ಕೊಟ್ಟ ಮಾತು ಉಳಿಸಿಕೊಂಡ ಯಶ್! ಅಪ್ಪು ಹೆಸರಿನ 28 ಎಕ್ಸ್ ಪ್ರೆಸ್ ಅಂಬುಲೆನ್ಸ್ ವಿತರಣೆ!… ನೋಡಿ..

ಸ್ಯಾಂಡಲವುಡ್

ಒಬ್ಬ ಮನುಷ್ಯ ಹೇಗೆ ಬದುಕಬೇಕು, ಹೇಗೆ ತನ್ನ ಆದರ್ಶಗಳನ್ನು ಪಾಲಿಸಬೇಕು ಎಂದು ತೋರಿಸಿಕೊಟ್ಟಂತಹ ವ್ಯಕ್ತಿ ಎಂದರೆ ಅದು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ತಾನು ಬದುಕಿದ್ದ ಅಷ್ಟೂ ದಿನ ಬೇರೊಬ್ಬರ ಕಷ್ಟಗಳಿಗೆ ಸ್ಪಂದಿಸಿದ ತನ್ನ ಕೈಲಾದ ಸಹಾಯ ಮಾಡಿದ ವ್ಯಕ್ತಿ ಈಗ ಇಲ್ಲವೆಂದರೆ ನಿಜಕ್ಕೂ ಬೇಸರದ ಸಂಗತಿ.

ಇಂದು ಅಪ್ಪು ಅವರು ನಮ್ಮ ಜೊತೆ ಇಲ್ಲದೆ ಇರಬಹುದು ಆದರೆ ಅವರ ನೆನಪುಗಳು ಅವರು ಮಾಡಿರುವ ಸಾಮಾಜಿಕ ಕೆಲಸಗಳು ಸದಾ ಎಲ್ಲರ ಮನಸ್ಸಿನಲ್ಲಿ ಹಾಗೆ ಉಳಿದು ಬಿಡುತ್ತದೆ. ಇನ್ನು ಸಾ*ವಿ*ನಲ್ಲಿಯೂ ಸಹ ಸಾರ್ಥಕತೆ ಮೆರೆದಂತಹ ವ್ಯಕ್ತಿ ಎಂದರೆ ಅದು ಕೇವಲ ನಮ್ಮ ಅಪ್ಪು.

ಅಪ್ಪು ಬದುಕಿದ್ದಾಗ ಯಾರೇ ಕಷ್ಟ ಎಂದು ಬಂದರೂ ಹಿಂದೆ ಮುಂದೆ ಯೋಚಿಸದೆ ಅವರಿಗೆ ಸಹಾಯ ಮಾಡುತ್ತಿದ್ದರು. ಇನ್ನು ಅಪ್ಪು ಅವರ ನಿ*ಧ*ನದ ಅವರ ಅಭಿಮಾನಿಗಳು ಹಾಗೆ ಅವರ ಆಪ್ತರು ಅವರ ಹೆಸರಿನಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಅವರನ್ನು ಎಲ್ಲರ ನೆನಪುಗಳಲ್ಲಿ ಜೀವಂತವಾಗಿರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನು ಇತ್ತೀಚೆಗೆ ನಟ ಪ್ರಕಾಶ್ ರೈ ಅವರು ಅಪ್ಪು ಅವರ ನೆನಪಿನಲ್ಲಿ ಒಂದು ಆಂಬ್ಯುಲೆನ್ಸ್ ಉದ್ಘಾಟನೆ ಮಾಡಿದ್ದರು. ಹೌದು ಅಪ್ಪು ಹೆಸರಿನಲ್ಲಿ ಇತ್ತೀಚೆಗೆ ಪ್ರಕಾಶ್ ರೈ ಅವರು ಒಂದು ಕಾಸಗಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ನೀಡಿ, ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಅಪ್ಪು ಅವರ ಹೆಸರಿನ ಆಂಬ್ಯುಲೆನ್ಸ್ ಇರುವುದಾಗಿ ಸಂಕಲ್ಪ ಮಾಡಿದ್ದರು.

ಇನ್ನು ಅಪ್ಪು ಅವರ ಹೆಸರಿನಲ್ಲಿ ಪ್ರಕಾಶ್ ರೈ ಅವರು ಮಾಡುತ್ತಿರುವ ಈ ಕೆಲಸಕ್ಕೆ ಅವರಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಇತ್ತೀಚೆಗೆ ಅಪ್ಪು ಅವರ ಗಂಧದಗುಡಿ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ಪುನೀತಪರ್ವ ಜರುಗಿದ್ದು, ಅಲ್ಲಿಗೆ ಪ್ರಕಾಶ್ ರೈ ಜೊತೆಗೆ ಯಶ್, ತಮಿಳು ನಟ ಸೂರ್ಯ ಇನ್ನು ಹಲವಾರು ಕಲಾವಿದರು ಭಾಗಿಯಾಗಿದ್ದರು.

ಇನ್ನು ಇದೆ ವೇಳೆ ವೇದಿಕೆ ಮೇಲೆ ಯಶ್ ಅವರು ಪ್ರಕಾಶ್ ಅವರು ಮಾಡುತ್ತಿರುವ ಕೆಲಸಕ್ಕೆ ಮೆಚ್ಚಿ ಅವರ ಜೊತೆಗೆ ಕೈ ಜೋಡಿಸಿ ಈ ಕೆಲಸವನ್ನು ಆದಷ್ಟು ಬೇಗ ಮಾಡಿ ಮುಗಿಸುವುದಾಗಿ ಎಲ್ಲರ ಮುಂದೆ ಮಾತು ಕೊಟ್ಟಿದ್ದಾರೆ. ಹೌದು ಯಶ್ ಅವರ ಹೆಸರಿನಲ್ಲಿ ಯಶೋಮಾರ್ಗ ಎನ್ನುವ ಫೌಂಡೇಶನ್ ಇದೆ.

ಇನ್ನು ಯಶ್ ಪ್ರಕಾಶ್ ಅವರ ಆಂಬ್ಯುಲೆನ್ಸ್ ವಿತರಣೆಯ ಕೆಲಸಕ್ಕೆ ಕೈ ಜೋಡಿಸಿ ಅಪ್ಪು ಅವರ ಹೆಸರಿನ ಆಂಬ್ಯುಲೆನ್ಸ್ ವಿತರಣೆಯ ಕೆಲಸ ಆದಷ್ಟು ಬೇಗ ನನಸ್ಸು ಮಾಡುವುದಾಗಿ ವೇದಿಕೆ ಮೇಲೆ ಮಾತುಕೊಟ್ಟಿದ್ದಾರೆ. ಯಶ್ ಅವರ ಮಾತುಗಳು ಕೇಳಿ ಪ್ರಕಾಶ್ ರೈ ಬಹಳ ಸಂತೋಷ ಪಟ್ಟಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *