ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ನಾವು ನೋಡಿರುವಂತಹ ಅನೇಕ ವ್ಯಕ್ತಿಗಳನ್ನು ನಾವು ದೇವರೆಂದು ಭಾವಿಸುತ್ತೇವೆ ಆದರೆ ನಿಜವಾಗಿಯೂ ಕೂಡ ಅದು ಮನಸ್ಸಿನಿಂದ ಬರಬೇಕು ಎಲ್ಲರ ಮನಸ್ಸಿನ ಭಾವನೆಯು ಒಂದೇ ಆಗಿರಬೇಕು ಆಗ ಮಾತ್ರ ಆ ಮನುಷ್ಯ ದೇವರೆಂದು ಕರೆಸಿಕೊಳ್ಳುತ್ತಾನೆ.
ಮತ್ತು ಮನುಷ್ಯರೂಪದ ದೇವರು ಎಂದು ಆತನನ್ನು ಕರೆಯುವುದಕ್ಕೆ ಆಗಲಿಂದಲೇ ಎಲ್ಲರೂ ಪ್ರಾರಂಭಿಸುವುದು. ಹೀಗಿರುವಲ್ಲಿ ನಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದ ರಾಜ್ಯವೇ ಒಬ್ಬ ವ್ಯಕ್ತಿಯನ್ನು ದೇವರ ರೂಪದಲ್ಲಿ ಕಾಣುತ್ತದೆ. ಆತನನ್ನು ಎಲ್ಲರೂ ಕೂಡ ಪೂಜೆ ಮಾಡುವ ಸ್ಥಳದಲ್ಲಿ ಇಟ್ಟು ನೋಡುವುದು ಮಾತ್ರವಲ್ಲದೆ ಆತನಿಗೆ ಪೂಜೆಯನ್ನು ಕೂಡ ಸಮರ್ಪಿಸುತ್ತಾರೆ.
ಆ ವ್ಯಕ್ತಿ ಯಾರು ಎಂದು ನಮಗೆ ಈಗಾಗಲೇ ತಿಳಿದಿರುತ್ತದೆ ಅವರೇ ನಮ್ಮ ಪುನೀತ್ ರಾಜಕುಮಾರ್ ಅವರು ಚಂದನವನದ ಮೇರು ನಟನಾಗಿರುವಂತಹ ಡಾಕ್ಟರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಹಲವು ತಿಂಗಳುಗಳೆ ಕಳೆದಿವೆ.
ಆದರೂ ಕೂಡ ಅವರ ನೆನಪುಗಳು ಇನ್ನು ನಮ್ಮನ್ನು ಬಿಟ್ಟು ಹೋಗಿಲ್ಲ ಅವೆಲ್ಲವೂ ಇನ್ನೂ ಅಚ್ಚ ಹಸಿರಾಗಿಯೇ ಇದೆ. ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ಇಡೀ ಚಂದನವನವೇ ಬೇಸರದಲ್ಲಿ ಮಡುಗಟ್ಟಿದೆ ಈ ರೀತಿಯಾಗಿ ಇರುವಾಗ ಅವರನ್ನು ನೆನೆದು ಅವರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಅವರನ್ನು ಇನ್ನು ಸ್ಮರಿಸುತ್ತಾ ಇದ್ದಾರೆ.
ಇನ್ನು ಅವರನ್ನು ಎಲ್ಲರೂ ಕೂಡ ಪೂಜನೆಯ ಭಾವದಿಂದ ಕಾಣುತ್ತಿದ್ದಾರೆ ಮತ್ತು ಅವರಿಗೆ ಇರುವಂತಹ ಗೌರವವನ್ನು ಯಾರು ಕೂಡ ವರ್ಣಿಸಲು ಕೂಡ ಸಾಧ್ಯವಿಲ್ಲ ಹೀಗಿರುವಾಗ ಪುನೀತ್ ರಾಜಕುಮಾರ್ ಅವರ ಒಬ್ಬ ಅಭಿಮಾನಿ ಇದೀಗ ಹೊಸ ರೀತಿಯಲ್ಲಿ ಪುನೀತ್ ರಾಜಕುಮಾರ್ ಅವರನ್ನು ನೆನೆಸಿಕೊಂಡಿದ್ದಾರೆ.
ಅವರು ತಮ್ಮ ಹೊಲದಲ್ಲಿ ಎಲ್ಲರೂ ಕೂಡ ದೇವರನ್ನು ಇಟ್ಟು ಪ್ರಾರ್ಥನೆ ಮಾಡಿದರೆ ಅವರು ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಇಟ್ಟು ಈ ಬಾರಿ ನಮ್ಮ ಬೆಳೆ ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸಿದ್ದಾರೆ ಹೀಗೆ ನೋಡಿ ಅವರ ಅಭಿಮಾನಿಗಳು ಅವರನ್ನು ಇದೀಗ ದೇವರೇಂದೇ ಪೂಜೆ ಮಾಡಲು ಪ್ರಾರಂಭಿಸಿದ್ದಾರೆ.
ಏನೇ ಇರಲಿ ನಟ ಪುನೀತ್ ರಾಜಕುಮಾರ್ ಅವರ ಸಾಧನೆ ಮತ್ತು ಅವರ ಸಾಧಾರಣ ಗುಣ ಯಾರಿಗೂ ಕೂಡ ಬೇಗನೆ ಬರುವುದಿಲ್ಲ ಇದು ಮಾತ್ರ ನಿಜ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ, ಹಾಗೆ ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ.