ಹೆಂಡತಿ ವಿಚಾರಕ್ಕೆ ವೇದಿಕೆ ಮೇಲೆಯೇ ಕಣ್ಣೀರಿಟ್ಟ ಶಿವಣ್ಣ! ಹೆಂಡತಿ ಬೆಲೆ ಏನು ಅಂತ ನನಗೆ ಗೊತ್ತಾಯ್ತು! ಏನಾಯ್ತು ಗೊತ್ತಾ ನೀವೇ ನೋಡಿ!..

ಸ್ಯಾಂಡಲವುಡ್

ಶಿವರಾಜ್ ಕುಮಾರ್ ದೊಡ್ಮನೆಯ ದೊಡ್ಡ ಮಗ ಹ್ಯಾಟ್ರಿಕ್ ಹೀರೋ, ಶಿವಣ್ಣ ಮಾತ್ರವಲ್ಲದೆ ದೊಡ್ಮನೆಯ ಮೂರು ಜನ ರಾಘಣ್ಣ ಹಾಗೂ ಅಪ್ಪು ಅವರು ತೆರೆಯ ಮೇಲೆ ಹೇಗೆ ಎಲ್ಲರಿಗೂ ಸಹ ಇಷ್ಟವಾಗುತ್ತಾರೋ ಅದೇ ರೀತಿ ಅವರ ಕುಟುಂಬದ ಜೊತೆಗೆ ಅವರು ನಡೆದುಕೊಳ್ಳುವ ರೀತಿ ಎಲ್ಲರಿಗೂ ಸಹ ಬಹಳ ಇಷ್ಟವಾಗುತ್ತದೆ.

ರಾಘಣ್ಣ, ಶಿವಣ್ಣ ಹಾಗೆ ಅಪ್ಪು ಈ ಮೂರು ಜನ ತಮ್ಮ ಕುಟುಂಬದವರಿಗೆ ಬಹಳ ಪ್ರೀತಿ ಹಾಗೂ ಗೌರವ ನೀಡುತ್ತಿದ್ದರು ಎನ್ನುವುದು ನಿಮ್ಮೆಲ್ಲರಿಗೂ ಸಹ ಗೊತ್ತಿರುವ ವಿಚಾರ. ಇನ್ನು ಅಪ್ಪು ಅವರು ಅದೆಷ್ಟೋ ಕಾರ್ಯಕ್ರಮಗಳಲ್ಲಿ ಮಾತನಾಡುವಾಗ ಅಶ್ವಿನಿ ಅವರನ್ನು ಬಹಳಷ್ಟು ಬಾರಿ ಹೋಗಳಿರುವುದು ಉಂಟು.

ಅಶ್ವಿನಿ ಅವರೇ ನಮ್ಮ ಕುಟುಂಬದ ಶಕ್ತಿ, ಅವರು ಮನೆಯನ್ನು ಸರಿಯಾಗಿ ನಡೆಸಿಕೊಂಡು ಹೋಗುವುದರಿಂದ ನಾವು ಮನೆಯ ಹೊರಗೆ ಯಶಸ್ವಿಯಾಗಿ ಕೆಲಸವನ್ನು ಮಾಡಬಹುದು ಎಂದಿದ್ದರು. ಇನ್ನು ರಾಘಣ್ಣ ಹಾಗೂ ಶಿವಣ್ಣ ಅವರು ಕೂಡ ತಮ್ಮ ಮಡದಿಗೆ ಬಹಳ ಗೌರವ ಕೊಟ್ಟು ನಡೆದುಕೊಳ್ಳುತ್ತಿದ್ದರು.

ಇನ್ನು ಈ ನಡುವೆ ಶಿವಣ್ಣ ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿ ಕಣ್ಣೀರು ಹಾಕಿದ್ದಾರೆ. ಹಾಗೆ ಹೆಂಡತಿ ಬೆಲೆ ಏನು ಎಂದು ಗೊತ್ತಾಯ್ತು ಎಂದಿದ್ದಾರೆ. ಮೊನ್ನೆಮೊನ್ನೆಯಷ್ಟೇ ನಡೆದ ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವಣ್ಣ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಸದ್ಯ ಜೀ ಕನ್ನಡದಲ್ಲಿ ತೀರ್ಪುಗಾರರಾಗಿರುವ ಶಿವಣ್ಣ ಹಾಗೂ ರವಿಚಂದ್ರನ್ ಕಾರ್ಯಕ್ರಮ ಒಂದರಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಇನ್ನು ಇದೆ ವೇಳೆ ಗೀತಾ ಅವರ ಬಗ್ಗೆ ಮಾತನಾಡುತ್ತಾ ಶಿವಣ್ಣ ಭಾವುಕರಾಗಿದ್ದಾರೆ. ಗೀತಾ ಸದ್ಯ ಈಗ ಶಕ್ತಿಧಾಮದ ಪ್ರೆಸಿಡೆಂಟ್ ಆಗಿದ್ದಾರೆ. ಅಮ್ಮನ ಜಾಗಕ್ಕೆ ಅವರು ಬಂದಿದ್ದಾರೆ.

ಇನ್ನು ಮಾತು ಮುಂದುವರೆಸಿದ ಶಿವಣ್ಣ 10 ವರ್ಷಗಳ ಹಿಂದೆ ನನಗೆ ಮೆದುಳಿಗೆ ಸಂಬಂಧ ಪಟ್ಟ ಸಣ್ಣ ಸಮಸ್ಯೆಯಾಗಿತ್ತು. ಚಿ,ಕಿತ್ಸೆಗೆ ವಿದೇಶಕ್ಕೆ ಹೋಗಬೇಕಾಯಿತು. ಸಮಸ್ಯೆ ಸ್ವಲ್ಪ ಗಂಭೀರವಾಗಿತು. ಆ ಸಮಯದಲ್ಲಿ ಗೀತಾ ನನ್ನ ಜೊತೆಗೆ ಧೈರ್ಯವಾಗಿ ನಿಂತಿದ್ದರು.

ಆಲ್ಲದೆ ಸಾಕಷ್ಟು ಹರಕೆಗಳನ್ನು ಕಟ್ಟಿಕೊಂಡು ನನಗೆ ಆರೋಗ್ಯ ಸರಿಹೋದ ಮೇಲೆ ಅವರು ದೇವರಿಗೆ ತಮ್ಮ ಕೂದಲನ್ನು ಸಹ ಕೊಟ್ಟಿದ್ದರು. ಸಹಜವಾಗಿ ಹೆಣ್ಣು ಮಕ್ಕಳಿಗೆ ಕೂದಲು ಎಂದರೆ ಬಹಳ ಪ್ರೀತಿ, ಆದರೆ ನನಗಾಗಿ ಗೀತಾ ಮಾಡಿದ ಕೆಲಸ ನಿಜಕ್ಕೂ ತುಂಬಾ ಖುಷಿ ಕೊಟ್ಟಿತು. ಆಗ ನನಗೆ ಹೆಂಡತಿ ಬೆಲೆ ಏನು ಎಂದು ಗೊತ್ತಾಯಿತು ಎಂದು ಶಿವಣ್ಣ ಭಾವುಕರಾಗಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *