ಈ ದೃಶ್ಯದಿಂದ ಇಡೀ ಕಾರ್ಯಕ್ರಮ ಕಣ್ಣೀರಿನಲ್ಲಿ ಮುಳುಗಿತ್ತು! ಏನಾಗಿತ್ತು ಗೊತ್ತಾ ವಿಡಿಯೋ ನೋಡಿ..!!

ಸ್ಯಾಂಡಲವುಡ್

ಅಪ್ಪು ಅವರು ಇದೀಗ ನಮ್ಮ ಜೊತೆಗೆ ಇಲ್ಲ ಎನ್ನುವುದನ್ನು ಊಹಿಸಿದರೆ ಮನಸ್ಸಿಗೆ ತುಂಬಾ ಕಷ್ಟವಾಗುತ್ತದೆ. ಅಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ನಮ್ಮ ಕನ್ನಡ ಚಿತ್ರರಂಗ ಹಾಗೆ ಅದೆಷ್ಟೋ ಅಭಿಮಾನಿಗಳು ಅನಾಥರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಅಪ್ಪು ಅವರು ನಮ್ಮನ್ನು ಬಿಟ್ಟುಹೋಗಿ ಈಗಾಗಲೇ ಒಂದು ವರ್ಷ ಕಳೆದು ಹೋಗುತ್ತಿದೆ, ಆದರೂ ಸಹ ಅವರ ನೆನಪು ಮಾತ್ರ ಎಲ್ಲರ ಹೃದಯದಲ್ಲಿ ಅಳಸದೆ ಹಾಗೆ ಉಳಿದು ಬಿಟ್ಟಿದೆ. ಇನ್ನು ಅಪ್ಪು ಅವರ ಅಭಿಮಾನಿಗಳು ನೆನಪಿಸಿಕೊಳ್ಳದ ಒಂದು ದಿನವಿಲ್ಲ. ಅಂತಹ ಮಹಾನ್ ವ್ಯಕ್ತಿ ನಮ್ಮ ಜೊತೆಗಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ.

ಇನ್ನು ಅಪ್ಪು ಅವರ ಸಿನಿಮಾಗಳು ಅವರ ಅಭಿನಯ ಹಾಗೆ ಅದ್ಭುತವಾದ ಡ್ಯಾನ್ಸ್ ಈ ಎಲ್ಲವನ್ನೂ ಸಹ ನಾವು ಇನ್ನು ಮುಂದೆ ನೋಡಲು ಸಾಧ್ಯವಿಲ್ಲ. ಇನ್ನು ಅಪ್ಪು ಅವರ ಕನಸ್ಸಿನ ಕೊನೆಯ ಸಿನಿಮಾ ಗಂಧದಗುಡಿ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ.

ಇನ್ನು ಈ ಸಿನಿಮಾ ನೋಡಲು ಅವರ ಅಭಿಮಾನಿಗಳು ಬಹಳ ಕಾತುರರಾಗಿದ್ದಾರೆ. ಇನ್ನು ಅಪ್ಪು ಅವರ ಗಂಧದಗುಡಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದರು. ಇನ್ನು ಈ ಟ್ರೇಲರ್ ಕೂಡ ಸಾಕಷ್ಟು ವೀಕ್ಷಣೆ ಕಂಡು ಧಾಖಲೆ ಬರೆದಿದೆ.

ಇನ್ನು ಅಪ್ಪು ಅವರ ಗಂಧದಗುಡಿ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಇತ್ತೀಚೆಗೆ ಬಹಳ ಅದ್ದೂರಿಯಾಗಿ ನೆರವೇರಿದೆ. ಇನ್ನು ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಸ್ವತಃ ಅಪ್ಪು ಪತ್ನಿ ಅಶ್ವಿನಿ ಅವರು ಮುಂದೆ ನಿಂತು ನೆರವೇರಿಸಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಹಿರಿಯ ಕಲಾವಿದರು ಭಾಗಿಯಾಗಿದ್ದರು. ಇನ್ನು ಈ ಕಾರ್ಯಕ್ರಮದ ಕೊನೆಯಲ್ಲಿ ಅಪ್ಪು ಅವರನ್ನು ನೆನೆದು ಎಲ್ಲರೂ ಕಣ್ಣೀರು ಹಾಕಿದ್ದಾರೆ. ಜೊತೆಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅಪ್ಪು ಅವರ ಗೊಂಬೆ ಹೇಳುತೈತಿ ಹಾಡನ್ನು ಹಾಡಿದ್ದಾರೆ.

ಇನ್ನು ಸ್ಟೇಜ್ ಮೇಲೆ ದೊಡ್ಮನೆಯ ಎಲ್ಲಾ ಸದ್ಯಸ್ಯರು ನಿಂತು ಅಪ್ಪು ಅವರ ಹೆಸರಿನಲ್ಲಿ ಮೌನಾಚಾರಣೆ ಮಾಡಿದ್ದಾರೆ. ಈ ವೇಳೆ ಅಶ್ವಿನಿ ಅವರು ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಇದನ್ನು ನೋಡಿದ ಪ್ರತಿಯೊಬ್ಬರು ಬಹಳ ಬೇಸರಗೊಂಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..

Leave a Reply

Your email address will not be published. Required fields are marked *