ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪುತ್ರ ನೆನ್ನೆ ಅಕ್ಟೊಬರ್ 23 ರಂದು ಮೂರನೇ ವಸಂತಕ್ಕೆ ಕಾಲಿಟ್ಟಿದ್ದಾನೆ. ನಟಿ ಮೇಘನಾ ರಾಜ್ ಈ ವಿಶೇಷ ದಿನದಂದು ತಮ್ಮ ಮತ್ತು ತಮ್ಮ ಮಗ ರಾಯನ್ ರಾಜ್ ಸರ್ಜಾನ ಸೆಲ್ಫಿ ಫೋಟೋಗಳನ್ನು ಒಳಗೊಂಡ ವಿಶೇಷ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲದ ಮಗ ರಾಯನ್ ನ ಹುಟ್ಟುಹಬ್ಬವನ್ನು ತಮ್ಮ ಕುಟುಂಬಸ್ಥರ ಜೊತೆ ಹಾಗೆ ಸ್ನೇಹಿತರ ಜೊತೆ ಸರಳವಾಗಿ ಆಚರಿಸಿದ್ದು, ಹುಟ್ಟುಹಬ್ಬದ ಫೋಟೋ ವಿಡಿಯೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ತಮ್ಮ ಮುದ್ದು ಹುಡುಗ ಎರಡು ವರ್ಷ ಪೂರೈಸಿದ್ದಾನೆ ಎಂದು ನಟಿ ಮೇಘನಾ ರಾಜ್ ಫೋಟೋ ಹಾಗೂ ವಿಡಿಯೋ ಹಂಚಿಕೊಂಡು ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್ ನೋಡಿದ ಪ್ರತಿಯೊಬ್ಬರು ಮಗ ರಾಯನ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸುತ್ತಿದ್ದಾರೆ.
ಇನ್ನು ಮೇಘನಾ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಯನ್ ತನ್ನ ಹುಟ್ಟುಹಬ್ಬದಂದು ಸಕತ್ ಆಗಿ ಮಿಂಚಿದ್ದಾನೆ. ರಾಯನ್ ಕೇಕ್ ಕಟ್ ಮಾಡಿದ್ದು, ತನ್ನ ಸ್ನೇಹಿತರ ಜೊತೆಗೆ ಸೇರಿ ಡ್ಯಾನ್ಸ್ ಕೂಡ ಮಾಡಿದ್ದಾನೆ. ಇನ್ನು ಮೇಘನಾ ರಾಜ್ ಮಗ ರಾಯನ್ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ.
ಇನ್ನು ಸರ್ಜಾ ಕುಟುಂಬದಿಂದ ರಾಯನ್ ಹುಟ್ಟುಹಬ್ಬಕ್ಕೆ ಚಿರು ತಾಯಿ ಮೇಘನಾ ರಾಜ್ ಅತ್ತೆ ಅಮ್ಮಾಜಿ ಹಾಗೂ ಧೃವ ಸರ್ಜಾ ಇಬ್ಬರೂ ಬಂದಿದ್ದು, ರಾಯನ್ ಗಾಗಿ ವಿಶೇಷ ಉಡುಗೊರೆಯನ್ನೇ ತಂದಿದ್ದಾರೆ. ಹೌದು ರಾಯನ್ ಗಾಗಿ ಅಮ್ಮಾಜಿ ಹಾಗೂ ಧೃವ ಸರ್ಜಾ ಬಂಗಾರದ ಎರಡು ಕಡಗಗಳನ್ನು ತಂದಿದ್ದಾರೆ.
ಇನ್ನು ಅಜ್ಜಿ ತಂದ ಉಡುಗೊರೆ ನೋಡಿ ರಾಯನ್ ಬಹಳ ಖುಷಿ ಪಟ್ಟಿದ್ದಾನೆ. ಹಾಗೆ ಧೃವ ಸರ್ಜಾ ಹಾಗೂ ಅಮ್ಮಾಜಿ ಆ ಕಡಗಗಳನ್ನು ರಾಯನ್ ಕೈಗೆ ತೊಡಿಸಿ ಅವನನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಸದ್ಯ ರಾಯನ್ ಹುಟ್ಟುಹಬ್ಬದ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಇನ್ನು ಚಿತ್ರರಂಗದ ಅನೇಕ ಕಲಾವಿದರು ಹಾಗೆ ಅನೇಕ ಅಭಿಮಾನಿಗಳು ರಾಯನ್ ಹುಟ್ಟುಹಬ್ಬಕ್ಕೆ ಸೋಷಿಯಲ್ ಮಿಡಿಯಾದ ಮುಖಾಂತರ ಶುಭ ಕೋರಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಕನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..