ಹೊಸ ಮನೆಹೋಗಿ ಒಂದೂವರೆ ವರ್ಷ ಆದ್ರೂ 1 ಸಿಲೆಂಡರ್ ಖಾಲಿ ಆಗಿಲ್ಲ: ನಿವೇದಿತಾ ಗೌಡ!…

ಸ್ಯಾಂಡಲವುಡ್

ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಕಾರ್ಯಕ್ರಮಗಳು ಎಂದರೆ ಅದು ಕಲರ್ಸ್ ಕನ್ನಡ ವಾಹಿನಿಯ ನಮ್ಮಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ. ಇನ್ನು ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಸೀಸನ್ 2 ಶುರುವಾಗಿದ್ದು, ಮಕ್ಕಳ ಹಾಗೂ ಅಮ್ಮಂದಿರ ಆಟ ನೋಡಿ ಪ್ರೇಕ್ಷಕರು ಮನ ಸೋತಿದ್ದಾರೆ.

ಇನ್ನು ದೀಪಾವಳಿ ಹಬ್ಬದ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿ ತನ್ನ ವೀಕ್ಷಕರಿಗೆ ಇನ್ನಷ್ಟು ಮನರಂಜನೆ ನೀಡಲು ಗಿಚ್ಚಿ ಗಿಲಿ ಗಿಲಿ ಸ್ಪರ್ಧಿಗಳ ಜೋತೆಗೆ ನಮ್ಮಮ್ಮ ಸೂಪರ್ ಸ್ಟಾರ್ ಸ್ಪರ್ಧಿಗಳ ಮಹಾಸಂಗಮ ನಡೆಸಿತ್ತು. ಗಿಚ್ಚಿ ಗಿಲಿಗಿಲಿ ಸ್ಪರ್ಧಿಗಳು ಮಕ್ಕಳ ಜೊತೆ ಸೇರಿ ಅದ್ಭುತವಾದ ಸ್ಕಿಟ್ ಮಾಡಿದ್ದರು.

ಇನ್ನು ಈ ಒಂದು ಸ್ಕಿಟ್ ನಲ್ಲಿ ನಿವೇದಿತಾ ಗೌಡ ಕೂಡ ಭಾಗವಹಿಸಿದ್ದರು. ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ತಮ್ಮ ಚಟಪಟ ಮಾತುಗಳಿಂದ ಸಾಕಷ್ಟು ಜನರ ಮನ ಗೆದ್ದಿದ್ದರು. ಇನ್ನು ತಮ್ಮ ಉತ್ತಮ ಹಾಗೂ ಅದ್ಭುತವಾದ ಕಾಮಿಡಿ ಹಾಗೂ ನಟನೆಯ ಮೂಲಕ ನಿವೇದಿತಾ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ರನ್ನರ್ ಆಗಿದ್ದರು.

ಇನ್ನು ಇದೀಗ ದೀಪಾವಳಿ ಹಬ್ಬದಂದು ನಡೆದಿದ್ದ ಮಹಾಸಂಗಮದ ದಿನ ನಿವೇದಿತಾ ಗೌಡ ಕೂಡ ಒಂದು ಸ್ಕಿಟ್ ನಲ್ಲಿ ಭಾಗವಹಿಸಿದ್ದರು. ಇನ್ನು ನಟಿ ನಿವೇದಿತಾ ಅವರ ಸ್ಕಿಟ್ ಮುಗಿದ ನಂತರ ತೀರ್ಪುಗಾರರಾಗಿದ್ದ ಸೃಜನ್ ಲೋಕೇಶ್ ನಿವೇದಿತಾ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಮಾಹಿತಿ ಬಿಟ್ಟುಕೊಟ್ಟಿದ್ದಾರೆ.

ಎಲ್ಲರೂ ನಿಮ್ಮ ಮನೆಯಲ್ಲಿ ಉಪಯೋಗಿಸುವ ಸಿಲಿಂಡರ್ ಎಷ್ಟು ದಿನ ಬರುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಅಲ್ಲಿದ್ದ ಸ್ಪರ್ಧಿಗಳು ಹಾಗೂ ತೀರ್ಪುಗಾರರಾದ ತಾರಮ್ಮ ಹಾಗೂ ಅನುಪ್ರಭಾಕರ್, 15 ದಿನದಿಂದ ಒಂದು ತಿಂಗಳವರೆಗೂ ಬರುತ್ತೆ ಎಂದಿದ್ದಾರೆ.

ಇದಕ್ಕೆ ಸೃಜನ್ ಲೋಕೇಶ್ ನಿವೇದಿತಾ ಮನೆಯಲ್ಲಿನ ಗ್ಯಾಸ್ ಸಿಲಿಂಡರ್ ಒಂದೂವರೆ ವರ್ಷ ಬಂದಿದೆ ಎಂದಿದ್ದಾರೆ. ಇದಕ್ಕೆ ಅಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ. ನೀನು ಮನೆಯಲ್ಲಿ ಅಡುಗೆನೇ ಮಾಡಿಲ್ವಾ ಎಂದು ಅಲ್ಲಿದ್ದವರು ನಿವೇದಿತಾಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಿವೇದಿತಾ ಗೌಡ ನಾನು ಇನ್ನು ಅಷ್ಟು ದಿನ ಅದನ್ನು ಉಪಯೋಗಿಸುತ್ತಿದೆ.

ಆದರೆ ನಮ್ಮ ಅಮ್ಮ ಆಗಾಗ ನಮ್ಮ ಮನೆಯಲ್ಲಿ ಅಡುಗೆ ಮಾಡಿ ಕಾಲಿ ಮಾಡಿದ್ದಾರೆ ಎಂದಿದ್ದಾರೆ. ಇನ್ನು ನಾನು ಯೂಟ್ಯೂಬ್ ವಿಡಿಯೋಗೆ ಒಂದು ರೆಸಿಪಿ ಮಾಡುವ ಸಮಯದಲ್ಲಿ ನನಗೆ ನಮ್ಮ ಮನೆಯ ಗ್ಯಾಸ್ ಸಿಲಿಂಡರ್ ಮುಗಿದು ಹೋಗಿದೆ ಎಂದು ತಿಳಿಯಿತು ಎಂದಿದ್ದಾರೆ. ಇನ್ನು ಈ ಬಗ್ಗೆ ಎಲ್ಲರೂ ತಮಾಷೆ ಮಾಡಿ ನಕ್ಕಿದ್ದಾರೆ.

Leave a Reply

Your email address will not be published. Required fields are marked *