ಅಪ್ಪು ಅವರ ಅಭಿನಯದ ಗಂಧದಗುಡಿ ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಸದ್ಯ ಎಲ್ಲೆಡೆ ಈ ಸಿನಿಮಾದ ಬಗ್ಗೆ ಚರ್ಚೆಗಳು ಶುರುವಾಗಿದೆ. ಇನ್ನು ಈ ಸಿನಿಮಾದಲ್ಲಿ ಕೊನೆಯ ಬಾರಿ ಅಪ್ಪು ಅವರನ್ನು ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಬೇಕು ಎಂದು ಅವರ ಅಭಿಮಾನಿಗಳು ಕಾತುರರಾಗಿ ಕುಳಿತಿದ್ದಾರೆ.
ಗಂಧದಗುಡಿ ಸಿನಿಮಾಗಾಗಿ ಅಪ್ಪು ಅವರ ಅಭಿಮಾನಿಗಳು ಈಗಲೇ ಅದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಗಂಧದಗುಡಿ ಸಿನಿಮಾ ಅಪ್ಪು ಅವರ ಕೊನೆಯ ಸಿನಿಮಾ ಆಗಿದ್ದು, ಈ ಸಿನಿಮಾದ ಬಿಡುಗಡೆಯ ದಿನ ಅದನ್ನು ಹಬ್ಬದಂತೆ ಆಚರಿಸಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ.
ಇತ್ತೀಚೆಗೆ ಗಂಧದಗುಡಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು, ಇನ್ನು ಈ ಟ್ರೇಲರ್ ಬಿಡುಗಡೆಯಾಗುತ್ತಲೇ ಯೂಟ್ಯೂಬ್ ನಲ್ಲಿ ಮಿಲಿಯನ್ಸ್ ಗಟ್ಟಲೆ ವೀಕ್ಷಣೆ ಹಾಗೂ ಲೈಕ್ಸ್ ಪಡೆದುಕೊಂಡಿದೆ. ಇನ್ನು ಈ ಟ್ರೇಲರ್ ನೋಡಿ ಸಾಕಷ್ಟು ಜನ ಬಹಳ ಭಾವುಕರಾಗಿದ್ದರು.
ಇನ್ನು ಗಂಧದಗುಡಿ ಸಿನಿಮಾದ ಬಿಡುಗಡೆಗೆ ಮುನ್ನ ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮ ಮಾಡಲಾಗಿತ್ತು. ಇನ್ನು ಈ ಕಾರ್ಯಕ್ರಮನ್ನು ಪುನೀತ ಪರ್ವ ಎನ್ನುವ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಸ್ವತಃ ಅಶ್ವಿನಿ ಮೇಡಂ ಅವರು ಮುಂದೆ ನಿಂತು ಮಾಡಿದ್ದರು.
ಇನ್ನು ಪುನೀತ್ ಪರ್ವ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರು ಬಹಳ ಭಾವುಕರಾಗಿ ಹೊರಬಂದರು. ಇನ್ನು ಇದೆ ಕಾರ್ಯಕ್ರಮಕ್ಕೆ ಆಗಮಿಸಿಲಾಗದೆ ಮನೆಯಲ್ಲೇ ತನ್ನ ಕುಟುಂಬದ ಜೊತೆ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸಿದ ಅಪ್ಪು ಅಭಿಮಾನಿ ಇದೀಗ ಹೃದಯಾ-ಘಾತದಿಂದ ಸಾ-ವನ್ನಪ್ಪಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ಸಕತ್ ವೈರಲ್ ಆಗುತ್ತಿದೆ.
29 ವರ್ಷದ ಗಿರಿರಾಜ್ ಅಪ್ಪು ಅವರ ದೊಡ್ಡ ಅಭಿಮಾನಿಯಾಗಿದ್ದರು, ಇನ್ನು ಪುನೀತಪರ್ವ ಕಾರ್ಯಕ್ರಮವನ್ನು ಟಿವಿಯಲ್ಲಿ ಕುಟುಂಬದ ಜೊತೆಗೆ ವೀಕ್ಷಿಸುತ್ತುದ್ದು, ಕಾರ್ಯಕ್ರಮ ನೋಡುತ್ತಾ ಬಿಕ್ಕಿ ಬಿಕ್ಕಿ ಅಳ್ಳುತ್ತಿದ್ದರಂತೆ, ಇನ್ನು ಹುಟ್ಟುದರೆ ಅಪ್ಪು ರೀತಿ ಹುಟ್ಟಬೇಕು, ಬದುಕಿದರೆ ಅಪ್ಪು ರೀತಿ ಬದುಕಬೇಕು ಎಂದು ತುಂಬಾ ಬೇಸರ ಮಾಡಿಕೊಳ್ಳುತ್ತಿದ್ದರಂತೆ.
ಇನ್ನು ಹಾಗೆ ಬೇಸರದಲ್ಲಿ ಶೌಚಾಲಯಕ್ಕೆ ಹೋಗಿ ಅಲ್ಲಿ ಕುಸಿದು ಬಿದ್ದಿದ್ದಾರೆ, ಹಾಗೆ ಸಮೀಪದಲ್ಲಿದ್ದ ಆಸ್ಪತ್ರೆಗೆ ಆತನನ್ನು ಕುಟುಂಬಸ್ಥರು ಧಾವಿಸಿದ್ದಾರೆ. ಆದರೆ ಆಸ್ಪತ್ರೆ ಹೋಗುವಷ್ಟರಲ್ಲಿ ಗಿರಿರಾಜ್ ನಿ*ಧ*ನರಾಗಿದ್ದಾರೆ ಎಂದು ಸ್ವತಃ ಗಿರಿರಾಜ್ ಅವರ ತಂದೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..