ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಇಂಡಸ್ಟ್ರಿ ಆಗಿರುವಂತಹ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು ಧ್ರುವ ಸರ್ಜಾ ಅವರು ಅವರ ಸಿನಿಮಾದ ಶೂ-ಟಿಂಗ್ನಲ್ಲಿ ಬಹಳ ಬಿಸಿ ಇದ್ದಾರೆ ಇನ್ನು ಅವರ ಮುಂದಿನ ಸಿನಿಮಾ ಅದಾಗಿದ್ದು ಎಲ್ಲರ ಕುತೂಹಲ ಬಹಳಷ್ಟು ಹೆಚ್ಚಾಗಿದೆ.
ಇನ್ನು ಧ್ರುವ ಸರ್ಜಾ ಅವರು ಇತ್ತೀಚಿಗಷ್ಟೇ ಒಂದು ಹೆಣ್ಣು ಮಗುವಿನ ತಂದೆಯಾಗಿದ್ದಾರೆ ಹೆಣ್ಣು ಮಗುವಿಗೆ ಜನ್ಮ ನೀಡಿದ ವಿಚಾರ ಎಲ್ಲರಿಗೂ ಗೊತ್ತೇ ಇದೆ ಈ ವಿಚಾರವನ್ನು ಅವರೇ ಮಾಧ್ಯಮದವರಲ್ಲಿ ಹಂಚಿಕೊಂಡಿದ್ದರು. ನಿನ್ನ ಧ್ರುವ ಸರ್ಜಾ ಅವರ ಮಗಳನ್ನು ನೋಡಲು ಮೇಘನಾ ರಾಜ್ ಅವರು ಕೂಡ ಆಸ್ಪತ್ರೆಗೆ ಧಾವಿಸಿದ್ದರು.
ಆನಂತರ ಮಾಧ್ಯಮದವರೊಂದಿಗೆ ಮಾತನಾಡಿ ತಾಯಿ ಮಗು ಇಬ್ಬರು ಕ್ಷೇಮವಾಗಿದ್ದಾರೆ.ಮತ್ತು ನಾನು ದೊಡ್ಡಮ್ಮನಾದೆ ಎಂಬ ಖುಷಿ ವಿಚಾರವನ್ನು ನನ್ನ ಮಗನಿಗೆ ಒಬ್ಬ ತಂಗಿ ಸಿಕ್ಕಳು ಎಂದು ಖುಷಿ ಪಟ್ಟು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರು. ಇನ್ನು ಆನಂತರ ಧ್ರುವ ಸರ್ಜಾ ಅವರ ಹುಟ್ಟು ಹಬ್ಬದ ಸಲುವಾಗಿಯೂ ಕೂಡ ಪ್ರೇರಣ ಅವರು ಕಾಣಿಕೆಯನ್ನು ನೀಡಿದ್ದರು.
ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಿದಂತಹ ಪ್ರೇರಣಾ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಂದರೆ ಅವರ ಸೋಶಿಯಲ್ ಮೀಡಿಯ ಅಕೌಂಟ್ ನಲ್ಲಿ ಅದನ್ನು ಹಾಕಿಕೊಂಡಿದ್ದರು. ಇನ್ನು ಧ್ರುವ ಸರ್ಜಾ ಅವರ ಬಯಸಿದಂತೆ ಅವರಿಗೆ ಹೆಣ್ಣುಮಗಳು ಆಗಿದ್ದು ಮನೆಯಲ್ಲಿ ಎಲ್ಲರೂ ಕೂಡ ಬಹಳ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಮತ್ತು ಇಡೀ ಸರ್ಜಾ ಫ್ಯಾಮಿಲಿ ಬಹಳ ಸಂತೋಷವನ್ನು ತೋರುತ್ತಿದೆ. ಇನ್ನು ಇತ್ತೀಚಿಗಷ್ಟೇ ಟಿವಿ ಮಾಧ್ಯಮದವರು ಅವರನ್ನು ನಿಮ್ಮ ಮಗಳಿಗೆ ಏನೆಂದು ಹೆಸರಿಡುತ್ತೀರಾ ಇಂದು ಪ್ರಶ್ನೆ ಕೇಳಿದ್ದಾರೆ? ಇದಕ್ಕೆ ಉತ್ತರ ನೀಡಿರುವಂತಹ ಧ್ರುವ ಸರ್ಜಾ ಅವರು ಇನ್ನು ಯಾವುದೇ ರೀತಿಯಾದಂತಹ ಯೋಚನೆ ಮಾಡಿಲ್ಲ.
ಅದಕ್ಕೆಲ್ಲ ಸರ್ಜಾ ಅಂದರೆ ಅರ್ಜುನ್ ಸರ್ಜಾ ಅಂಕಲ್ ಅವರು ಬರಬೇಕು ಅವರು ಯಾವ ಹೆಸರು ಹೇಳುತ್ತಾರೋ ಅದೇ ಹೆಸರು ಫಿಕ್ಸ್ ಎಂಬ ಮಾತುಗಳನ್ನು ಆಡಿದ್ದಾರೆ ಮತ್ತು ಮೇಘನಾ ರಾಜ್ ಅವರು ಕೂಡ ಅಲ್ಲೇ ಇದ್ದದರಿಂದ ಅವರನ್ನು ನೋಡಿ ನಕ್ಕಿದ್ದಾರೆ.
ಮುಂಬರುವ ದಿನಗಳಲ್ಲಿ ಧ್ರುವ ಸರ್ಜಾ ಅವರ ಮಗಳಿಗೆ ಏನೆಂದು ಹೆಸರಿಡಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಮುಂದೆ ಏನಾಗಬಹುದು ಎಂದು ಕಾದುನೋಡೋಣ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ, ಹಾಗೆ ಈ ಪೋಸ್ಟ್ ಅನ್ನು ಲೈಕ್ ಹಾಗೂ ಶೇರ್ ಮಾಡಿ…