ನಮಸ್ಕಾರ ವೀಕ್ಷಕರೇ ನಮ್ಮ ನಾಡ ದಸರಾ ಹಬ್ಬವು ಬಹಳ ಅದ್ದೂರಿಯಾಗಿ ಈ ಬಾರಿ ನಡೆದಿದೆ ಮತ್ತು ಎರಡು ವರ್ಷಗಳಿಂದ ದಸರಾ ಹಬ್ಬವನ್ನು ಸರಿಯಾಗಿ ಆಚರಿಸಲು ಆಗಿರಲಿಲ್ಲ ಮತ್ತು ಎಲ್ಲೆಡೆ ಕೋವಿಡ್ ಆಗಿದ್ದ ಕಾರಣದಿಂದಾಗಿ ಎಲ್ಲಾ ಆಚರಣೆಯಲ್ಲಿಯೂ ಕೂಡ ಸೀಮಿತ ಮಾಡಲಾಗಿತ್ತು.
ಹಾಗಾಗಿ ಎಲ್ಲರೂ ಕೂಡ ಬೇಸರವನ್ನು ವ್ಯಕ್ತಪಡಿಸಿದ್ದರು ಆದರೆ ಈ ಬಾರಿ ದಸರಾವನ್ನು ಎಲ್ಲರೂ ಕೂಡ ಕಣ್ಣು ತುಂಬಿಕೊಂಡಿದ್ದಾರೆ . ಈ ಬಾರಿ ದಸರಾ ಎಲ್ಲರೂ ಮನವನ್ನು ಮೆಚ್ಚಿದ ದಸರವಾಗಿದೆ. ಕಾರಣ ಇದಕ್ಕೆ ಬಹಳಷ್ಟು ಇದೆ. ಈ ಬಾರಿ ದಸರದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳು ಏರ್ಪಟ್ಟಿದ್ದವು.
ಅದರಲ್ಲಿ ಯುವ ದಸರಾ ಕೂಡ ಒಂದು ಇದರ ಜೊತೆಯಲ್ಲಿ ಯುವದಸರಾಗಿ ಹಲವಾರು ಗೆಸ್ಟ್ ಗಳನ್ನು ಆಹ್ವಾನ ಮಾಡಲಾಗಿತ್ತು ಅದರಲ್ಲಿ ಹಲವಾರು ಸ್ಟಾರ್ ನಟ ನಟಿಯರು ಇದ್ದರು ಆದರೆ ಎರಡನೇ ದಿನ ಯುವ ದಸರಾದಲ್ಲಿ ಪುನೀತ್ ರಾಜಕುಮಾರ್ ಅವರ ಹೆಂಡತಿ ಅಶ್ವಿನಿ ಮೇಡಂ ಅವರು ಭಾಗವಹಿಸಿದ್ದರು.
ಎರಡನೇ ದಿನವನ್ನು ಅಪ್ಪು ಅವರ ನಮನದ ಕಾರ್ಯಕ್ರಮ ಎಂದೆ ಆಯೋಜಿಸಲಾಗಿತ್ತು. ಅದಕ್ಕೆ ಹಲವಾರು ಸಂಗೀತಗಾರರು ಬಂದು ಹಾಡನ್ನು ಹಾಡುವ ಮೂಲಕ ಅಪ್ಪು ಅವರಿಗೆ ನಮನವನ್ನು ಸಲ್ಲಿಸಿದರು ಮತ್ತು ಜಂಬುಸವಾರಿಯಲ್ಲಿಯೂ ಕೂಡ ವಿಶೇಷವಾಗಿ ಅಪ್ಪು ಅವರ ಸ್ತಬ್ಧ ಚಿತ್ರವನ್ನು ದೊಡ್ಡದಾಗಿ ಏರ್ಪಡಿಸಿ ಅದನ್ನು ಮೆರವಣಿಗೆ ಮಾಡುವ ಸಂದರ್ಭದಲ್ಲಿ ಮೊದಲನೆಯದಾಗಿ ಇಡಲಾಗಿತ್ತು.
ಇದನ್ನು ಕಂಡಂತಹ ಎಲ್ಲರೂ ಕೂಡ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದರು ಮತ್ತು ಎಲ್ಲರಲ್ಲಿಯೂ ಕೂಡ ಹೊಸ ಆಶಾಭಾವನೆ ಮೂಡಿತ್ತು. ಮತ್ತು ಅಪ್ಪು ಅವರನ್ನು ಕಂಡು ಆನೇಕರು ಬೆರಗಾಗಿದ್ದರು. ಇನ್ನು ಅಪ್ಪು ಅವರ ಸ್ತಬ್ಧ ಚಿತ್ರದ ಪ್ರತಿಮೆಯನ್ನು ಕಾಣುತ್ತಿದ್ದ ವೇಳೆಗೆ ಒಬ್ಬ ಹುಡುಗಿ ಅವರ ಸ್ತಬ್ಧ ಚಿತ್ರದ ಮುಂದೆ ಹೋಗಿ ಡ್ಯಾನ್ಸ್ ಮಾಡುವ ಮೂಲಕ ಅವರನ್ನು ಮತ್ತೆ ಮೆಲುಕು ಹಾಕಿದ್ದಾಳೆ.
ಈ ವಿಡಿಯೋ ಸಾಕಷ್ಟು ವೈರಲಾಗಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಮತ್ತು ಎಲ್ಲರೂ ಕೂಡ ಆ ಯುವತಿಯ ಡ್ಯಾನ್ಸ್ ವಿಡಿಯೋವನ್ನು ಬಹಳಷ್ಟು ಮೆಚ್ಚಿಕೊಂಡಿದ್ದಾರೆ ಮತ್ತು ಅಪ್ಪು ಅವರ ಮೇಲೆ ಆಕೆ ಇಟ್ಟುಕೊಂಡಿರುವ ಪ್ರೀತಿಯನ್ನು ನೆನೆದು ಎಲ್ಲರೂ ಭಾವುಕರಾಗಿದ್ದಾರೆ.
ಅಪ್ಪು ಅವರ ಅಗಲಿಕೆಯನ್ನು ಎಲ್ಲರೂ ನೆನಪಿಸಿಕೊಂಡು ಬಹಳಷ್ಟು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ..