ಇನ್ನು ಮುಂದೆ ಅಪ್ಪು ಪತ್ನಿ ಅಶ್ವಿನಿ ಸಕತ್ ಬ್ಯುಸಿ! ಯಾಕೆ ಗೊತ್ತಾ ನೋಡಿ!..

ಸ್ಯಾಂಡಲವುಡ್

ನಮ್ಮ ನಿಮ್ಮೆಲ್ಲರ ಕರುನಾಡ ಮುತ್ತು ಅಭಿಮಾನಿಗಳ ದೇವರು ನಮ್ಮ ಪುನೀತ್ ರಾಜ್ ಕುಮಾರ್. ಅಪ್ಪು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸಾ*ವಿನ ನಂತರವೂ ಕೂಡ ಸಾರ್ಥಕತೆ ಮೆರೆದವರು ನಮ್ಮ ಅಪ್ಪು. ಹೆಸರಿಗೆ ತಕ್ಕಂತೆ ರಾಜ ಕುಮಾರ ನಮ್ಮ ಅಪ್ಪು ಎಂದರೆ ತಪ್ಪಾಗಲಾರದು.

ಅಪ್ಪು ನಮ್ಮನ್ನು ಬಿಟ್ಟು ಈಗಾಗಲೇ 10 ತಿಂಗಳ ಮೇಲಾಗಿದೆ. ಇನ್ನು ಸಹ ಅಪ್ಪು ಅವರನ್ನು ಮರೆಯಲು ಯಾರಿಂದಲೂ ಸಹ ಸಾಧ್ಯವಾಗುತ್ತಿಲ್ಲ. ಇನ್ನು ನಮ್ಮ ಸ್ಥಿತಿಯೇ ಹೀಗಿರುವಾಗ ಅಪ್ಪು ಹಾಗೂ ಕುಟುಂಬದ ಪರಿಸ್ಥಿತಿ ಇನ್ನು ಹೇಗಿರುತ್ತದೆ ನೀವೇ ಹೇಳಿ. ಅಪ್ಪು ಇಲ್ಲದ ಈ ಜಗತ್ತನ್ನು ಊಹಿಸಲು ಸಹ ನಿಜಕ್ಕೂ ಬೇಸರವಾಗುತ್ತದೆ.

ಅಪ್ಪು ನಿಧನದ ಬಳಿಕ ಮನೆಯ ಎಲ್ಲಾ ಜವಾಬ್ದಾರಿ ಅವರ ಪತ್ನಿ ಅಶ್ವಿನಿ ಅವರ ಮೇಲಿದೆ. ಅಶ್ವಿನಿ ಅವರಿಗೆ ರಾಘಣ್ಣ ಹಾಗೂ ಶಿವಣ್ಣ ಇಬ್ಬರೂ ಬೆನ್ನೆಲುಬಾಗಿ ನಿಂತಿದ್ದಾರೆ. ಮನಸ್ಸಿನಲ್ಲಿ ಎಷ್ಟೇ ದುಃಖ ಇದ್ದರೂ ಸಹ ಅದನ್ನೆಲ್ಲಾ ಮನಸ್ಸಿನಲ್ಲೇ ಅಡಗಿತ್ತುಕೊಂಡು ಮೇಲ್ನೋಟಕ್ಕೆ ಮಾತ್ರ ನಗುತ್ತಿದ್ದಾರೆ ಅಶ್ವಿನಿ.

ಇನ್ನು ಇದೀಗ ಅಪ್ಪು ನಿ*ಧ*ನದ ನಂತರ ಅಶ್ವಿನಿ ಅವರು ಎಲ್ಲ ಕಡೆ ಅಂದರೆ ಎಲ್ಲಾ ಸಮಾರಂಭಗಳಲ್ಲಿ ಹಾಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆ ಅವರ ಬದಲಾಗಿ ಎಲ್ಲಾ ಗೌರವವನ್ನು ಸ್ವೀಕರಿಸುತ್ತಿದ್ದಾರೆ.

ಇನ್ನು ಇದೀಗ ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿ ಬಿಡುಗಡೆಗೆ ಸಜ್ಜಾಗಿದೆ. ಗಂಧದಗುಡಿ ಸಿನಿಮಾ ಅಪ್ಪು ಅವರ ಕನಸ್ಸಾಗಿತ್ತು. ಇನ್ನು ಅವರ ಕನಸ್ಸನ್ನು ಇದೀಗ ಅಶ್ವಿನಿ ನನಸ್ಸು ಮಾಡಲು ನಿಂತಿದ್ದಾರೆ. ಇನ್ನು ಅಭಿಮಾನಿಗಳು ಕೂಡ ಅಪ್ಪು ಅವರ ಗಂಧದಗುಡಿ ಸಿನಿಮಾಗಾಗಿ ಬಹಳ ಕಾತುರಾಗಿದ್ದಾರೆ.

ಇನ್ನು ಅಪ್ಪು ಕನಸ್ಸಿನ ಗಂಧದಗುಡಿ ಸಿನಿಮಾ ಇದೆ ಆಕ್ಟೊಬರ್ 28 ರಂದು ಬಿಡುಗಡೆಯಾಗುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಅಶ್ವಿನಿ ಅವರೇ ಮುಂದೆ ನಿಂತು ಮಾಡಿಸುತ್ತಿದ್ದಾರೆ. ಇನ್ನು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ಅಶ್ವಿನಿ ಅವರು ಅಪ್ಪು ಅವರ ವರ್ಷದ ತಿಥಿ ಕಡೆಗೂ ಸಹ ಘಮನ ಹರಿಸುತ್ತಿದ್ದಾರೆ.

ಹೌದು ಇನ್ನು ಇದೆ 29 ನೆ ತಾರೀಕು ಅಪ್ಪು ಅವರ ವರ್ಷದ ತಿಥಿ ಇದ್ದು, ಎಲ್ಲರೂ ಈ ಪುಣ್ಯ ದಿನಕ್ಕಾಗಿ ಬಹಳ ಕಾತುರರಾಗಿದ್ದಾರೆ. ಇನ್ನು ಅಶ್ವಿನಿ ಅವರು ಇದೀಗ ಈ ಎಲ್ಲಾ ಕೆಲಸಗಳಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ…

Leave a Reply

Your email address will not be published. Required fields are marked *