ಸ್ಟೇಜ್ ಮೇಲೆ ಭರ್ಜರಿಯಾಗಿ ಹುಲಿ ಡ್ಯಾನ್ಸ್ ಮಾಡಿದ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ! ವಿಡಿಯೋ ನೋಡಿ!…

ಸ್ಯಾಂಡಲವುಡ್

ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಈ ಹೆಸರುಗಳನ್ನು ಯಾರು ತಾನೇ ಕೇಳಿಲ್ಲ ನೀವೇ ಹೇಳಿ. ಇದೀಗ ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಸಿನಿಮಾಗಳ ಮೂಲಕ ಈ ಎರಡು ಕಲಾವಿದರು ಸಾಕಷ್ಟು ಸದ್ದು ಮಾಡುತ್ತಿರುವುದು ನಿಮ್ಮೆಲ್ಲರಿಗೂ ಸಹ ಗೊತ್ತೆ ಇದೆ.

ಇನ್ನು ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಇದೀಗ ಎಲ್ಲೆಡೆ ಬಿಡುಗಡೆಯಾಗಿ ಬಹಳ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರು ರಿಷಬ್ ಶೆಟ್ಟಿ ಅವರ ಅಭಿನಯಕ್ಕೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಇನ್ನು ಕೆಲವರು ಈ ಸಿನಿಮಾ ನೋಡಲು ಕಾತುರಾಗಿದ್ದು, ಟಿಕೆಟ್ ಸಿಗದೆ ಸಪ್ಪೆ ಮೊರೆ ಹಾಕಿದ್ದಾರೆ.

ಹೌದು ಇದೀಗ ಕಾಂತಾರ ಸಿನಿಮಾ ಬಿಡುಗಡೆಯಾಗಿ ಸುಮಾರು ಒಂದು ವಾರ ಕಳೆದು ಹೋಗಿದ್ದರೂ ಕೂಡ ಇಂದಿಗೂ ಸಹ ಈ ಸಿನಿಮಾ ಎಲ್ಲಾ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಆಗಿದೆ. ಒಮ್ಮೆ ಸಿನಿಮಾ ನೋಡಿದ ಕೆಲವರು ಈ ಸಿನಿಮಾವನ್ನು ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಸದ್ದು ಮಾಡುತ್ತಿದೆ.

ಇನ್ನು ರಾಜ್ ಬಿ ಶೆಟ್ಟಿ ಅವರು ಕೂಡ ಒಬ್ಬ ಒಳ್ಳೆಯ ಕಲಾವಿದ ಎನ್ನುವಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ ಅವರ ನಿರ್ದೇಶನದಲ್ಲಿ ಇಲ್ಲಿಯವರೆಗೂ ಸಾಕಷ್ಟು ಸಿನಿಮಾಗಳು ಬಂದು ಹೋಗಿದೆ. ಇನ್ನು ರಾಜ್ ಬಿ ಶೆಟ್ಟಿ ಒಳ್ಳೆಯ ನಿರ್ದೇಶಕ ಮಾತ್ರವಲ್ಲ ಒಬ್ಬ ಒಳ್ಳೆಯ ನಟ ಕೂಡ ಹೌದು.

ಸದ್ಯ ರಾಜ್ ಬಿ ಶೆಟ್ಟಿ ಸ್ಯಾಂಡಲ್ವುಡ್ ನ ಮೋಹಕ ತಾರೆ ರಮ್ಯಾ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದು, ಈ ಬಗ್ಗೆ ಸ್ವತಃ ನಟಿ ರಮ್ಯಾ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಹಲವು ವರ್ಷಗಳ ಬಳಿಕ ನಟಿ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದು, ತಮ್ಮ ಮೊದಲ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಅವರ ಜೊತೆಗೆ ಮಾಡಲಿದ್ದಾರೆ.

ಇನ್ನು ರಾಜ್ ಬಿ ಶೆಟ್ಟಿ ಹಾಗೂ ಮೋಹಕ ತಾರೆ ರಮ್ಯಾ ಅವರ ಕಾಂಬಿನೇಷನ್ ನಲ್ಲಿ ಬರುವಂತಹ ಸಿನಿಮಾದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ ಎನ್ನುವ ವಿಷಯ ಕೂಡ ತಿಳಿದು ಬಂದಿದೆ.

ಇನ್ನು ಕಾಂತಾರ ಸಿನಿಮಾದ ಪ್ರಮೋಷನ್ ವೇಳೆ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಇಬ್ಬರೂ ಅದ್ಭುತವಾಗಿ ಸ್ಟೇಜ್ ಮೇಲೆ ಹುಲಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *