ಜನರಿಗೆ ಅಪ್ಪು ಮೇಲೆ ಇಂದಿಗೂ ಎಷ್ಟು ಅಭಿಮಾನ ಇದೆ ಗೊತ್ತಾ ಈ ವಿಡಿಯೋದಲ್ಲಿ ನೋಡಿ!..

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ಮತ್ತು ಮೇರು ನಟ ಎಂದರೆ ಮತ್ತು ಎಲ್ಲರಿಗೂ ಅಚ್ಚುಮೆಚ್ಚಿನ ನಾಯಕ ಒಬ್ಬರು ದ್ವೇಷಿಸದಂತಹ ನಾಯಕ ಎಂದರೆ ಅದು ನಮ್ಮ ಡಾ. ಪುನೀತ್ ರಾಜಕುಮಾರ್ ಅವರೇ ಹೌದು. ಪುನೀತ್ ರಾಜಕುಮಾರ್ ಅವರಿಗೆ ಎಲ್ಲರೂ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರು ಸಾಲದು.

ಆ ಮಟ್ಟಿಗೆ ಎಲ್ಲರನ್ನು ಕೂಡ ವಿಶ್ವಾಸದಿಂದ ಪ್ರೀತಿಯಿಂದ ಕಾಣುತ್ತಿದ್ದಂತಹ ಏಕೈಕ ನಟ ಅದು ಪುನೀತ್ ರಾಜಕುಮಾರ್ ಮಾತ್ರ. ಹೀಗೆ ಪುನೀತ್ ರಾಜಕುಮಾರ್ ಅವರು ಅವರ ಸಿನಿ ಜೀವನದಲ್ಲಿ ಮಾತ್ರವಲ್ಲದೆ ನಿಜ ಜೀವಿನದಲ್ಲಿಯೂ ಕೂಡ ಹೀರೋ ಆಗಿದ್ದರು.

ಡಾಕ್ಟರ್ ಪುನೀತ್ ರಾಜಕುಮಾರ್ ಅವರಂದರೆ ಇಡೀ ಕರ್ನಾಟಕ ಜನತೆಗೆ ಕೂಡ ಅಚ್ಚುಮೆಚ್ಚು ಹೌದು ಅವರನ್ನು ಪ್ರೀತಿಯಿಂದ ಅಪ್ಪು ಎಂದು ಕರೆದು ಎಲ್ಲರೂ ಕೂಡ ಅವರನ್ನು ಬಹಳ ಗೌರವದಿಂದ ಮತ್ತು ಪ್ರೀತಿಯಿಂದ ಕಾಣುತ್ತಿದ್ದರು. ಆದರೆ ಅಪ್ಪು ಅವರ ಅಗಲಿಕೆ ಎಲ್ಲರನ್ನೂ ಕೂಡ ಬೇಸರದಲ್ಲಿ ನೂಕಿದೆ ಅಪ್ಪು ಅವರ ಅಗಲಿಕೆಯಿಂದ ಇಡೀ ಚಂದನವನದಲ್ಲಿ ಶೋಕ ಮನೆ ಮಾಡಿದೆ .

ಅದನ್ನು ಎಂದಿಗೂ ಸಹ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಏಕೆಂದರೆ ಯಾರಿಗೂ ಕೂಡ ಕೆಟ್ಟದ್ದನ್ನು ಬಯಸದಂತಹ ಒಂದು ಚಿಕ್ಕ ಇರುವೆಗೂ ಕೂಡ ಕೇಡನ್ನು ಬಯಸದಂತಹ ಜೀವ ಅಪ್ಪು ಅವರದ್ದು. ಇನ್ನು ನಾಡಹಬ್ಬ ದಸರಾ ಬಹಳಷ್ಟು ಮೆರಗು ನೀಡಿದೆ ಮೈಸೂರಿಗೆ ಮತ್ತು ಮೈಸೂರಿನ ದಸರಾ ಎಂದರೆ ಎಲ್ಲರಿಗೂ ಕೂಡ ಬಹಳಷ್ಟು ಇಷ್ಟ.

ನಾಡಹಬ್ಬ ದಸರವನ್ನು ವೀಕ್ಷಣೆ ಮಾಡಲು ಹಲವಾರು ಕಡೆಯಿಂದ ಜನರು ಆಗಮಿಸುತ್ತಿರುತ್ತಾರೆ. ಪ್ರತಿನಿತ್ಯವೂ ಕೂಡ ಮೈಸೂರಿಗೆ ಅಪಾರ ಸಂಖ್ಯೆಯಲ್ಲಿ ಜನರ ಆಗಮನವಾಗುತ್ತಾ ಇರುತ್ತದೆ ಅದು ಕೂಡ ದಸರಾ ಸಮಯದಲ್ಲಿ ಇಂತಹ ದಸರಾದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತದೆ.

ಅದರಲ್ಲಿ ಯುವ ದಸರಾದಲ್ಲಿ ಈ ಬಾರಿ ಅಪ್ಪು ಅವರ ನಮನವನ್ನು ಕೂಡ ಮಾಡಲಾಯಿತು. ಅಪ್ಪು ನಮನ ಎಂಬ ಕಾರ್ಯಕ್ರಮಕ್ಕೆ ಪುನೀತ್ ರಾಜಕುಮಾರ್ ಅವರ ಹೆಂಡತಿ ಕೂಡ ಭಾಗವಹಿಸಿದ್ದರು. ಮತ್ತು ಜಂಬು ಸವಾರಿಯಲ್ಲಿ ನಡೆಯುವಂತಹ ಮೆರವಣಿಗೆಯಲ್ಲಿ ಅಪ್ಪು ಅವರ ಭಾವಚಿತ್ರವನ್ನು ದೊಡ್ಡ ಟ್ಯಾಬ್ಲೋವಾಗಿ ಮಾಡಿದ್ದರು.

ಅದನ್ನು ಮೆರವಣಿಗೆ ಮಾಡಲಾಯಿತು ಅದನ್ನು ಎಲ್ಲದಕ್ಕಿಂತ ಮುಂದೆ ಇರಿಸಲಾಗಿತ್ತು ಹೀಗೆ ಅಪ್ಪು ಅವರಿಗೆ ದಸರಾ ಹಬ್ಬದಲ್ಲಿ ಬಹಳಷ್ಟು ಕೊಡುಗೆಯನ್ನು ಜನ ನೀಡುತ್ತಿದ್ದಾರೆ ಅವರ ಅಗಲಿಕೆ ಇನ್ನೂ ಕೂಡ ಯಾರಲ್ಲಿಯೂ ವಾಸ್ತವವಾಗಿ ಬಂದಿಲ್ಲ. ಇನ್ನು ಅಪ್ಪು ಅವರ ಮೇಲಿನ ಈ ಪ್ರೀತಿ ಇದೇ ರೀತಿಯಾಗಿ ಮುಂದುವರೆಯಲಿ.

Leave a Reply

Your email address will not be published. Required fields are marked *