ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಬಗ್ಗೆ ಎಲ್ಲರಿಗೂ ಸಹ ಗೊತ್ತೇ ಇದೆ. ಇದೀಗ ಎಲ್ಲಿ ನೋಡಿದರೂ ಸಹ ಬಹಳ ಸದ್ದು ಮಾಡುತ್ತಿರುವ ಸಿನಿಮಾ ಕಾಂತಾರ. ಕಾಂತಾರ ಸಿನಿಮಾದ ಒಂದೊಂದು ದೃಶ್ಯ ಕೂಡ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗುವುದಿಲ್ಲ.
ರಿಷಬ್ ಶೆಟ್ಟಿ ಅವರು ಒಳ್ಳೆಯ ನಟ ಹಾಗೂ ನಿರ್ದೇಶಕ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕಾಂತಾರ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಮಾತ್ರ ಸಿಕ್ಕ ಮೆಚ್ಚುಗೆ ಇನ್ನು ಯಾವ ಸಿನಿಮಾದಿಂದಲೂ ಅವರಿಗೆ ಸಿಕ್ಕಿರಲಿಲ್ಲ ಎಂದರೆ ತಪ್ಪಾಗುವುದಿಲ್ಲ.
ಅಷ್ಟೂ ಅದ್ಭುತವಾಗಿ ನಿರ್ದೇಶಿಸಿ ನಟಿಸಿದ್ದಾರೆ ರಿಷಬ್ ಶೆಟ್ಟಿ. ಮೊದಲು ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದ್ದಂತೆ, ಅಭಿಮಾನಿಗಳು ಕಾಂತಾರ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಮಾಡುವಂತೆ ಕೋರಿಕೆ ವ್ಯಕ್ತ ಪಡಿಸಿದರು.
ಇನ್ನು ಅಭಿಮಾನಿಗಳ ಕೋರಿಕೆಯಂತೆ ಕಾಂತಾರ ಸಿನಿಮಾ ಇದೀಗ ಬೇರೆ ಭಾಷೆಗಳಲ್ಲಿ ಸಹ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಇನ್ನು ಕನ್ನಡ ಸಿನಿಮಾರಂಗದಲ್ಲಿ ಹಿಂದೆ ಎಂದೂ ಬಂದಿರದ ಸಿನಿಮಾಗಳಲ್ಲಿ ಕಾಂತಾರ ಸಿನಿಮಾ ಕೂಡ ಒಂದು ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಕಾಂತಾರ ಸಿನಿಮಾ ಕನ್ನಡದ ಜೊತೆಗೆ ತಮಿಳು ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಇನ್ನು ಇತ್ತೀಚೆಗೆ ರಿಷನ್ ಶೆಟ್ಟಿ ಹಾಗೂ ಚಿತ್ರತಂಡ ಮುಂಬೈಗೆ ಕಾಂತಾರ ಸಿನಿಮಾದ ಪ್ರಚಾರಕ್ಕೆ ಹೋಗಿದ್ದರು. ಇನ್ನು ಈ ವೇಳೆ ರಿಷಬ್ ಅವರಿಗೆ ಅಲ್ಲಿದ್ದ ಜನರು ಸಾಕಷ್ಟು ಪ್ರೀತಿ ತೋರಿಸಿದ್ದಾರೆ.
ಹೌದು ರಿಷಬ್ ಶೆಟ್ಟಿ ಅವರ ಕಾಂತರ ಸಿನಿಮಾ ನೋಡಿ ಎಲ್ಲರೂ ರಿಷಬ್ ಶೆಟ್ಟಿ ಅವರ ಫ್ಯಾನ್ ಆಗಿದ್ದಾರೆ. ಇನ್ನು ಮುಂಬೈನಲ್ಲಿ ರಿಷಬ್ ಶೆಟ್ಟಿ ಅವರನ್ನು ಇಂಟರ್ಯು ಮಾಡುತ್ತಿದ್ದ ಆಂಕರ್ ರಿಷಬ್ ಶೆಟ್ಟಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ.
ನಿಮ್ಮ ನಟನೆಗೆ ನಿಜಕ್ಕೂ ಒಂದು ಸೆಲ್ಯೂಟ್ ಸರ್, ತುಂಬಾ ಅದ್ಭುತವಾಗಿ ನಟಿಸಿದ್ದೀರಾ, ಈ ಸಿನಿಮಾ ನೋಡಿ ನಿಜಕ್ಕೂ ತುಂಬಾ ಖುಷಿಯಾಯಿತು ಎಂದು ಕಾರ್ಯಕ್ರಮದ ಆಂಕರ್ ಹೇಳಿದ್ದಾರೆ. ಇನ್ನು ಈ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ನಮ್ಮ ಕನ್ನಡದ ನಟ ಬೇರೆ ರಾಜ್ಯಗಳಲ್ಲಿ ಸಹ ಇಷ್ಟೊಂದು ಪ್ರೀತಿ ಗಳಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಕಾಮೆಂಟ್ ಮಾಡಿ ಹಾಗೆ ಶೇರ್ ಮಾಡಿ…