ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿ ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ. ಇನ್ನು ಅವರ ಕನಸ್ಸಿನ ಸಿನಿಮಾವನ್ನು ನೋಡಲು ಎಲ್ಲರೂ ಬಹಳ ಕಾತುರರಾಗಿದ್ದಾರೆ. ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಪುನೀತ ಪರ್ವ ಎನ್ನುವ ಹೆಸರಿನಲ್ಲಿ ಆಯೋಜಿಸಲಾಗಿತ್ತು.
ಇನ್ನು ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ದರು. ಇನ್ನು ಇದೆ ವೇಳೆ ಯಶ್ ಹಾಗೂ ರಾಧಿಕಾ ದಂಪತಿ ಕೂಡ ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದು, ವೇದಿಕೆ ಮೇಲೆ ನಟ ಯಶ್ ಅಪ್ಪು ಅವರ ಕೆಲವು ಗುಣಗಳ ಬಗ್ಗೆ ಮಾತನಾಡಿದ್ದು, ಎಲ್ಲರ ಕಣ್ಣಲ್ಲಿ ನೀರು ತರಿಸಿದ್ದಾರೆ. ಹಾಗಾದರೆ ಯಶ್ ಹೇಳಿದ್ದೇನು ನೋಡೋಣ ಬನ್ನಿ…
ಯಾವಾಗಲೂ ನಗುನಗುತ್ತಾ ಪ್ರೀತಿಯಿಂದ ಬದುಕಿದಂತಹ ಜೀವ, ಆ ಒಂದು ಜೀವ ತಾನು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿದ್ದಾರೆ, ಮಕ್ಕಳಿಗೆ ಒಳ್ಳೆಯ ತಂದೆಯಾಗಿದ್ದಾರೆ, ಅಣ್ಣಂದಿರಿಗೆ ಒಳ್ಳೆಯ ತಮ್ಮ ಆಗಿದ್ದಾರೆ, ಸಾಕಷ್ಟು ಸ್ನೇಹಿತರಿಗೆ ಒಂದು ರೀತಿಯ ಶಕ್ತಿಯಾಗಿದ್ದಾರೆ.
ಅದೆಷ್ಟೋ ನಿರ್ದೇಶಕರು ನಿರ್ಮಾಪಕರು ಅಪ್ಪು ಅವರನ್ನು ಆರಾಧಿಸುತ್ತಾರೆ. ನಾನು ಇಷ್ಟೆಲ್ಲಾ ಹೇಳಲು ಕಾರಣ, ಇಷ್ಟೆಲ್ಲಾ ಕೆಲಸ ಮಾಡಿ, ಇಷ್ಟೆಲ್ಲಾ ಪ್ರೀತಿ ಗಳಿಸಿರುವ ವ್ಯಕ್ತಿ ಇವತ್ತು ಒಂದು ಕೆಲಸ ಮಾಡಿದ್ದಾರೆ. ನನ್ನ ಪ್ರಕಾರ ಅವರು ತಮ್ಮ ಬಾಲ್ಯದ ವಯಸ್ಸಿನಲ್ಲೇ ಅಭಿನಯಿಸಿದ್ದಾರೆ.
ನಂತರ ರಾಜ್ ಕುಮಾರ್ ಅವರ ಮಗನಾಗಿದ್ದರೂ ಸಹ ತಮ್ಮ ಸ್ವಂತ ಶ್ರಮದಿಂದ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ನಟನೆ ಅವರ ಡ್ಯಾನ್ಸ್ ಅವರ ಫೈಟ್ ಗೆ ಯಾರು ಸಹ ಟಕ್ಕರ್ ಕೊಡಲು ಸಾಧ್ಯವಿಲ್ಲ. ಇಂದು ಅವರು ನಮ್ಮ ಜೊತೆ ಇಲ್ಲದಿದ್ದರೂ ಸಹ ಅವರು ಮಾಡಿರುವಂತಹ ಕೆಲಸ ತೆರೆ ಮೇಲೆ ಬರುತ್ತಿದೆ.
ಈ ಒಂದು ಕಾರಣ ಸಾಕು ಆ ವ್ಯಕ್ತಿಗೆ ಎಂತಹ ಶಕ್ತಿ ಇದೆ ಎಂದು ಹೇಳೋದಕ್ಕೆ. ಗಂಧದಗುಡಿ, ಅವರ ಮನೆಯೇ ಒಂದು ಗಂಧದಗುಡಿ, ಶ್ರೀಗಂಧ ತೇದು ತೇದು ಬೇರೆಯವರಿಗೆ ಪರಿಮಳ ಕೊಡುತ್ತದೆ, ಅದೇ ರೀತಿ ಕಲೆಗೆ ತಮ್ಮ ಇಡೀ ಜೀವನ ತೇದಿರುವ ವಂಶ ಅದು, ಈ ವೇದಿಕೆ ಮೇಲೆ ನಿಂತಿದ್ದ ಆ ಕುಟುಂಬದ ಪ್ರತಿಯೊಬ್ಬರು ಕರ್ನಾಟಕದ ಸಾಂಸ್ಕೃತಿಕ ಸಂಕೇತವಾಗಿದ್ದಾರೆ.
ಅವರ ಮೇಲೆ ನಿಮ್ಮೆಲ್ಲರ ಪ್ರೀತಿ ಹೀಗೆ ಸದಾ ಕಾಲ ಇರಲಿ ಎಂದು ಅಪ್ಪು ಅವರ ಗುಣಗಳನ್ನು ವರ್ಣಿಸುತ್ತಾ ಅಶ್ವಿನಿ ಮೇಡಂ ಅವರಿಗೆ ಧನ್ಯವಾದಗಳನ್ನು ನಟ ಯಶ್ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ, ಹಾಗೆ ಈ ಪೋಸ್ಟ್ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ.