ಕಾಂತಾರ ಸಿನಿಮಾ ಕನ್ನಡದ ಕೀರ್ತಿ ಪತಾಕೆಯನ್ನು ಎಲ್ಲೆಡೆ ಹಾರಿಸುತ್ತಿದೆ ಎಂದರೆ ತಪ್ಪಾಗುವುದಿಲ್ಲ. ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಇತ್ತೀಚೆಗೆ ಬಿಡುಯಾಗಿ ಬಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನು ಸಿನಿಮಾದ ಪ್ರತಿಯೊಂದು ಅಂಶವನ್ನು ಜನರು ಮೆಚ್ಚಿಕೊಂಡಿದ್ದಾರೆ.
ಇನ್ನು ಮೊದಲು ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ನಂತರ ಅಭಿಮಾನಿಗಳ ಆಸೆಯಂತೆ ಇದೀಗ ಬೇರೆ ಭಾಷೆಗಳಲ್ಲಿ ಸಹ ಬಿಡುಗಡೆಯಾಗಿದೆ. ಇನ್ನು ಬೇರೆ ಭಾಷೆಗಳಲ್ಲಿ ಸಹ ಬಹಳ ಅದ್ಭುತವಾದ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಇನ್ನು ಕಾಂತಾರ ಸಿನಿಮಾದ ಪ್ರತಿಯೊಂದು ಪಾತ್ರ ಹಾಗೂ ದೃಶ್ಯ ಎಲ್ಲವೂ ಸಹ ಜನರಿಗೆ ಬಹಳ ಇಷ್ಟವಾಗಿದೆ. ಇನ್ನು ಕಾಂತಾರ ಸಿನಿಮಾ ಬೇರೆ ಎಲ್ಲಾ ಸಿನಿಮಾಗಳ ಧಾಖಲೆಗಳನ್ನು ಮುರಿದು ಹೊಸ ಧಾಖಲೆ ಬರೆಯಲು ಮುನ್ನುಗುತ್ತಿದೆ. ಇನ್ನು ಇದೀಗ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದ ಕಾಂತಾರ ಸಿನಿಮಾಗೆ ಕನ್ನಡದ ಸ್ಟಾರ್ ಒಬ್ಬ ಸ್ಟಾರ್ ನಟ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದ ಕಾಂತಾರ ಸಿನಿಮಾಗೆ ಇದೀಗ ಕನ್ನಡದ ಸ್ಟಾರ್ ನಟರೊಬ್ಬರು ವಿರೋಧ ವ್ಯಕ್ತಪಡಿಸಿ ಸಾಕಷ್ಟು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು ಆ ಸ್ಟಾರ್ ನಟ ಬೇರೆ ಯಾರು ಅಲ್ಲ ಆದಿನಗಳು ಖ್ಯಾತಿಯ ನಟ ಚೇತನ್.
ನಟ ಚೇತನ್ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಬೇರೆ ವಿಷಯಗಳಿಗೆ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಇನ್ನು ನಟ ಚೇತನ್ ಆಗಾಗ ಸಿನಿಮಾಗಳು ಹಾಗೂ ಸಾಮಾಜದ ಕೆಲವು ವಿಚಾರಗಳ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಧ್ವನಿ ಎತ್ತುತ್ತಿರುತ್ತಾರೆ. ಇನ್ನು ಇದೀಗ ನಟ ಚೇತನ್ ಅವರು ಕಾಂತಾರ ಸಿನಿಮಾದ ವಿರುದ್ಧ ಮಾತನಾಡಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇನ್ನು ಕಾಂತಾರ ಸಿನಿಮಾದಲ್ಲಿನ ಭೂತಕೋಲವೂ ಹಿಂದೂ ಸಂಸ್ಕೃತಿಗೆ ಸೇರಿದ್ದು ಎಂದು ನಟ ರಿಷಬ್ ಶೆಟ್ಟಿ ಹೇಳಿದ್ದ ಹೇಳಿಕೆಯನ್ನು ನಟ ಚೇತನ್ ಸುಳ್ಳು ಎಂದಿದ್ದಾರೆ. ಇನ್ನು ಈ ಬಗ್ಗೆ ನಟ ಚೇತನ್ ಟ್ವಿಟ್ ಮಾಡಿದ್ದು, ಸತ್ಯ ಸಂಗತಿಗಳನ್ನು ತೋರಿಸುವಂತೆ ರಿಷಬ್ ಶೆಟ್ಟಿ ಅವರಿಗೆ ಟಾಂಗ್ ನೀಡಿದ್ದಾರೆ.
ಇನ್ನು ಈ ಟ್ವಿಟ್ ನೋಡುತ್ತಲೇ ಸಾಕಷ್ಟು ಅಭಿಮಾನಿಗಳು ನಟ ಚೇತನ್ ವಿರುದ್ಧ ಗುಡುಗಿದ್ದು, ಚೇತನ್ ಅವರಿಗೆ ರಿಷಬ್ ಶೆಟ್ಟಿ ಅವರ ಬೆಳವಣಿಗೆ ನೋಡಿ ಹೊಟ್ಟೆ ಕಿಚ್ಚು ಎನ್ನುತ್ತಿದ್ದಾರೆ ಕೆಲವರು. ಸದ್ಯ ಈ ಟ್ವಿಟ್ ಸಾಕಷ್ಟು ವಿವಾಧಗಳಿಗೆ ಕಾರಣವಾಗಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ…