ಮೊನ್ನೆ ನಡೆದ ಪುನೀತ ಪರ್ವ ಕಾರ್ಯಕ್ರಮವೂ ಒಂದು ಆಚರಣೆಯಾಗಿ ಇರುವುದರ ಜೊತೆಗೆ ಒಂದು ಭಾವನಾತ್ಮಕವಾಗಿ ಸಹ ಇತ್ತು. ಈ ಕಾರ್ಯಕ್ರಮಕ್ಕೆ ಇಡೀ ಸ್ಯಾಂಡಲ್ವುಡ್ ಹಾಗೆ ಗಣ್ಯರ ಸಮಾಘಮ ನಡೆದಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಕನ್ನಡದ ಜೊತೆಗೆ ಬೇರೆ ಭಾಷೆಯ ನಟರು ಸಹ ಆಗಮಿಸಿದ್ದರು.
ತೆಲುಗಿನಿಂದ ನಟ ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ, ಹಾಗೆ ತಮಿಳಿನಿಂದ ಖ್ಯಾತ ನಟ ಸೂರ್ಯ ಅವರು ಆಗಮಿಸಿದ್ದರು. ಇನ್ನು ಸಿನಿಮಾರಂಗದ ಮೇರು ನಟರಾದ ನಟ ಅಮಿತಾಬ್ ಬಚ್ಚನ್ ಹಾಗೆ ನಟ ಕಮಲ್ ಹಾಸನ್ ಅವರು ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಬರಲಾಗದ ಕಾರಣ ಒಂದು ವಿಡಿಯೋ ಬೈಟ್ ಅನ್ನು ಕಳುಹಿಸಿಕೊಟ್ಟಿದ್ದರು.
ಹೀಗೆ ಅಪ್ಪು ಅವರ ಈ ಪುನೀತಪರ್ವ ಕಾರ್ಯಕ್ರಮಕ್ಕೆ ಅದೆಷ್ಟೋ ಸ್ಟಾರ್ ನಟರು ಭಾಗಿಯಾಗಿದ್ದರು. ಇನ್ನು ಚಂದನವನದ ಸ್ಟಾರ್ ನಟರಾದ ರವಿಚಂದ್ರನ್, ಯಶ್ ಅವರು ಸೇರಿ ಅದೆಷ್ಟೋ ಸ್ಟಾರ್ ನಟರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು.
ಶಿವಣ್ಣ ಅವರು ಅಪ್ಪು ಅವರ ಹಾಡಿಗೆ ಭರ್ಜರಿಯಾಗಿ ನೃತ್ಯ ಮಾಡಿದ್ದರು, ಅಲ್ಲದೆ ಸ್ಯಾಂಡಲ್ವುಡ್ ನ ಮೋಹಕತಾರೆ ನಟಿ ರಮ್ಯಾ ಅವರು ಕೂಡ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದರು. ಇನ್ನು ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಅಪ್ಪು ಆವರಿಗಾಗಿ ವಿಶೇಷ ಹಾಡನ್ನು ಹಾಡಿದ್ದರು.
ಇನ್ನು ಅಪ್ಪು ಅವರ ಇಡೀ ಕುಟುಂಬ ವಿಜಯ್ ಪ್ರಕಾಶ ಅವರ ಜೊತೆಗೆ ಸೇರಿ ಬೊಂಬೆ ಹೇಳುತೈತೆ ಹಾಡನ್ನು ವೇದಿಕೆ ಮೇಲೆ ಹಾಡಿದ್ದರು. ಸಾಕಷ್ಟು ವಿಶೇಷಗಳಿಂದ ಕೂಡಿದ್ದ ಈ ಕಾರ್ಯಕ್ರಮದಲ್ಲಿ ನಟ ಯಶ್ ಅವರು ಹೇಳಿದ ಮಾತುಗಳು ಹಾಗೆ ನಟ ಸೂರ್ಯ ಅವರು ಹೇಳಿದ ಮಾತುಗಳು ಎಲ್ಲರ ಮನ ಗೆದ್ದವು.
ಅಪ್ಪು ಅವರ ಕೊನೆಯ ಸಿನಿಮಾ ಆಗಿರುವ ಗಂಧದಗುಡಿಯನ್ನು ನೋಡಿ ಕಣ್ತುಂಬಿಕೊಳ್ಳಲು ಎಲ್ಲರೂ ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಮೊನ್ನೆ ನಡೆದ ಈ ಪುನೀತಪರ್ವ ಕಾರ್ಯಕ್ರಮಕ್ಕೆ ಇಡೀ ದೊಡ್ಮನೆಯ ಕುಟುಂಬ ಬಂದಿತ್ತು, ಆದರೆ ಅಪ್ಪು ಅವರ ದೊಡ್ಡ ಮಗಳು ಧೃತಿ ಅವರು ಬಂದಿರಲಿಲ್ಲ.
ಇನ್ನು ದೃತಿ ಅವರು ಬರದೆ ಇರಲು ಕಾರಣ ಏನಿರಬಹುದು ಎಂದು ಸಾಕಷ್ಟು ಜನ ಪ್ರಶ್ನೆ ಮಾಡಿದ್ದರು, ಅದಕ್ಕೆ ಕಾರಣ ಅಪ್ಪು ಅವರ ಚಿಕ್ಕ ಮಗಳು ತಿಳಿಸಿದ್ದಾರೆ. ಇನ್ನು ಅಪ್ಪು ಮಗಳು ದೃತಿ ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ, ಇನ್ನು ಪರೀಕ್ಷೆ ಇದ್ದ ಕಾರಣ ಅವರು ಬರಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.