ಧಾರವಾಹಿ ಲೋಕದಲ್ಲಿ ಹಾಗೆ ನಿರೂಪಣೆ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ಎಂದರೆ ಅದು ಶ್ವೇತಾ ಚಂಗಪ್ಪ. ನಟಿ ಶ್ವೇತಾ ಚಂಗಪ್ಪ ಯಾರಿಗೆ ತಮ್ಮ ಅದ್ಭುತ ನಟನೆ ಹಾಗೂ ಅಮೋಘ ನಿರೂಪಣೆಯಿಂದ ಸಾಕಷ್ಟು ಜನ ಮನ ಗಳಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ.
ಇನ್ನು ಕನ್ನಡ ಚಿತ್ರರಂಗದ ಅದ್ಭುತ ನಟರಲ್ಲಿ ಒಬ್ಬರಾಗಿರುವ ನಟ ಎಸ್ ನಾರಾಯಣ್ ಅವರು ಶ್ವೇತಾ ಚಂಗಪ್ಪ ಅವರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದರು. 2003 ರಲ್ಲಿ ತೆರೆಕಂಡ ಸುಮತಿ ಎಂಬ ಧಾರವಾಹಿಯ ಮೂಲಕ ನಟಿ ತಮ್ಮ ವೃತ್ತಿ ಜೀವನವನ್ನು ಶುರು ಮಾಡಿದರು.
ಆದರೆ ನಟಿ ಶ್ವೇತಾ ಚಂಗಪ್ಪ ಹೆಚ್ಚಾಗಿ ಗುರುತಿಸಿಕೊಂಡಿದ್ದು ಮಾತ್ರ ನಂತರ ತೆರೆಕಂಡ ಕಾದಂಬರಿ ಧಾರವಾಹಿ ಮೂಲಕ. ಹೌದು 2006 ರಲ್ಲಿ ತೆರೆಕಂಡ ಕಾದಂಬರಿ ಧಾರಾವಾಹಿಯಲ್ಲಿ ಶ್ವೇತಾ ಚಂಗಪ್ಪ ಅದ್ಭುತವಾಗಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.
ಇನ್ನು ಧಾರವಾಹಿ ಲೋಕದಲ್ಲಿ ಸಾಕಷ್ಟು ಜನ ಪ್ರಿಯತೆ ಪಡೆದುಕೊಂಡ ನಟಿ ಶ್ವೇತಾ ಚಂಗಪ್ಪ ನಂತರ ನಿರೂಪಣೆ ಲೋಕದಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ. ಇನ್ನು ನಟಿ ನಂತರ ದಿನಗಳಲ್ಲಿ ಸೃಜನ್ ಲೋಕೇಶ್ ಅವರ ಜೊತೆಗೆ ಮಜಾ ಟಾಕೀಸ್ ನಲ್ಲಿ ಎಲ್ಲರನ್ನು ನಗಿಸುವ ಕೆಲಸ ಸಹ ಮಾಡಿದ್ದಾರೆ.
ಇನ್ನು ಮಜಾ ಟಾಕೀಸ್ ನಲ್ಲಿ ಸೃಜನ್ ಜೊತೆಗೆ ಅವರ ಪತ್ನಿ ರಾಣಿ ಪಾತ್ರದಲ್ಲಿ ಅದೆಷ್ಟೋ ಜನರ ಮನ ಗೆದ್ದಿದ್ದಾರೆ ಶ್ವೇತಾ ಚಂಗಪ್ಪ. ಇನ್ನು ಇತ್ತೀಚೆಗೆ ಮಾಧ್ಯಮದ ಸಂದರ್ಶನ ನೀಡುತ್ತಾ, ತನಗೆ ಸೃಜನ್ ಲೋಕೇಶ್ ನನ್ನು ಕಂಡರೆ ಆಗುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಹೌದು ನಟಿ ಶ್ವೇತಾ ಚಂಗಪ್ಪ ಮಾಧ್ಯಮದ ಸಂದರ್ಶನ ನೀಡುತ್ತಾ ತನಗೆ ಮೊದ ಮೊದಲು ಸೃಜನ್ ಲೋಕೇಶ್ ನನ್ನು ಕಂಡರೆ ಆಗುತ್ತಿರಲಿಲ್ಲ, ನಂತರ ಅವರು ಗ್ರೀಷ್ಮಾ ಅವರ ಪತಿ ಎಂದು ತಿಳಿದ ಮೇಲೆ ನನ್ನ ಒಪಿನಿಯನ್ ಅವರ ಮೇಲೆ ಸಂಪೂರ್ಣವಾಗಿ ಬದಲಾಯಿತು.
ಇನ್ನು ಸೃಜನ್ ಅವರಿಗೂ ಕೂಡ ನನ್ನ ಮೇಲೆ ಇದೆ ರೀತಿಯ ಭಾವನೆ ಇತ್ತು. ಇನ್ನು ಇದೀಗ ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೇವೆ. ಇನ್ನು ಶೀಘ್ರದಲ್ಲೇ ಮಜಾ ಟಾಕೀಸ್ ಮತ್ತೊಂದು ಭಾಗ ಶುರುವಾಗುತ್ತಿದ್ದು, ಮತ್ತೆ ರಾಣಿ ಪಾತ್ರದಲ್ಲಿ ಎಲ್ಲರನ್ನು ರಂಜಿಸಲು ಬರುತ್ತೇನೆ ಎಂದಿದ್ದಾರೆ ಶ್ವೇತಾ ಚಂಗಪ್ಪ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಹಾಗೂ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..