ಪುನೀತ್ ರಾಜ್ ಕುಮಾರ್ ಅವರು ಒಬ್ಬ ಅದ್ಭುತ ನಟ, ಹಾಗೆ ಒಬ್ಬ ಅದ್ಭುತ ವ್ಯಕ್ತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಪುನೀತ್ ಅವರಿಗೆ ಊಟದ ವಿಷಯದಲ್ಲಿ ಕೂಡ ತುಂಬಾ ಒಳ್ಳೆಯ ರುಚಿ ಇದ್ದು, ಅವರು ಆಗಾಗ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ಅಲ್ಲಿನ ಆಹಾರವನ್ನು ಸವಿಯುತ್ತಿದ್ದರು.
ಇನ್ನು ಆಹಾರಕ್ಕೆ ತುಂಬಾ ಜನಪ್ರಿಯವಾದಂತಹ ಸ್ಥಳ ಎಂದರೆ ಅದು ನಮ್ಮ ಬೆಂಗಳೂರಿನ ವಿವಿ ಪುರಂ. ಹೌದು ವಿವಿ ಪುರಂನಲ್ಲಿ ಅದೆಷ್ಟೋ ವಿಧವಿಧವಾದ ಆಹಾರಗಳು ದೊರೆಯುತ್ತದೆ ಎನ್ನುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಆದರೆ ಇದೇ ವಿವಿ ಪುರಂನಲ್ಲಿ ಅಪ್ಪು ಅವರ ಫೇವರೇಟ್ ತಿನಿಸು ಕೂಡ ಇದೆ.
ಹೌದು ಅಪ್ಪು ಅವರು ಊಟದ ವಿಚಾರದಲ್ಲಿ ಒಳ್ಳೆಯ ರುಚಿ ಇಟ್ಟಿದ್ದರು. ಒಳ್ಳೆಯ ಆಹಾರ ಪ್ರಿಯರಾಗಿರುವ ಅಪ್ಪು ಆಗಾಗ ಹೊಸ ತನದ ಆಹಾರ ಸೇವಿಸಲು ಬೇರೆ ಬೇರೆ ಜಾಗಗಳಿಗೆ ಭೇಟಿ ನೀಡುತ್ತಿದ್ದರು. ಇನ್ನು ಅಪ್ಪು ಅವರ ಫೇವರೇಟ್ ಸ್ಪಾಟ್ ಎಂದರೆ ಅದು ನಮ್ಮ ಬೆಂಗಳೂರಿನ ವಿವಿ ಪುರಂ ಸ್ಟ್ರೀಟ್ ಫುಡ್.
ವಿವಿ ಪುರಂನ ಅವರೆಕಾಳು ದೋಸೆ ಹಾಗೂ ಪಡ್ಡು ತಿಂಡಿ ಅಪ್ಪು ಅವರಿಗೆ ಬಹಳ ಇಷ್ಟವಾಗಿತ್ತು. ಇನ್ನು ಸಮಯ ಸಿಕ್ಕಾಗಲೆಲ್ಲಾ ಅಪ್ಪು ಇಲ್ಲಿಗೆ ಭೇಟಿ ನೀಡಿ, ಈ ತಿಂಡಿಯನ್ನು ಸವಿದು ಆನಂದಿಸುತ್ತಿದ್ದರಂತೆ. ಇನ್ನು ಅಪ್ಪು ಅವರು ಇದೀಗ ನಮ್ಮ ಜೊತೆಗೆ ಇಲ್ಲದೆ ಇರುವುದು ನಿಜಕ್ಕೂ ಎಲ್ಲರಿಗೂ ಬೇಸರ ತಂದಿದೆ.
ಇನ್ನು ಇದೀಗ ಅಪ್ಪು ನೆನಪಿನಲ್ಲಿ ಅಪ್ಪು ಪತ್ನಿ ಅಶ್ವಿನಿ ಹಾಗೂ ಅವರ ಮಗಳು ಹಾಗೆ ನಿರೂಪಕಿ ಅನುಶ್ರೀ ಹಾಗೂ ಇನ್ನಿತರ ಸ್ನೇಹಿತರು ವಿವಿ ಪುರಂನ ಸ್ಟ್ರೀಟ್ ಫುಡ್ ಜಾಗಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಈ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಪ್ಪು ಅವರ ಫೇವರೇಟ್ ಆಗಿರುವ ಅವರೆಕಾಳು ದೋಸೆ ಹಾಗೂ ಪಡ್ಡು ತಿನಿಸುಗಳನ್ನು ಅಶ್ವಿನಿ ಹಾಗೂ ಅವರ ಮಗಳ ಜೊತೆಗೆ ನಟಿ ಅನುಶ್ರೀ ಅವರು ರುಚಿ ನೋಡಿದ್ದಾರೆ. ಇನ್ನು ಈ ತಿನಿಸುಗಳನ್ನು ಬಹಳ ಆನಂದದಿಂದ ತಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಅಶ್ವಿನಿ ಮೇಡಂ ಅವರು ಸವಿದು ಆನಂದಿಸಿದ್ದಾರೆ.
ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ, ಹಾಗೆ ಈ ಪೋಸ್ಟ್ ಗೆ ಒಂದು ಲೈಕ್ ಮಾಡಿ ಹಾಗೆ ಇದನ್ನು ಶೇರ್ ಮಾಡಿ…