ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಎಂದರೆ ಅದು ನಮ್ಮ ಧೃವ ಸರ್ಜಾ, ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಎಂದೇ ಖ್ಯಾತಿ ಪಡೆದುಕೊಂಡಿರುವ ನಟ ಧೃವ ಸರ್ಜಾ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಟ ಧೃವ ಸರ್ಜಾ ಅವರ ಅಭಿನಯಕ್ಕೆ ಫಿದಾ ಆಗದೆ ಇರುವವರೆ ಇಲ್ಲ.
ನಟ ಧೃವ ಸರ್ಜಾ ಕನ್ನಡ ಸಿನಿಮಾರಂಗದಲ್ಲಿ ಮಾಡಿರುವುದು ಕೇವಲ ಕೆಲವೇ ಕೆಲವು ಸಿನಿಮಗಳಾದರೂ ಸಹ ಅವರಿಗೆ ಇರುವ ಕ್ರೇಜ್ ಹಾಗೆ ಅವರ ಸಿನಿಮಾಗಳಿಗೆ ಇರುವ ಹೈಪ್ ಬೇರೆ ಯಾವ ಸಿನಿಮಾಗಳಿಗೂ ಇಲ್ಲ ಎಂದರೆ ತಪ್ಪಾಗುವುದಿಲ್ಲ.
ನಟ ಧೃವ ಸರ್ಜಾ ಅವರು ಸದ್ಯ ಮಾರ್ಟಿನ್ ಸಿನಿಮಾದ ಶೂಟಿಂಗ್ ನಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. ಇನ್ನು ಈ ಸಿನಿಮಾದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿತ್ತು, ಸದ್ಯ ಈ ಫೋಟೋ ಎಲ್ಲೆಡೆ ಸಕತ್ ವೈರಲ್ ಆಗಿತ್ತು. ಇನ್ನು ಈ ಪೋಸ್ಟರ್ ನೋಡಿ ಅಭಿಮಾನಿಗಳು ಸಕತ್ ಫಿದಾ ಆಗಿದ್ದಾರೆ.
ಇನ್ನು ಧೃವ ಸರ್ಜಾ ಅವರು ಒಬ್ಬ ಅದ್ಭುತ ಕಲಾವಿದ ಮಾತ್ರವಲ್ಲ ಒಬ್ಬ ಅದ್ಭುತ ಮನುಷ್ಯ ಕೂಡ ಹೌದು. ಯಾವುದೇ ಹೊಸ ಪ್ರತಿಭೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರೆ ಧೃವ ಸರ್ಜಾ ಅವರ ಬೆನ್ನೆಲುವಾಗಿ ಸದಾ ನಿಂತಿರುತ್ತಾರೆ. ಅದೆಷ್ಟೋ ಕಲಾವಿದರಿಗೆ ಯಾರಿಗೂ ತಿಳಿಯದೆ ಹಾಗೆ ನಟ ಧೃವ ಸರ್ಜಾ ಸಹಾಯ ಮಾಡಿರುವುದು ಸಹ ಉಂಟು.
ನಟ ಧೃವ ಸರ್ಜಾ ಅವರ ಗೆಳೆಯ ಶ್ರೇಯಸ್ ಮಂಜು ಖ್ಯಾತ ನಿರ್ದೇಶಕ ನಂದ ಕಿಶೋರ್ ಅವರ ಸಿನಿಮಾ ರಾಣದಲ್ಲಿ ಅಭಿನಯಿಸುತ್ತಿದ್ದು, ಈಗಾಗಲೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಕತ್ ಸದ್ದು ಮಾಡುತ್ತಿದೆ. ಇನ್ನು ಇದೀಗ ಈ ಸಿನಿಮಾದ ಪ್ರೆಸ್ ಮೀಟ್ ಒಂದಕ್ಕೆ ಧೃವ ಸರ್ಜಾ ಭಾಗಿಯಾಗಿದ್ದಾರೆ.
ಇನ್ನು ಮಾದ್ಯಮದವರ ಮುಂದೆ ಧೃವ ಸರ್ಜಾ, ರಾಣ ಎಂದ ತಕ್ಷಣ ನನಗೆ ನೆನಪಾಗುವುದು ಅಂಬರೀಷ್ ಅವರು ಎಂದು ಹೇಳಿ, ಅಂಬರೀಷ್ ಅವರ ಖಡಕ್ ಡೈಲಾಗ್ ಹೊಡೆದು ಮಾತು ಆರಂಭಿಸಿದ್ದಾರೆ. ರಾಣ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನಿಮಾವನ್ನು ಪ್ರತಿಯೊಬ್ಬರು ಮಿಸ್ ಮಾಡದೆ ನೋಡಿ.
ನಾನು ಸಹ ನನ್ನ ಕುಟುಂಬದ ಜೊತೆಗೆ ಹಾಗೂ ನನ್ನ ಸ್ನೇಹಿತ ಶ್ರೇಯಸ್ ಜೊತೆಗೆ ಈ ಸಿನಿಮಾವನ್ನು ಫರ್ಸ್ಟ್ ಡೇ ಫರ್ಸ್ಟ್ ಶೋ ನೋಡುತ್ತೇನೆ. ನೀವು ಸಹ ಕನ್ನಡ ಸಿನಿಮಾವನ್ನು ತಪ್ಪದೆ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.