ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಇಂಡಸ್ಟ್ರಿಯಲ್ಲಿ ಕ್ರೇಜಿಸ್ಟಾರ್ ಎಂದು ಕರೆಸಿಕೊಳ್ಳುವಂತಹ ರವಿಚಂದ್ರನ್ ಅವರು ಇತ್ತೀಚಿಗಷ್ಟೇ ತಮ್ಮ ರಾಜಾಜಿನಗರದಲ್ಲಿ ಇದ್ದಂತಹ ಮನೆಯನ್ನು ಮಾರಿ ಹೊರ ಬಂದಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿತ್ತು.
ಈ ಅಂತೆ ಕಂತೆಗಳಿಗೆ ರವಿಚಂದ್ರನ್ ಅವರೇ ಇಂದು ಸ್ಟಾಪ್ ಕೊಟ್ಟಿದ್ದು ಅದರಂತೆ ಅವರು ನಾವು ಮನೆಯನ್ನು ಕಾಲಿ ಮಾಡಿ ಬಂದಿರುವುದು ನಿಜ ಮತ್ತು ಈಗ ನಾವು ಬೇರೆ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಸ್ಟೇಜ್ ನ ಮೇಲೆ ಹೇಳಿಕೊಂಡಿದ್ದರು
ಇನ್ನು ಇತ್ತೀಚಿಗಷ್ಟೇ, ರವಿಚಂದ್ರನ್ ಮಗ ಅವರದ್ದು ಕೂಡ ಮದುವೆಯಾಗಿತ್ತು ಹಾಗಾಗಿ ಅವರು ಅವರ ಮಗನೊಂದಿಗೆ ಜೀವಿಸುತ್ತಿದ್ದೇನೆ ಎಂಬ ಮಾತುಗಳನ್ನು ಕೂಡ ಹೇಳಿದ್ದರು ಮತ್ತು ಇದರಿಂದ ಹಲವು ಸ್ಟಾರ್ ನಟ ನಟಿಯರಿಗೆ ಬಹಳ ಬೇಸರವೂ ಆಗಿತ್ತು. ಇನ್ನು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು.
ಅದು ಮಾತ್ರವಲ್ಲದೆ ಅವರು ಹಲವು ಸಿನಿಮಾಗಳಿಗೆ ವೆಚ್ಚ ಮಾಡಿ ಒಳ್ಳೆಯ ರಿವ್ಯೂ ಸಿಕ್ಕದೆ ಇರುವ ಕಾರಣ ಹಲವು ರೀತಿಯಾದಂತಹ ಸಮಸ್ಯೆಗಳಿಗೆ ಸಿಲುಕಿದ್ದರು ಮತ್ತು ಸಾಲ ಕೂಡ ಮಾಡಿದ್ದರು ಅದನ್ನು ತೀರಿಸುವ ಸಲುವಾಗಿ ಹಲವು ಆಸ್ತಿಗಳನ್ನು ಕೂಡ ಮಾರಿಬಿಟ್ಟರು.
ಇದನ್ನು ಅವರೇ ಸ್ಟೇಜ್ ನಲ್ಲಿ ಕೂಡ ಹೇಳಿಕೊಂಡಿದ್ದರು. ಈ ಮಾತನ್ನು ಕೇಳಿದಂತಹ ನಟ ದರ್ಶನ್ ಅವರು ಕೂಡ ಅವರ ನೆರವಿಗೆ ನಿಂತಿದ್ದರು. ಅವರಿಗೆ ನಾವು ಸಪೋರ್ಟ್ ಮಾಡುತ್ತೇವೆ ಅವರು ನಮ್ಮ ಇಂಡಸ್ಟ್ರಿಯ ವ್ಯಕ್ತಿ ನಾವೆಲ್ಲರೂ ಒಗ್ಗಟ್ಟಾಗಿ ಇರುತ್ತೇವೆ ಎಂದು ಹೇಳುವ ಮೂಲಕ ಅವರಿಗೆ ಒಳ್ಳೆಯ ಸಪೋರ್ಟ್ ಕೂಡ ನೀಡಿದ್ದರು.
ಅವರ ಹೆಗಲಿಗೆ ನಿಂತರು ಇದೀಗ ಮತ್ತೊಬ್ಬ ನಟನಾಗಿರುವಂತಹ ಕಿಚ್ಚ ಸುದೀಪ್ ಅವರು ಕೂಡ ಅವರ ಸಪೋರ್ಟ್ ಗೆ ನಿಂತಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರನ್ನು ರವಿಚಂದ್ರನ್ ಅವರು ಯಾವಾಗಲೂ ಕೂಡ ನಮ್ಮ ಮನೆಯ ಹಿರಿಯ ಮಗ ಎಂದು ಹೇಳುತ್ತಿದ್ದರು.
ಹಲವು ಕಡೆ ಈ ಮಾತನ್ನು ಹೇಳಿದ್ದಾರೆ ಕೂಡ ಹಾಗಾಗಿ ರವಿಚಂದ್ರನ್ ಅವರಹೆಗಳಿಗೆ ಇದೀಗ ಕಿಚ್ಚ ಸುದೀಪ್ ಅವರು ಕೂಡ ನಿಂತಿದ್ದು ಅವರನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿಗಳು ತಿಳಿದು ಬಂದಿದೆ ಹಾಗಾಗಿ ಮುಂದುವರೆಯುತ್ತಾ ಅವರು ಯಾವ ರೀತಿಯಾಗಿ ಚೆತರಿಸಿಕೊಳ್ಳುತ್ತಾರೆ ಈ ಎಲ್ಲ ವಿಚಾರಗಳಿಂದ ಎಂದು ನೋಡೋಣ.