ಕರ್ನಾಟಕದ ಯಾವುದೇ ಚಿತ್ರಮಂದಿರಗಳಿಗೆ ಹೋದರು ಯಾವುದೇ ಮಲ್ಟಿಫ್ಲೆಸ್ಸ್ ಗಳಿಗೆ ಹೋದರು ಕಾಂತಾರ ಸಿನಿಮಾದೇ ಹವಾ. ಈ ಸಿನಿಮಾದ ಪ್ರತಿಯೊಂದು ಪಾತ್ರವೂ ಕೂಡ ಬಹಳ ಹೈ ಲೈಟ್ ಆಗಿದ್ದು, ಅವರ ಅಭಿನಯಕ್ಕೆ ಎಲ್ಲರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿದೆ ಎಂದರೆ ತಪ್ಪಾಗಲಾರದು.
ಇನ್ನು ತಮ್ಮ ಅಮೋಘ ಅಭಿನಯದ ಮೂಲಕ ಅದೆಷ್ಟೋ ಜನರ ಹೃದಯ ಕದ್ದಿರುವ ಲೀಲಾ ಪಾತ್ರಧಾರಿ ಸಪ್ತಮಿ ಗೌಡ, ತಮ್ಮ ಈ ಒಂದು ಸಿನಿಮಾದ ಮೂಲಕ ಬಹುದೊಡ್ಡ ಸಕ್ಸಸ್ ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಸದ್ಯ ನಟಿಯ ಬಗ್ಗೆ ಒಂದೆಲ್ಲಾ ಒಂದು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ.
ಸದ್ಯ ನಟಿ ಸಪ್ತಮಿ ಗೌಡ ಅವರ ವಯಸ್ಸಿನ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಹಾಗಾದರೆ ನಟಿ ಸಪ್ತಮಿ ಗೌಡ ಅವರ ವೈಯಸೇಷ್ಟು ಎನ್ನುವುದನ್ನು ತಿಳಿಸುತ್ತೇವೆ, ಅದಕ್ಕಾಗಿ ಈ ಪುಟವನ್ನು ಸಂಪೂರ್ಣವಾಗಿ ಓದಿ. ಹೌದು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ನಟಿ ಸಪ್ತಮಿ ಗೌಡ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.
ಇನ್ನು ಈ ಸಿನಿಮಾದಲ್ಲಿ ಡಾಲಿ ಧನಂಜಯ ಜೊತೆಗೆ ಸಕತ್ ರಗಡ್ ಆಗಿ ಕಾಣಿಸಿಕೊಂಡು, ಸ್ಲ್ಯಾಂಗ್ ಡೈಲಾಗ್ ಗಳು ಹೊಡೆಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸೌಂಡ್ ಮಾಡಿದ್ದರು. ಅದರಂತೆ ಇದೀಗ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡು ಮತ್ತಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಇನ್ನು ಕಾಂತಾರ ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ಲೀಲಾ ಹೆಸರಿನ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿನ ನಟಿಯ ಅಭಿನಯಕ್ಕೆ ಎಲ್ಲರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಸಿನಿಮಾಗೆ ಲೀಲಾ ಪಾತ್ರ ಹೇಳಿ ಮಾಡಿಸಿದಂತಿದೆ ಎಂದು ಅಭಿಮಾನಿಗಳು ನಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡುತ್ತಿದ್ದಾರೆ.
ಈ ಸಿನಿಮಾದ ಸಿಂಗಾರ ಸಿರಿಯೇ ಹಾಡು ಎಲ್ಲರ ಮೆಚ್ಚಿನ ಹಾಡಾಗಿದ್ದು, ಇನ್ನು ಈ ಹಾಡಿನ ಮೂಲಕ ನಟಿ ಸಪ್ತಮಿ ಗೌಡ ಇನ್ನಷ್ಟು ಹೈ ಲೈಟ್ ಆದರೂ ಎಂದರೆ ತಪ್ಪಾಗಲಾರದು. ಇನ್ನು ನಟಿ ಸಪ್ತಮಿ ಗೌಡ ಅವರ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವುದಾದರೆ, ನಟಿ ಸಪ್ತಮಿ ಗೌಡ ಮೂಲತಃ ಬೆಂಗಳೂರಿನವರು.
ಇನ್ನು ನಟಿ 8 ಜೂನ್ 1996 ರಂದು ಜನಿಸಿದ್ದು, ನಟಿಗೆ ಇದೀಗ 26 ವರ್ಷ ವಯಸ್ಸಾಗಿದೆ. ಇನ್ನು ಸದ್ಯ ತುಂಬಾ ಜನಪ್ರಿಯತೆ ಪಡೆದುಕೊಂಡಿರಿವ ನಟಿಯ ಮುಂದಿನ ಸಿನಿ ಜೀವನ ಹೇಗಿರಲಿದೆ ಎಂದು ಕಾದು ನೋಡಬೇಕಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.