ಮಂಗನಿಂದ ಮಾನವನಾದ ಆದರೆ ಭೂಮಿಮೇಲೆ ಇನ್ನೂ ಮಂಗಗಳು ಯಾಕಿವೆ?

Entertainment

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ಫ್ರೆಂಡ್ಸ್ ಮಾನವನ ವಿಕಾಸ ಹೇಗಾಯಿತು. ಈ ಪ್ರಶ್ನೆಯನ್ನು ಯಾರಾದರೂ ನಮ್ಮನ್ನು ಕೇಳಿದರೆ ನಾವು ಹೇಳುವುದು ಏನೆಂದರೆ ಮಂಗನಿಂದ ಮಾನವ ವಾಗಿ ವಿಕಾಸ ಆಗಿರುವುದು ಅಂತ ಹೇಳುತ್ತಿವೆ. ನಾವು ಇಲ್ಲಿಯವರೆಗೂ ಕೇಳಿಕೊಂಡು ಓದಿಕೊಂಡು ಬಂದಿರುವುದು ಇದನ್ನೇ. ಸಾಮಾನ್ಯವಾಗಿ ಈ ಚಿತ್ರವನ್ನು ತೋರಿಸಿ ಮಂಗನಿಂದ ಮಾನವ ರಾಗಿದ್ದೇವೆ ಅಂತ ಹೇಳುತ್ತೇವೆ.

ಸೋ ಇಲ್ಲಿ ಪಾಯಿಂಟ್ ಏನೆಂದರೆ ಮಂಗನಿಂದ ಮಾನವನಾಗಿ ವಿಕಾಸ ಆಗಿರುವುದು ಸದ್ಯ. ಹಾಗಾದರೆ ಮಂಗಗಳು ಮಾನವರಾದ ಮೇಲೆ ಇವತ್ತಿಗೂ ನಮ್ಮ ಸುತ್ತಮುತ್ತ ಮಂಗಗಳು ಯಾಕಿವೆ ಇನ್ನು ಡೌಟ್ ಬರುತ್ತೆ ಅಲ್ವಾ. ಫ್ರೆಂಡ್ಸ್ ನಾವು ಇವತ್ತು ಈ ವಿಷಯದ ಬಗ್ಗೆ ಡಿಸ್ಕಸ್ ಮಾಡೋಣ. ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿದೆ. ಮಾಹಿತಿಗೆ ಹೋಗುವುದಕ್ಕೆ ಮುಂಚೆ ಒಂದು ಚಿಕ್ಕ ರಿಕ್ವೆಸ್ಟ್. ನೀವು ಮೊದಲಸಲ ನಮ್ಮ ಪೇಜ್ ಗೆ ವಿಸಿಟ್ ಕೊಟ್ಟಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ.

ಫ್ರೆಂಡ್ಸ್ ನಾವು ಡೈರೆಕ್ಟಾಗಿ ವಿಷಯಕ್ಕೆ ಬರೋಣ. ಇಲ್ಲಿ ನೀವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ ಮನುಷ್ಯ ಮಂಗನಿಂದ ಬಂದ. ಅದೇ ರೀತಿ ಮಂಗಗಳು ಕೂಡ ಮಂಗ ನಿಂದಲೇ ಬಂದಿವೆ. ಸಿಂಪಲ್ ಆಗಿ ಹೇಳಬೇಕು ಅಂದರೆ ಮನುಷ್ಯರು ಮತ್ತು ಮಂಗಗಳು ಅಣ್ಣತಮ್ಮಂದಿರು. ಮಂಗಗಳು ಅಂದರೆ ಎಲ್ಲ ಮಂಗಗಳು ಅಲ್ಲ. ಬಾಲ ಇಲ್ಲದೆ ಇರುವ ಮಂಗಗಳು ಮಾತ್ರ ನಮ್ಮ ಅಣ್ಣತಮ್ಮಂದಿರು. ನಮ್ಮುನ್ನ ಮತ್ತು ಈ ಮಂಗಗಳನ್ನು ಸೇರಿಸಿ ಹೋಮಿ ನೋಡಿಯ ಎಂದು ಕರೆಯುತ್ತಾರೆ.

ನಮ್ಮ ತಾತ ಮುತ್ತಾತರ ಎಲ್ಲ ಸತ್ತು ಹೋಗಿ ನಮಗೆ ಮಿಕ್ಕ ಬಂಧುಗಳು ಯಾರಾದರೂ ಇದ್ದಾರೆ ಎಂದರೆ ಅವರೇ ಒರಾಂಗುಟನ್ ಗೊರಿಲ್ಲ ಚಿಂಪಾಂಜಿ. ಹೋಮಿ ನಿನ್ನೆ ಎನ್ನುವ ಮಂಗಕ್ಕೆ ಮನುಷ್ಯ ಮೊದಲ ಸಂತಾನವಾಗಿ ಹುಟ್ಟಿದ್ದರೆ ಚಿಂಪಾಂಜಿ ಮತ್ತು ಬೋನೋಬೋ ಎರಡನೇ ಸಂತಾನವಾಗಿ ಹುಟ್ಟುತ್ತವೆ.

ಮನುಷ್ಯನಿಗೆ ಈ ಭೂಮಿ ಮೇಲೆ ಚಿಂಪಾಂಜಿ ಮತ್ತು ಬೋನೋಬೋಸ್ ತುಂಬಾ ಹತ್ತಿರದ ಸಂಬಂಧಿಗಳು ಆಗುತ್ತಾರೆ. ಒರಂಗುಟಾನ್ ಮತ್ತು ಗೊರಿಲ್ಲಾ ತುಂಬಾ ಹತ್ತಿರದ ಕಸಿನ್ಸ್ ಆಗುತ್ತಾರೆ. ಇದರಿಂದಲೇ ಇವುಗಳ ಡಿಎನ್ಎ ಮನುಷ್ಯನ ಡಿಎನ್ ಎ ಹೊಲಿಗೆ ಮಾಡಿದರೆ 98 ಪರ್ಸೆಂಟ್ ಮ್ಯಾಚ್ ಆಗುತ್ತೆ. ಫ್ರೆಂಡ್ಸ್ ಈಗ ಅರ್ಥವಾಯಿತಲ್ಲ. ಮಂಗಗಳು ಮತ್ತು ಮನುಷ್ಯರು ಒಂದೇ ಮಂಗನ ಸಂತಾನ. ಮನುಷ್ಯ ಮಾತ್ರ ಮಂಗಕ್ಕೆ ಹುಟ್ಟಲಿಲ್ಲ. ಜೊತೆಯಲ್ಲಿ ಚಿಂಪಾಂಜಿಗಳು ಮತ್ತು ಗೋರಿಲ್ಲಾಗಳು ಹುಟ್ಟುತ್ತೆ.

ಇಲ್ಲಿ ನಿಮಗೆ ಇನ್ನೊಂದು ಪ್ರಶ್ನೆ ಬರುತ್ತದೆ. ಒಂದೇ ಮಂಗನಿಂದ ಹುಟ್ಟಿದ ಮನುಷ್ಯ ಮಾತ್ರ ರೆವಿಲ್ಯೂಷನ್ ಆಗುತ್ತಾನೆ. ಆದರೆ ಚಿಂಪಾಂಜಿಗಳು ಮತ್ತು ಗೋರಿಲ್ಲಾಗಳು ಅವು ಮೊದಲು ಹೇಗಿದ್ದವು ಈಗಲೂ ಕೂಡ ಹಾಗೆ ಇದೆ. ಇವುಗಳು ಯಾಕೆ ರೆವೆಲ್ಯೂಷನ್ ಆಗಿಲ್ಲ ಎನ್ನುವ ಡೌಟ್ ಬರುತ್ತೆ. ಇದನ್ನು ಇಲ್ಲಿ ಕ್ಲಿಯರ್ ಆಗಿ ಮಾತಾಡಿ ಕೊಳ್ಳೋಣ. ಇಲ್ಲಿ ನೀವು ಗಮನಿಸಿದರೆ ಓಮಿನಿ ಎನ್ನುವ ಕೋತಿಗೆ ಮನುಷ್ಯ ಮೊದಲ ಸಂತಾನವಾಗಿ ಹುಟ್ಟಿದರೆ ಬೋನೋಬೋಸ್ ಮತ್ತು ಚಿಂಪಾಂಜಿಗಳು ಎರಡನೇ ಸಂತಾನವಾಗಿ ಹುಟ್ಟಿದವು ಎಂದು ಮಾತನಾಡಿಕೊಂದ್ವಿ.

ಇದು ನಡೆದದ್ದು 180 ಲಕ್ಷ ವರ್ಷಗಳ ಹಿಂದೆ. ಮನುಷ್ಯನ ಮೊಟ್ಟಮೊದಲ ಜಾತಿ ಮತ್ತು ಮನುಷ್ಯನ ಅಭಿವೃದ್ಧಿಯಲ್ಲಿ ಇದನ್ನು ಮೊದಲ ದೆಸೆ ಅಂತ ಹೇಳಬಹುದು. ಈ ಮನುಷ್ಯ ಜಾತಿಯನ್ನೇ ರ್ಯಾಮಿದಸ್ ಅಂತ ಕರೆಯುತ್ತಾರೆ. ಈ ಜೀವಿಗಳು ಎರಡು ಕಾಲಿನಲ್ಲಿ ನಡೆಯುವುದಕ್ಕೆ ಶುರುಮಾಡಿದವು. ಈ ನಡಿಗೆ ಮನುಷ್ಯನ ಅಭಿವೃದ್ಧಿ ಕಡೆಗೆ ನಡೆಸುತ್ತದೆ. ಇವುಗಳಿಗೆ ಮೆದಳು ಚಿಕ್ಕದಾಗಿದ್ದು ದವಡೆಹಲ್ಲುಗಳು ದೊಡ್ಡದಾಗಿ ಹಸಿಮಾಂಸವನ್ನು ಅಗೆಯುವ ರೀತಿ ಇದ್ದವು.

ಕಾಲ ಕ್ರಮೇಣ ಇವುಗಳ ದೇಹದಲ್ಲಿ ತುಂಬಾ ಬದಲಾವಣೆಗಳು ಬರುತ್ತೆ. ಹೀಗೆ 25 ಲಕ್ಷ ವರ್ಷಗಳ ಹಿಂದೆ ಹೋಮೋ ಹ್ಯಾಬಿಲಿಸ್ ಎನ್ನುವ ಜಾತಿಯಾಗಿ ರೂಪಾಂತರವಾಗುತ್ತದೆ. ಈ ಜಾತಿಯ ಮನುಷ್ಯರು ಕಲ್ಲುಗಳನ್ನು ಆಯುಧವಾಗಿ ಬಳಸುವುದನ್ನು ಕಲಿತುಕೊಳ್ಳುತ್ತಾರೆ. ಇವರು ಅಭಿವೃದ್ಧಿ ಆಗುತ್ತಾ ಆಗುತ್ತಾ ಹೋಮೋ ಏರ್ಗಸ್ಟರ್ ಆಗಿ ವಿಕಸನವಾಗುತ್ತರೆ. ಇವು ಆಯುಧಗಳಿಂದ ಪ್ರಾಣಿಗಳನ್ನು ಬೇಟೆ ಆಡುವುದಕ್ಕೆ ಶುರುಮಾಡುತ್ತಾರೆ. ಆಗಾಗ ಕಾಡಿನಲ್ಲಿ ಕಾಡ್ಗಿಚ್ಚು ಬರುತ್ತಾ ಇದ್ದದ್ದರಿಂದ ಸುಟ್ಟ ಪ್ರಾಣಿಗಳ ಮಾಂಸವನ್ನು ಇವರು ತಿನ್ನುವುದಕ್ಕೆ ಶುರುಮಾಡುತ್ತಾರೆ.

ಹಸಿ ಮಾಂಸಕ್ಕೆ ಹೋಲಿಕೆ ಮಾಡಿದರೆ ಸುಟ್ಟ ಮಾಂಸ ರುಚಿಯಾಗಿ ಇದ್ದಿದ್ದರಿಂದ ಬೆಂಕಿಯ ಆವಿಷ್ಕಾರವಾಗಿ ಸುಟ್ಟ ಮಾಂಸವನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಈ ಬೆಂಕಿಯ ಆವಿಷ್ಕಾರ ಮನುಷ್ಯನ ಇತಿಹಾಸದ ದಿಕ್ಕನ್ನು ಬದಲಾಯಿಸುತ್ತೆ. ಸುಟ್ಟ ಮಾಂಸ ಸ್ವಲ್ಪ ಮೆತ್ತುಗೆ ಇದ್ದದ್ದರಿಂದ ದವಡೆಗಳ ಮೇಲೆ ಪ್ರೆಶರ್ ಕಮ್ಮಿಯಾಗಿ ಸುಟ್ಟ ಮಾಂಸ ತಿನ್ನುವುದಕ್ಕೆ ಕಡಿಮೆ ಶಕ್ತಿ ಸರಿಹೋಗುತ್ತಿತ್ತು. ಈಗ ಹೆಚ್ಚು ಶಕ್ತಿ ಮತ್ತು ಪೋಷಕಾಂಶಗಳು ಮೆದುಳಿಗೆ ಸಪ್ಲೇ ಆಗುತ್ತಿತ್ತು. ಇದರಿಂದ ಮೆದುಳಿನ ಬೆಳವಣಿಗೆ ಜಾಸ್ತಿಯಾಗಿ ಆಲೋಚನೆ ಮಾಡುವ ಶಕ್ತಿ ಹೆಚ್ಚಾಗುತ್ತ ಹೋಗುತ್ತದೆ.

8 ಲಕ್ಷ ವರ್ಷಗಳ ಹಿಂದೆ ಹೋಮೋ ಹೈಡಲ್ ಬರ್ಜನಿ ಅನ್ನುವ ಜಾತಿಯ ರೂಪಾಂತರವಾಗುತ್ತದೆ. ಇದೇ ರೀತಿ ಮನುಷ್ಯ ರೂಪಾಂತರಗೊಳ್ಳುತ್ತ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ತನ್ನ ದೇಹದಲ್ಲಿ ಮಾರ್ಪಾಡುಗಳು ಮಾಡಿಕೊಳ್ಳುತ್ತಾ ಹೋಮೋ ನಿಯಾಂಡರ್ತಲ್ ಎನಿಸ್ ಆಗಿ ಬದಲಾಗುತ್ತಾರೆ. ಈ ಜಾತಿಯ ಆದಿಮಾನವರು ಸ್ವಂತವಾಗಿ ಆಲೋಚನೆ ಮಾಡುವಷ್ಟರ ಮಟ್ಟಿಗೆ ರೂಪಾಂತರ ಹೊಂದುತ್ತಾ ಸುಮಾರು ಎರಡು ಲಕ್ಷ ವರ್ಷಗಳ ಹಿಂದೆ ಹೋಮೋಸೇಪಿಯನ್ಸ್ ಎನ್ನುವ ಇಂದಿನ ಮನುಷ್ಯ ಜಾತಿಯಾಗಿ ವಿಕಾಸನ ವಾಗುತ್ತಾರೆ.

ಹೋಮೋಸೇಪಿಯನ್ಸ್ ಎನ್ನುವ ಮನುಷ್ಯ ಜಾತಿ ಮಾತ್ರ ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಿ ಪ್ರಸ್ತುತ ಮನುಷ್ಯರಾಗಿ ಬದಲಾಗುತ್ತಾರೆ. ಆದರೆ ಎರಡನೆಯ ಸಂತಾನವಾಗಿ ಹುಟ್ಟಿದ ಬೋನೋಬೋ ಮತ್ತು ಚಿಂಪಾಂಜಿಗಳು ಅಂದಿನ ವಾತಾವರಣ ಪರಿಸ್ಥಿತಿಗೆ ಮನುಷ್ಯನ ರೀತಿ ಸವಾಲುಗಳನ್ನು ಎದುರಿಸಲು ಇಲ್ಲ. ಚಿಂಪಾಂಜಿ ಮತ್ತು ಬೋನೋಬೋ ಗಳಿಗೆ ಮಾಂಸವನ್ನು ತಿನ್ನುವ ಅಭ್ಯಾಸ ಇದ್ದರೂ ಕೂಡ ಅಂದಿನ ಮನುಷ್ಯನ ರೀತಿ ಪ್ರಾಣಿಗಳನ್ನು ಬೇಟೆಯಾಡಿ ಹಸಿಮಾಂಸವನ್ನು ತಿನ್ನುವುದಕ್ಕೆ ಆಗಲಿಲ್ಲ.

Leave a Reply

Your email address will not be published. Required fields are marked *