ಕನ್ನಡ ಚಿತ್ರರಂಗದ ಹೆಮ್ಮೆಯ ಹಾಸ್ಯ ನಟ ಚಿಕ್ಕಣ್ಣ ಎಂಬುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಸಿನಿಮಾರಂಗದಲ್ಲಿ ಹೆಸರು ಮಾಡುವುದು ಅಷ್ಟರ ಸುಲಭದ ಮಾತಲ್ಲ, ವೀಕ್ಷಕರು ಒಬ್ಬ ನಟನನ್ನು ಮನಸ್ಸಿಗೆ ಹತ್ತಿರ ಮಾಡಿಕೊಳ್ಳೇಬೇಕು ಎಂದರೆ ಆತ ಎಷ್ಟು ಕಷ್ಟ ಪಡಬೇಕು ಎನ್ನುವುದು ಊಹಿಸಲು ಸಾಧ್ಯವಿಲ್ಲ.
ಚಿಕ್ಕಣ್ಣ ಕನ್ನಡ ಚಿತ್ರರಂಗದ ಅದ್ಭುತ ಹಾಸ್ಯ ನಟರಲ್ಲಿ ಒಬ್ಬರು. ಸಿನಿಮಾರಂಗದಲ್ಲಿ ಯಾವುದೇ ಬ್ಯಾಗ್ ಗ್ರೌಂಡ್ ಇಲ್ಲದೆ. ತಮ್ಮ ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡವರು ಚಿಕ್ಕಣ್ಣ. ತಮ್ಮ ಹಾಸ್ಯ ಡೈಲಾಗ್ ಗಳ ಮೂಲಕ ಚಿಕ್ಕಣ್ಣ ಎಲ್ಲರ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದಾರೆ.
ಕನ್ನಡ ಅದೆಷ್ಟೋ ಸ್ಟಾರ್ ನಟರ ಸಿನಿಮಾಗಳಲ್ಲಿ ಚಿಕ್ಕಣ್ಣ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುದೀಪ್, ದರ್ಶನ್, ಗಣೇಶ್, ಯಶ್ ಸೇರಿದಂತೆ ಇನ್ನು ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ಪೋಷಕ ಪಾತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಚಿಕ್ಕಣ್ಣ ಅದ್ಭುತವಾಗಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಚಿಕ್ಕಣ್ಣ ಅವರು ಇದೀಗ ಇತ್ತೀಚೆಗೆ ಹೀರೋ ಆಗಿ ಲಾಂಚ್ ಆಗುತ್ತಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಹೌದು ಇಷ್ಟು ದಿನ ಹಾಸ್ಯ ಪಾತ್ರಗಳಲ್ಲಿ ಹಾಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಚಿಕ್ಕಣ್ಣ ಇದೀಗ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಚಿಕ್ಕಣ್ಣ ನಟನೆಯ ಈ ಸಿನಿಮಾಗೆ ನಾಯಕಿಯಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಹಿಟ್ಲರ್ ಕಲ್ಯಾಣ ಖ್ಯಾತಿಯ ಮಲೈಕಾ ವಸುಪಾಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇತ್ತೀಚೆಗೆ ಈ ವಿಷಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಸುದ್ದಿ ಮಾಡಿತ್ತು.
ಇನ್ನು ಚಿಕ್ಕಣ್ಣ ಅವರ ಸಿನಿಮಾದಲ್ಲಿ ಐಟಂ ಹಾಡಿಗೆ ಬಾಲಿವುಡ್ ನಟಿ ಸನ್ನಿ ಲಿಯೋನಿ ಹೆಜ್ಜೆ ಹಾಕುತ್ತಿರುವುದು ವಿಶೇಷ ಎನ್ನಬಹುದು. ಇನ್ನು ಸದ್ಯ ಈ ಹಾಡಿನ ಶೂ,ಟಿಂಗ್ ನಡೆಯುತ್ತಿದ್ದು, ಕೆಲವು ದೃಶ್ಯಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸನ್ನಿ ಲಿಯೋನಿ ಜೊತೆಗೆ ಚಿಕ್ಕಣ್ಣ ಈ ಹಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದು, ಚಿಕ್ಕಣ್ಣ ಅವರ ಈ ಸಾಧನೆಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ನಿಮಗೂ ಕೂಡ ಚಿಕ್ಕಣ್ಣ ಇಷ್ಟ ಎಂಬಲ್ಲಿ, ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು, ಶೇರ್ ಮಾಡಿ ಹಾಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..