ದಸರಾದಲ್ಲಿ ಎಲ್ಲರ ಗಮನ ಸೆಳೆದ ಅಪ್ಪು ಭೃಹತ್ ಪ್ರತಿಮೆ! ಅಪ್ಪು ಅವರ ಈ ಟ್ಯಾಬ್ಲೆಲು ನೀವು ಒಮ್ಮೆ ನೋಡಿ!…

ಸ್ಯಾಂಡಲವುಡ್

ಅಪ್ಪು ಅವರು ನಮ್ಮಣ್ಣಿ ಬಿಟ್ಟು ಹೋಗಿ ಈಗಾಗಲೇ ಒಂದು ವರ್ಷ ಕಳೆದು ಹೋಗಿರುವುದು ನಮ್ಮೆಲ್ಲರಿಗೂ ಸಹ ಗೊತ್ತೆ ಇದೆ. ಇಂದಿಗೂ ಸಹ ಅದೆಷ್ಟೋ ಜನರು ಆ ದೇವರಲ್ಲಿ ಅಪ್ಪು ಅವರನ್ನು ಇಷ್ಟು ಬೇಗ ಕರೆದುಕೊಂಡು ಹೋಗಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿರುತ್ತಾರೆ.

ಇನ್ನು ನಮ್ಮ ಅಪ್ಪು ಇಂದು ನಮ್ಮ ಜೊತೆ ಇಲ್ಲವಾದರೂ ಅವರ ನೆನಪುಗಳು ಮಾತ್ರ ನಮ್ಮ ಜೊತೆಗೆ ಸದಾ ಮಾಸದಂತೆ ಉಳಿದು ಬಿಟ್ಟಿದೆ. ಇನ್ನು ಅಪ್ಪು ಅವರ ಅಭಿಮಾನಿ ಸಂಖ್ಯೆಯ ಹೇಳಲು ಒಂದು ಮಾತಿಲ್ಲ. ಅಪ್ಪು ಅವರ ನಿ*ಧನದ ನಂತರ ಅವರ ಅಭಿಮಾನಿ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.

ಹೌದು ಅಪ್ಪು ಬದುಕಿರುವಾಗ ತಮ್ಮ ಮಾನವೀಯತೆ ಗುಣದಿಂದ ಸಾಕಷ್ಟು ಬಡವರಿಗೆ ಸಹಾಯ ಮಾಡಿದ್ದರು. ಇನ್ನು ಅದೆಷ್ಟೋ ಜನರಿಗೆ ಯಾರಿಗೂ ತಿಳಿಯದ ಹಾಗೆ ಸಹಾಯ ಮಾಡಿದ್ದಾರೆ. ಇಂತಹ ಮಾನವೀಯತೆ ಗುಣ ಇರುವ ಮನುಷ್ಯನನ್ನು ಕಳೆದು ಕೊಂಡು ನಾವೆಲ್ಲರೂ ಅನಾಥರಾಗಿದ್ದೇವೆ ಎಂದರೆ ತಪ್ಪಾಗಲಾರದು.

ಇನ್ನು ಇಂದಿಗೂ ಸಹ ಅಪ್ಪು ಹೆಸರಿನಲ್ಲಿ ಅವರ ಅಭಿಮಾನಿಗಳು ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಅಪ್ಪು ಹೆಸರಿನಲ್ಲಿ ಅನ್ನಧಾನ, ರಕ್ತಧಾನ ಹಾಗೂ ಇನ್ನಿತರ ಕೆಲಸಗಳನ್ನು ಅವರ ಅಭಿಮಾನಿಗಳು ಮಾಡುತ್ತಾ, ಅವರ ಹೆಸರು ಎಂದಿಗೂ ನಮ್ಮೊಂದಿಗೆ ಇರುವಂತೆ ನೋಡಿಕೊಳ್ಳುತ್ತಿದ್ದಾರೆ.

ಇನ್ನು ಇಂದು ಮೈಸೂರು ದಸರಾ, ಈ ನಾಡ ಹಬ್ಬಕ್ಕೆ ಅದೆಷ್ಟೋ ಜನರು ಮೈಸೂರಿಗೆ ಭೇಟಿ ನೀಡಿ ಅಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಇನ್ನು ಅಂಬಾರಿಯ ಮೆರವಣಿಗೆಯ ಹಿಂದೆ ನಮ್ಮ ರಾಜ್ಯದ ಅನೇಕ ಶಿಲ್ಪ ಕಲೆ ಹಾಗೂ ಇನ್ನಿತರ ಗೊಂಬೆಗಳು ಅಂಬಾರಿಯ ಹಿಂದೆ ಮೆರವಣಿಗೆಯಲ್ಲಿ ಭಾಗಿಯಾಗುತ್ತದೆ.

ಇನ್ನು ಈ ವರ್ಷ ಅಪ್ಪು ಅವರ ಭೃಹತ್ ಪ್ರತಿಮೆ ಅಂಬಾರಿ ಮೆರವಣಿಗೆಯಲ್ಲಿ ಭಾಗಿಯಾಗಿದೆ. ಇನ್ನು ಅಪ್ಪು ಅವರ ಈ ಪ್ರತಿಮೆ ನೋಡಿ ಎಲ್ಲರೂ ಖುಷಿಯಾಗಿದ್ದಾರೆ. ಅಪ್ಪು ಅವರ ಈ ಭೃಹತ್ ಪ್ರತಿಮೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಸಾಕಷ್ಟು ಜನ ಮುಗಿ ಬಿದ್ದಿದ್ದಾರೆ.

ಇನ್ನು ಅಪ್ಪು ಅವರ ಮೇಲೆ ಅಭಿಮಾನಿಗಳಿಗೆ ಇರುವ ಅಭಿಮಾನ ಎಂತದ್ದು ಎನ್ನುವುದನ್ನು ಅವರು ಆಗಾಗ ನಿರೂಪಿಸುತ್ತಿರುತ್ತಾರೆ. ಇನ್ನು ಇದೀಗ ಮೈಸೂರಿನ ದಸರಾ ಹಬ್ಬದಲ್ಲಿ ಅಪ್ಪು ಅವರ ಭೃಹತ್ ಪ್ರತಿಮೆ ಎಲ್ಲರ ಘಮನ ಸೆಳೆಯುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ.

Leave a Reply

Your email address will not be published. Required fields are marked *