ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಇಂಡಸ್ಟ್ರಿಯಲ್ಲಿ ಇದೀಗ ಹೊಸ ಸಂಚಲನವೇ ಸೃಷ್ಟಿಯಾಗಿತ್ತು. ಅದರಲ್ಲೂ ಪ್ರಮುಖವಾಗಿ ಕಾಂತರಾ ಸಿನಿಮಾ ಎಲ್ಲೆಡೆಯಲ್ಲಿಯೂ ಬಹಳ ಸದ್ದು ಮಾಡುತ್ತಿದೆ ಮತ್ತು ಕಾಂತರಾ ಸಿನಿಮಾದ ವೀಕ್ಷಣೆಗೆ ಎಲ್ಲರೂ ಕೂಡ ಸಾಲು ಸಾಲಾಗಿ ಥಿಯೇಟರ್ಗಳಿಗೆ ಹೋಗಿ ವೀಕ್ಷಣೆ ಮಾಡುತ್ತಿದ್ದಾರೆ.
ಹೀಗಿರುವಲ್ಲಿ ಕಾಂತರಾ ಸಿನಿಮಾದ ಡಬ್ಬಿಂಗ್ ಆಗಿ ಹಲವು ಭಾಷೆಗಳಲ್ಲಿ ಅದನ್ನು ಭಾಷಾಂತರ ಮಾಡುವುದಕ್ಕಾಗಿ ಎಲ್ಲರೂ ಕೂಡ ಮನವಿಯನ್ನು ಕೂಡ ರಿಷಬ್ ಶೆಟ್ಟಿ ಅವರ ಮುಂದೆ ಇಟ್ಟಿದ್ದಾರೆ. ಇನ್ನು ಕಾಂತರಾ ಸಿನಿಮಾವನ್ನು ಬೇರೆ ಭಾಷೆಗಳಲ್ಲಿಯೂ ಕೂಡ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ.
ರಿಷಬ್ ಶೆಟ್ಟಿಯವರು ಬೇರೆ ಭಾಷೆಗಳಲ್ಲಿಯೂ ಕೂಡ ಡಬ್ ಮಾಡಲು ಮುಂದಾಗಿದ್ದಾರೆ ಇನ್ನೇನು ತೆಲುಗು ಭಾಷೆಯಲ್ಲಿ ರಿಲೀಸ್ ಆಗಲು ಹೊರಟಿರುವಂತಹ ಕಾಂತಾರ ಸಿನಿಮಾದ ಪ್ರಮೋಷನ್ ಕಾರ್ಯಕ್ಕಾಗಿ ಎಲ್ಲರೂ ಕೂಡ ಅಂದರೆ ಚಿತ್ರತಂಡದ ಎಲ್ಲರೂ ಕೂಡ ಹಲವು ಕಾರ್ಯಕ್ರಮಗಳಿಗೆ ಭಾಗವಹಿಸುತ್ತಾ ಇದ್ದಾರೆ.
ಮತ್ತು ಕಾಂತಾರ ಸಿನಿಮಾದ ಬೇಡಿಕೆ ಇದೀಗ ಮತ್ತಷ್ಟು ಹೆಚ್ಚಾಗಿದೆ ಹಾಗಾಗಿ ಸಿನಿಮಾದ ವೀಕ್ಷಣೆಗೆ ಎಲ್ಲರೂ ಕೂಡ ಕಾತುರರಾಗಿ ಇರುವುದು. ಇನ್ನು ರಿಷಬ್ ಶೆಟ್ಟಿ ಅವರು ಇತ್ತೀಚಿಗೆ ಮಹಾರಾಷ್ಟ್ರದ ಜನರಿಗೆ ಒಂದು ಸಂದೇಶವನ್ನು ನೀಡಿದ್ದಾರೆ ಹಾಗಾದರೆ ಆ ಸಂದೇಶವಾದರೆ ಏನು ಆ ಸಂದೇಶದಲ್ಲಿ ಏನೇನಿದೆ ಎಂಬ ವಿಚಾರವನ್ನು ತಿಳಿದುಕೊಳ್ಳೋಣ ಬನ್ನಿ.
ಅವರು ಮಹಾರಾಷ್ಟ್ರದ ಜನತೆಗೆ ಒಂದು ವಿಡಿಯೋವನ್ನು ಮಾಡಿ ಹಾಕಿದ್ದಾರೆ. ಅದರಂತೆ ಅವರು ಮಹಾರಾಷ್ಟ್ರದಲ್ಲಿರುವಂತಹ ಎಲ್ಲಾ ಕನ್ನಡಿಗರಿಗೂ ನನ್ನ ನಮಸ್ಕಾರಗಳು ಎಂದು ಶುರು ಮಾಡಿ ಕಾಂತಾರ ಸಿನಿಮಾ ಇಲ್ಲಿಯವರೆಗೂ ಬಹಳಷ್ಟು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಮತ್ತು ಕೇವಲ ಐದು ಶೋಗಳಿಂದ ಪ್ರಾರಂಭವಾಗಿದ್ದಂತಹ ಕಾಂತರಿಸಿ ಸಿನಿಮಾ…
ಇದೀಗ 120 ಶೋಗಳನ್ನು ಯಶಸ್ವಿಯಾಗಿಯೇ ಅದು ಕೂಡ ಹೌಸ್ ಫುಲ್ ಆಗಿ ಪ್ರದರ್ಶಿಸುತ್ತಾ ಇದೆ ಇನ್ನು ಮುಂದುವರೆಯುತ್ತದೆ ಮತ್ತು ತಪ್ಪದೆ ಎಲ್ಲರೂ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಸಿನಿಮಾವನ್ನು ನಿಮ್ಮ ನಿಮ್ಮ ಮಕ್ಕಳನ್ನು ಕರೆದುಕೊಂಡು ಬಂದು ತೋರಿಸಿ.
ಆಗ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ಈ ಎಲ್ಲ ತರ ಬಗ್ಗೆ ಮಕ್ಕಳಿಗೆ ಅರಿವು ಸಿಗುತ್ತದೆ ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಜನತೆಗೆ ಹೊಸ ಕರೆಯೊಂದನ್ನು ನೀಡಿದ್ದಾರೆ ಇನ್ನು ಮುಂಬರುವ ದಿನಗಳಲ್ಲಿ ಅವರ ಕಾಂತರಾ ಸಿನಿಮಾ ಇದೇ ರೀತಿಯಾಗಿ ಮುಂದೆ ಸಾಗಲಿ ಎಂದು ಅವರ ಅಭಿಮಾನಿಗಳು ಆಸೆ ಪಡುತ್ತಿದ್ದಾರೆ.