ಸಿನಿಮಾರಂಗದಲ್ಲಿ ಕೆಲವು ಸ್ಟಾರ್ ನಟ ನಟಿಯರ ಬಹಳ ದೊಡ್ಡ ಅಭಿಮಾನಿ ಬಳಗ ಇರುತ್ತದೆ. ಇನ್ನು ಅಭಿಮಾನಿಗಳು ಕೆಲವೊಮ್ಮೆ ಮಿತಿ ಮೀರಿ ವರ್ತಿಸುವುದನ್ನು ಸಹ ನಾವು ನೋಡಿದ್ದೇವೆ. ಹೌದು ಡಿ ಬಾಸ್ ದರ್ಶನ್ ಅವರ ಅಭಿಮಾನಿ ಬಳಗದ ಬಗ್ಗೆ ಎಷ್ಟು ಮಾತನಾಡಿದರು ಸಹ ಕಡಿಮೆ.
ಏಕೆಂದರೆ ಡಿ ಬಾಸ್ ದರ್ಶನ್ ಅವರು ದೇಶಾದ್ಯಂತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಮ್ಮ ಅಪ್ಪು ಅವರಿಗೂ ಸಹ ಅಭಿಮಾನಿಗಳ ಸಂಖ್ಯೆ ಏನು ಕಡಿಮೆ ಇಲ್ಲ. ಇನ್ನು ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ನಂತರ ಅವರ ಮೇಲೆ ಇರುವ ಗೌರವ ಎಲ್ಲರಿಗೂ ಸಹ ಇನ್ನಷ್ಟು ಎಚ್ಚಾಗಿದೆ.
ಇನ್ನು ಇತ್ತೀಚೆಗೆ ಅಪ್ಪು ಅವರನ್ನು ಬೈಯುತ್ತಾ ಒಬ್ಬ ವ್ಯಕ್ತಿ ಒಂದು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದ, ಇನ್ನು ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿತ್ತು. ಇನ್ನು ಅಪ್ಪು ಅವರ ಬಗ್ಗೆ ಈ ವ್ಯಕ್ತಿ ವಿಡಿಯೋದಲ್ಲಿ ಬಹಳ ಕೀಳಾಗಿ ಮಾತನಾಡಿದ್ದ.
ಹಾಗೆ ತಾನೊಬ್ಬ ದರ್ಶನ್ ಅಭಿಮಾನಿ ಎಂದು ವಿಡೀಯೋದಲ್ಲಿ ಜೈ ಡಿ ಬಾಸ್ ಎಂದು ಸಹ ಹೇಳಿದ್ದ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಈ ವ್ಯಕ್ತಿಯನ್ನು ಹುಡುಕಿದ ಕೆಲ ಅಪ್ಪು ಅಭಿಮಾನಿಗಳು ಈತನಿಗೆ ಸರಿಯಾಗಿ ಬುದ್ದಿ ಕಲಿಸಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಈ ವ್ಯಕ್ತಿಯ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.
ಇನ್ನು ಈ ವಿಡಿಯೋದಲ್ಲಿ ಅದೇ ವ್ಯಕ್ತಿ ತಾನು ಮಾಡಿದ್ದು, ತಪ್ಪು ಎಂದು ಹೇಳುತ್ತಾ ಅಪ್ಪು ಫೋಟೋಗೆ ಪೂಜೆ ಮಾಡಿ ಎಲ್ಲರಿಗೂ ಸಹ ಕ್ಷಮೆ ಕೇಳಿದ್ದಾನೆ. ನಾನು ಮಾಡಿದ್ದು ದೊಡ್ಡ ತಪ್ಪು ಇನ್ನು ಎಂದಿಗೂ ಸಹ ನಾನು ಈ ರೀತಿ ತಪ್ಪಾಗದಂತೆ ನೋಡಿಕೊಳ್ಳುತ್ತೆನೆ.
ದಯವಿಟ್ಟು ನನ್ನನ್ನು ಕ್ಷಮಿಸಿ, ಇನ್ನು ಯಾವತ್ತೂ ನಾನು ಯಾವ ಕಲಾವಿದರ ಬಗ್ಗೆ ಸಹ ಕೀಳಾಗಿ ಮಾತನಾಡುವುದಿಲ್ಲ. ನನ್ನನ್ನು ಎಲ್ಲರೂ ಕ್ಷಮಿಸಿ, ಈ ರೀತಿ ಮತ್ತೆ ಎಂದೂ ಆಗದಂತೆ ನೋಡಿಕೊಳ್ಳುತ್ತೆನೆ ಎಂದು ವಿಡಿಯೋದಲ್ಲಿ ಅಪ್ಪು ಫೋಟೋಗೆ ಕೈ ಮುಗಿದು, ಪೂಜೆ ಮಾಡುತ್ತಾ ಕ್ಷಮೆ ಕೇಳಿದ್ದಾನೆ.
ಸದ್ಯ ಈ ವ್ಯಕ್ತಿಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿ ಪ್ರತಿಯೊಬ್ಬರು ಅಪ್ಪು ಅವರ ಬಗ್ಗೆ ಈ ರೀತಿ ಮತನಾಡಿದವನಿಗೆ ಹೀಗೆ ಆಗಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..