ಪುನೀತ ಪರ್ವ ಕಾರ್ಯಕ್ರಮಕ್ಕೆ ದರ್ಶನ್ ಬರದಿರಲು ಕಾರಣ ಬಿಚ್ಚಿಟ್ಟ ಅಪ್ಪು ಪತ್ನಿ ಅಶ್ವಿನಿ! ಹೇಳಿದ್ದೇನು ಗೊತ್ತಾ?… ನೋಡಿ..

ಸ್ಯಾಂಡಲವುಡ್

ನಮಸ್ಕಾರ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನಸ್ಸಿನ ಪ್ರಾಜೆಕ್ಟ್ ಆಗಿದ್ದಂತಹ ಗಂಧದಗುಡಿ ಪ್ರೀ ರಿಲೀಸ್ ಈವೆಂಟ್, ಸ್ಯಾಂಡಲ್ವುಡ್ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಎಲ್ಲಾ ಭಾಷೆಯ ಸಿನಿ ಸೆಲೆಬ್ರೆಟಿಗಳೊಂದಿಗೆ ಅಭಿಮಾನಿಗಳು ಸೇರಿ ಬಹಳ ಅದ್ದೂರಿಯಾಗಿ ಅಪ್ಪು ಅವರಿಗೆ ನಮನ ಸಲ್ಲಿಸಿದ್ದರು.

ಈ ಒಂದು ಕಾರ್ಯಕ್ರಮಕ್ಕೆ ಸಾಕಷ್ಟು ಸ್ಟಾರ್ ಸೆಲೆಬ್ರೆಟಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಕೆಲವು ಸೆಲೆಬ್ರೆಟಿಗಳು ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ. ಅವರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಡಿ ಬಾಸ್ ದರ್ಶನ್ ಕೂಡ ಪ್ರಮುಖರು.

ಹೌದು ಗೆಳೆಯರೇ, ಕೊನೆಯ ಕ್ಷಣದವರೆಗೂ ದರ್ಶನ್ ಹಾಗೂ ಸುದೀಪ್ ಪುನೀತಪರ್ವ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು ಮಾತ್ರ ಸುಳ್ಳಲ್ಲ. ಈ ಸ್ಟಾರ್ ನಟರು ಹೀಗೆ ಮಾಡಿದ್ದು ಸರೀನಾ ಎಂದು ಬೇಸರವನ್ನು ವ್ಯಕ್ತಪಡಿಸುವಂತಾಗಿದೆ.

ಆದರೆ ಡಿ ಬಾಸ್ ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಬರದೆ ಇರಲು ಒಂದು ಕಾರಣವಿದೆ. ಹಾಗಾದರೆ ದರ್ಶನ್ ಅಪ್ಪು ಅವರ ಪುನೀತಪರ್ವ ಕಾರ್ಯಕ್ರಮಕ್ಕೆ ಬರದೆ ಇರಲು ಕಾರಣ ಏನು ಗೊತ್ತಾ?. ಇದಕ್ಕೆ ಉತ್ತರಿಸಿದ ಅಶ್ವಿನಿ ಮೇಡಂ ಹೇಳಿದ್ದೇನು ತಿಳಿಸುತ್ತೇವೆ. ಈ ಪುಟವನ್ನು ಸಂಪೂರ್ಣವಾಗಿ ಓದಿ..

ಅಪ್ಪು ಅವರ ಕನಸ್ಸಿನ ಸಿನಿಮಾ ಗಂಧದಗುಡಿ ಪ್ರೀ ರಿಲೀಸ್ ಕಾರ್ಯಕ್ರಮ, ಪುನೀತಪರ್ವ ಈ ಕಾರ್ಯಕ್ರಮಕ್ಕೆ ಸ್ವತಃ ಅಶ್ವಿನಿ ಮೇಡಂ ಅವರು ಎಲ್ಲಾ ತಯಾರಿಗಳನ್ನು ಮುಂದೆ ನಿಂತು ಮಾಡಿದ್ದಾರೆ. ಅಲ್ಲದೆ ಪ್ರತಿಯೊಬ್ಬ ಸೆಲೆಬ್ರೆಟಿಗಳಿಗೂ ಅಶ್ವಿನಿ ಮೇಡಂ ಕರೆ ಮಾಡಿ ಆಮಂತ್ರಣ ನೀಡಿದ್ದಾರೆ.

ಇನ್ನು ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಕಾರಣ ಅವರು ಅಪ್ಪು ಅವರ ಕಾರ್ಯಕ್ರಮಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲವಂತೆ. ಇನ್ನು ಈ ಬಗ್ಗೆ ಮಾತನಾಡಿದ ಅಶ್ವಿನಿ ಮೇಡಂ ಅವರು ದರ್ಶನ್ ಅವರ ಕ್ರಾಂತಿ ಸಿನಿಮಾದ ಶೂಟಿಂಗ್ ಡೇಟ್ ಈಗಾಗಲೇ ಫಿಕ್ಸ್ ಆಗಿತ್ತು.

ಇನ್ನು ಅದನ್ನು ಬಿಟ್ಟು ಬಂದರೆ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ತೊಂದರೆಯಾಗುತ್ತದೆ ಎಂದು ಅವರು ಬರಲಿಲ್ಲ. ಇನ್ನು ಸುದೀಪ್ ಅವರು ಒಂದು ವಾರದ ಹಿಂದೆಯೇ ವಿದೇಶಕ್ಕೆ ತಮ್ಮ ಪತ್ನಿಯ ಜೊತೆಗೆ ಪ್ರವಾಸಕ್ಕೆ ಹೋಗಿದ್ದ ಕಾರಣ ಅವರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ ಎನ್ನುವ ಮಾತುಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *