ಕನ್ನಡ ಕಿರುತೆರೆ ಲೋಕದಲ್ಲಿ ತಂಬ ಚಟಪಟ ಮಾತುಗಳ ಮೂಲಕವೇ ಅದೆಷ್ಟೋ ಜನರ ಮನ ಗೆದ್ದಿರುವ ನಿರೂಪಕಿ ಎಂದರೆ ಅದು ನಮ್ಮ ಅನುಶ್ರೀ. ಅದೆಷ್ಟೋ ಕಾರ್ಯಕ್ರಮಗಳ ನಿರೂಪಣೆ ಮಾಡಿ ಆ ಕಾರ್ಯಕ್ರಮಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ ಅನುಶ್ರೀ.
ಇನ್ನು ಇತ್ತೀಚೆಗೆ ಅನುಶ್ರೀ ಅವರಿಗೆ ಜನ ಮೆಚ್ಚಿದ ನಿರೂಪಕಿ ಪ್ರಶಸ್ತಿ ಲಭಿಸಿತ್ತು. ಇನ್ನು ಈ ಪ್ರಶಸ್ತಿ ಅವರಿಗೆ ಅಪ್ಪು ಪತ್ನಿ ಅಶ್ವಿನಿ ಅವರ ಕೈಯಿಂದ ಲಭಿಸಿದ್ದು ಅವರಿಗೆ ಇನ್ನಷ್ಟು ಖುಷಿ ತಂದುಕೊಟ್ಟಿತು. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಅನುಶ್ರೀ ಅವರ ಫೇವರೇಟ್ ಹೀರೋ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.
ಇನ್ನು ಅಪ್ಪು ಅವರ ಪತ್ನಿ ಅಶ್ವಿನಿ ಅವರ ಕೈಯಿಂದ ಜನ ಮೆಚ್ಚಿದ ನಿರೂಪಕಿ ಅವಾರ್ಡ್ ಅನ್ನು ಅನುಶ್ರೀ ಪಡೆದುಕೊಂಡಿದ್ದರು. ಇನ್ನು ಇದರ ಖುಷಿಯಲ್ಲಿದ್ದ ಅನುಶ್ರೀ ಇದೀಗ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಲೈವ್ ಬಂದು ಮತ್ತೊಂದು ಮಾಹಿತಿ ಬಿಟ್ಟು ಕೊಟ್ಟಿದ್ದಾರೆ. ಹಾಗಾದರೆ ಏನಿದು ನೋಡೋಣ ಬನ್ನಿ..
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲೈವ್ ಬಂದ ಅನುಶ್ರೀ, ಮೊದಲಿಗೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ನನಗೆ ವೋಟ್ ಮಾಡಿ ಗೆಲ್ಲಿಸಿದ್ದ ಪ್ರತಿಯೊಬ್ಬ ಅಭಿಮಾನಿಗೂ ನನ್ನ ಧನ್ಯವಾದಗಳು. ಈ ಅವಾರ್ಡ್ ನನಗೆ ಸಿಕ್ಕಿದ್ದು, ನನಗೆ ತುಂಬಾ ಖುಷಿಯಿದೆ. ಹಾಗೆ ಈ ಅವಾರ್ಡ್ ಅನ್ನು ಅಶ್ವಿನಿ ಮೇಡಂ ಅವರಿಂದ ಪಡೆದಿದ್ದು ನನಗೆ ಇನ್ನಷ್ಟು ಖುಷಿಯಾಗಿದೆ.
ಇನ್ನು ಇದೆ 29 ಅಕ್ಟೊಬರ್ ಅಪ್ಪು ಅವರ ಪುಣ್ಯ ತಿಥಿಯ ಪ್ರಯುಕ್ತ ನಾವೆಲ್ಲರೂ ಸೇರಿ ಗಂಧದಗುಡಿಯ ಜಾತ್ರೆ ಮಾಡುತ್ತಿದ್ದೇವೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸರಿ ಸುಮಾರು 75 ಅಪ್ಪು ಅವರ ಕಟೌಟ್ ನಿಲ್ಲಿಸಿ ಈ ಜಾತ್ರೆ ಮಾಡುತ್ತಿದ್ದೇವೆ.
ನೀವೆಲ್ಲರೂ ಈ ಜಾತ್ರೆಯಲ್ಲಿ ಭಾಗಿಯಾಗಬೇಕು ಎಂಬುದು ನಮ್ಮೆಲ್ಲರ ಆಸೆ. ಇನ್ನು ಆ ದಿನ ಒಂದು ಸಾಂಸ್ಕೃತಿಕ ಹಬ್ಬದ ರೀತಿ ಇರುತ್ತದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಈ ಹಬ್ಬಕ್ಕೆ ನೀವೆಲ್ಲರೂ ತಪ್ಪದೆ ಭಾಗಿಯಾಗಿ ಎಂದು ಅನುಶ್ರೀ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಗಂಧದಗುಡಿ ಸಿನಿಮಾವನ್ನು ಯಾರೆಲ್ಲಾ ನೋಡುತಿರಾ ತಪ್ಪದೆ ಅದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆಗೆ ಶೇರ್ ಮಾಡಿ ಎಂದಿದ್ದಾರೆ.ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ…