ಒಂದು ಕಾಂತಾರ ನೂರು ಕೆಜಿಎಫ್ ಗೆ ಸಮಯ! ಕೆಜಿಎಫ್ ದಾಖಲೆಯನ್ನೇ ಮೀರಿಸುವ ದಿಕ್ಕಿನಲ್ಲಿ ಸಾಗುತ್ತಿದೆ ಕಾಂತಾರ!.. ಅಭಿಮಾನಿಗಳು ಹೇಳಿದ್ದೆನು ನೋಡಿ

ಸ್ಯಾಂಡಲವುಡ್

ಕನ್ನಡ ಚಿತ್ರರಂಗದಲ್ಲಿ ಸದ್ಯ ತುಂಬಾ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ ಎಂದರೆ ಅದು ಕಾಂತಾರ. ಕಾಂತಾರ ಸಿನಿಮಾ ಬಿಡುಗಡೆಯಾಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ, ಜೊತೆಗೆ ಎಲ್ಲೆಡೆಯಿಂದ ಕಾಂತಾರ ಸಿನಿಮಾಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರು ಈ ಸಿನಿಮಾಗೆ ತುಂಬಾ ಪ್ರೀತಿ ಕೊಡುತ್ತಿದ್ದಾರೆ. ಇನ್ನು ಈ ಸಿನಿಮಾ ನೋಡಿ ಸ್ಟಾರ್ ಕಲಾವಿದರು ಕೂಡ ಫುಲ್ ಫಿದಾ ಆಗಿದ್ದಾರೆ. ಸದ್ಯ ಎಲ್ಲಿ ನೋಡಿದರೂ ಸಹ ಕಾಂತಾರ ಸಿನಿಮಾದ ಬಗ್ಗೆಯೇ ಚರ್ಚೆಗಳು ಕೇಳಿ ಬರುತ್ತಿದೆ. ಅಷ್ಟರ ಮಟ್ಟಿಗೆ ಕಾಂತಾರ ಸಿನಿಮಾ ಹಿಟ್ ಆಗಿದೆ.

ಕಾಂತಾರ ಸಿನಿಮಾ ದೈವಾರಾಧನೆ ಕುರಿತ ಕಥೆಯಾಗಿದ್ದು, ಈ ಸಿನಿಮಾ ನೋಡಿ ಎಲ್ಲರೂ ಮನ ಸೊತ್ತಿದ್ದಾರೆ. ಇನ್ನು ಕಾಂತಾರ ಸಿನಿಮಾದಲ್ಲಿ ಕನ್ನಡ ಪ್ರತಿಭಾನ್ವಿತ ಕಲಾವಿದ ರಿಷಬ್ ಶೆಟ್ಟಿ ನಟಿಸಿದ್ದು, ಎಲ್ಲರಿಗೂ ಈ ವಿಷಯ ತುಂಬಾ ಖುಷಿ ತಂದು ಕೊಟ್ಟಿದೆ. ಇನ್ನು ರಿಷಬ್ ಶೆಟ್ಟಿ ಅವರ ಅಭಿನಯಕ್ಕೆ ಎಲ್ಲರೂ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಮೊದಲು ಕಾಂತಾರ ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು, ಆದರೆ ಈ ಸಿನಿಮಾ ಎಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿ ಮಾಡಿದೆ ಎಂದರೆ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಂತೆ ಎಲ್ಲರೂ ರಿಷಬ್ ಶೆಟ್ಟಿ ಬಳಿ ಕೋರಿಕೆ ಇಟ್ಟಿದ್ದರು.

ಇನ್ನು ಅಭಿಮಾನಿಗಳ ಕೋರಿಕೆಯಂತೆ ಕಾಂತಾರ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಾಡಲಾಗಿದೆ. ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಇತ್ತಿಚೆಗೆ ಬಿಡುಗಡೆಯಾಗಿದೆ. ಇನ್ನು ಈ ಸಿನಿಮಾ ಬಿಡುಗಡೆಯಾಗಿ ಸುಮಾರು 12 ದಿನಗಳ ಕಳೆದು ಹೋಗಿದೆ.

ಆದರೂ ಕೂಡ ಕಾಂತಾರ ಸಿನಿಮಾದ ಕ್ರೇಜ್ ಕಡಿಮೆ ಆಗಿಲ್ಲ. ಇಂದಿಗೂ ಸಹ ಥಿಯೇಟರ್ ನಲ್ಲಿ ಹೌಸ್ ಫುಲ್ ಷೋ ಕೊಡುತ್ತಿದೆ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ. ಇನ್ನು ಸಿನಿಮಾ ನೋಡಿದ ಕೆಲವರು ತಮ್ಮ ಅಭಿಪ್ರಾಯಗಳನ್ನು ಕ್ಯಾಮೆರ ಮುಂದೆ ಹೇಳಿದ್ದಾರೆ.

ಯಶ್ ಅವರ ಕೆಜಿಎಫ್ ಸಿನಿಮಾ ಎಷ್ಟರ ಮಟ್ಟಿಗೆ ಸುದ್ದಿ ಮಾಡಿತ್ತು ಎನ್ನುವುದು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇನ್ನು ಇದೀಗ ಸಿನಿಮಾ ನೋಡಿದ ಕೆಲವರು 100 ಕೆಜಿಎಫ್ ಒಂದು ಕಾಂತಾರ ಸಿನಿಮಾಗೆ ಸಮ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *