹಲವಾರು ಮಾತುಗಳನ್ನು ಆಡಿದ್ದಾರೆ.

Leave a Reply

Your email address will not be published. Required fields are marked *