ದಕ್ಷಿಣ ಭಾರತ ಸಿನಿಮಾರಂಗದ ಟಾಪ್ ನಟಿಯರಲ್ಲಿ ನಟಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನದಲ್ಲಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ನಟನಾ ಜರ್ನಿ ಶುರು ಮಾಡಿ ನಂತರ ಬೇರೆ ಭಾಷೆಗಳಲ್ಲಿ ನಟಿಸುತ್ತಾ, ಇದೀಗ ನಟಿ ಬಾಲಿವುಡ್ ವರೆಗೂ ತಲುಪಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
ಇನ್ನು ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಬೇರೆ ವಿಷಯಗಳಿಗೆ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಸದಾ ಒಂದೆಲ್ಲಾ ಒಂದು ವಿಷಯಕ್ಕೆ ನೆಟ್ಟಿಗರು ರಶ್ಮಿಕಾ ಅವರನ್ನು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಇನ್ನು ಹೆಚ್ಚಾಗಿ ನಟಿ ರಶ್ಮಿಕಾ ಅವರ ಹೆಸರು ವಿಜಯ್ ದೇವರಕೊಂಡ ಜೊತೆಗೆ ಕೇಳಿ ಬರುತ್ತದೆ.
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಇಬ್ಬರೂ ಟಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈ ಜೋಡಿಯ ಕೆಮಿಸ್ಟ್ರಿ ಅಭಿಮಾನಿಗಳಿಗೆ ಬಹಳ ಇಷ್ಟ. ಇನ್ನು ಗೀತಾ ಗೋವಿಂದಂ ಹಾಗೂ ಡಿಯರ್ ಕಾಂರೇಡ್ ಸಿನಿಮಾಗಳಲ್ಲಿ ಈ ಜೋಡಿ ಒಟ್ಟಾಗಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದಾರೆ.
ಇನ್ನು ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಈ ಸಿನಿಮಾಗಳಲ್ಲಿ ಬಹಳ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗಳಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಈ ಕುರಿತು ನಟಿ ರಶ್ಮಿಕಾ ಅವರನ್ನು ಬಹಳ ಟ್ರೋಲ್ ಮಾಡಲಾಗಿತ್ತು.
ಇನ್ನು ನಟಿ ರಶ್ಮಿಕಾ ಮಂದಣ್ಣ ಇದೀಗ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ, ನಾನು ಆ ದೃಶ್ಯಗಳಲ್ಲಿ ನಟಿಸಿದ ನಂತರ ನಾನು ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ನೆಗಟಿವ್ ಕಾಮೆಂಟ್ಸ್ ಗಳನ್ನು ಎದುರಿಸಬೇಕಾಯಿತು. ದಿನಾಲೂ ಈ ರೀತಿಯ ಕಾಮೆಂಟ್ಸ್ ಗಳನ್ನು ಓದಿದಾಗ ನನ್ನ ಮನಸ್ಸಿಗೆ ಬಹಳ ಬೇಸರವಾಗುತ್ತಿತ್ತು.
ಅದೆಷ್ಟೋ ಬಾರಿ ನಾನು ನಿದ್ದೆಯಿಂದ ಎದ್ದು ಅತ್ತಿದ್ದೇನೆ. ನನ್ನ ಬಗ್ಗೆ ಸಾಕಷ್ಟು ಟ್ರೋಲ್ ಮಾಡಲಾಯಿತು. ನಾನು ಇದನ್ನೆಲ್ಲಾ ನೋಡಿ ಬಹಳ ಕುಗ್ಗಿ ಹೋಗಿದ್ದೆ, ಸಿನಿಮಾಗಳಲ್ಲಿ ಇನ್ನು ಮುಂದೆ ನಟಿಸುವುದೇ ಬೇಡ ಎನ್ನುವ ನಿರ್ಧಾರ ಸಹ ಮಾಡಿದ್ದೆ. ಅಷ್ಟರ ಮಟ್ಟಿಗೆ ನನ್ನ ಮಾನಸಿಕ ಸ್ಥಿತಿ ಹದಗೆಟ್ಟಿತ್ತು.
ಇನ್ನು ನಾನು ಮತ್ತೆ ವಿಜಯ್ ದೇವರಕೊಂಡ ಒಳ್ಳೆಯ ಗೆಳೆಯರು ಅಷ್ಟೇ. ನಮ್ಮಿಬ್ಬರ ನಡುವೆ ತೆರೆ ಮೇಲೆ ಒಳ್ಳೆಯ ಕೆಮಿಸ್ಟ್ರಿ ಇದೆ, ಈಗಾಗಿ ಅಭಿಮಾನಿಗಳು ನಮ್ಮನ್ನು ಇಷ್ಟ ಪಡುತ್ತಾರೆ. ಅಷ್ಟೇ ಇದನ್ನು ಹೊರತು ಪಡಿಸಿ ನಮ್ಮ ಮದ್ಯೆ ಏನು ಇಲ್ಲ ಎಂದಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು, ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ…