ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾಗಳ ನಂತರ ಯಶ್ ಅವರ ಕ್ರೇಜ್ ಎಲ್ಲೆಡೆ ಹೆಚ್ಚಾಗಿದೆ. ಸದ್ಯ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸದ್ಯ ಯಶ್ ಅವರ ಬೆಳವಣಿಗೆಯ ನಂತರ ಯಶ್ ಕೊಂಚ ಬದಲಾಗಿದ್ದಾರೆ ಎಂದು ಕೆಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಕಾಂತಾರ ಸಿನಿಮಾ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ, ಇನ್ನು ಈ ಸಿನಿಮಾಗೆ ಸಾಕಷ್ಟು ಸೆಲೆಬ್ರೆಟಿಗಳು ಮೆಚ್ಚುಗೆ ಸೂಚಿಸಿದ್ದರು, ಇನ್ನು ಈ ಸಿನಿಮಾ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಂದಿದ್ದರೂ ಸಹ ಯಶ್ ಅವರು ಈ ಸಿನಿಮಾದ ಬಗ್ಗೆ ಒಂದು ಪೋಸ್ಟ್ ಸಹ ಹಾಕಿರಲಿಲ್ಲ.
ತೆಲುಗಿನ ಪ್ರಭಾಸ್ ಕಾಂತಾರ ಸಿನಿಮಾ ನೋಡಿ ಕೊಂಡಾಡಿದ್ದರು, ಕೇವಲ ತೆಲುಗು ಮಾತ್ರವಲ್ಲ ತಮಿಳಿನ ಹಲವಾರು ನಟರು ಕೂಡ ಕಾಂತಾರ ಸಿನಿಮಾದ ಬಗ್ಗೆ ಪೋಸ್ಟ್ ಶೇರ್ ಮಾಡಿ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ನಟ ಯಶ್ ಈ ಸಿನಿಮಾದ ಬಗ್ಗೆ ಏನು ಹೇಳದೆ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.
ಆದರೆ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಯಶ್ ರಿಷಬ್ ಶೆಟ್ಟಿ ಅವರಿಗೆ ಕರೆ ಮಾಡಿ, ಆಲ್ ಧಿ ಬೆಸ್ಟ್ ಚಿನ್ನ ಸಿನಿಮಾ ಚೆನ್ನಾಗಿ ಆಗುತ್ತೆ ಎಂದು ಶುಭಾಶಯಗಳನ್ನು ತಿಳಿಸಿದ್ದರಂತೆ, ಈ ಬಗ್ಗೆ ಖುದ್ದು ರಿಷಬ್ ಶೆಟ್ಟಿ ಅವರೇ ಮಾದ್ಯಮದ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
ಅದೇ ರೀತಿ ಕಾಂತಾರ ಸಿನಿಮಾ ಕೆಜಿಎಫ್ ನ ಧಾಖಲೆ ಮುರಿದಿರುವುದು ಎಲ್ಲರಿಗೂ ಸಹ ಗೊತ್ತೇ ಇದೆ. ಇನ್ನು ಈ ಬಗ್ಗೆ ಯಶ್ ಬಳಿ ಪ್ರಶ್ನೆ ಕೇಳಿದಾಗ ಧಾಖಲೆ ಇರುವುದೇ ಮುರಿಯೋದಕ್ಕೆ, ಇದೆ ರೀತಿ ಕನ್ನಡದಲ್ಲಿ ಹೊಸ ಸಿನಿಮಾಗಳು ಬರಬೇಕು, ಕನ್ನಡದಲ್ಲಿ ಕೇವಲ ದೊಡ್ಡ ಬಡ್ಜೆಟ್ ನ ಸಿನಿಮಾ ಅಲ್ಲ, ಈ ರೀತಿ ವಿಭಿನ್ನವಾದ ಸಿನಿಮಾಗಳು ಬರಬೇಕು ಎಂದು ಯಶ್ ಅವರು ರಿಷಬ್ ಶೆಟ್ಟಿ ಅವರಿಗೆ ಮತ್ತೊಮ್ಮೆ ಶುಭ ಕೋರಿದ್ದಾರೆ ಎಂದು ಮೂಲಗಳಿಂದ ತಿಳಿದು ಬರುತ್ತಿದೆ.
ಏನೇ ಆದರೂ ಯಶ್ ಅವರು ಬೆಳೆಯುವ ಮುನ್ನ ಯಾವ ರೀತಿ ಇದ್ದರೋ, ಅದೇ ರೀತಿ ಬೆಳೆದ ಮೇಲೆ ಕೂಡ ಕನ್ನಡ ಇಂಡಸ್ಟ್ರಿಯ ಬಗ್ಗೆ, ಹಾಗೆ ಕನ್ನಡದ ಬೇರೆಯ ನಟರ ಬಗ್ಗೆ ಅಷ್ಟೇ ಗೌರವವನ್ನ ತೋರಿಸುತ್ತಿದ್ದಾರೆ. ಇದು ಇಡೀ ಕನ್ನಡಿಗರೆಲ್ಲಾ ಹೆಮ್ಮೆ ಪಡುವಂತಹ ವಿಷಯ.
ಏಕೆಂದರೆ ನಮ್ಮ ಇಡೀ ಸ್ಯಾಂಡಲ್ವುಡ್ ಮತ್ತೆ ಒಂದಾಗುತ್ತಿದೆ, ಇನ್ನು ಮುಖ್ಯವಾಗಿ ಇಡೀ ಪ್ರಪಂಚ ನಮ್ಮ ಸ್ಯಾಂಡಲ್ವುಡ್ ಕಡೆಗೆ ತಿರುಗಿ ನೋಡುವಂತೆ ಸ್ಯಾಂಡಲ್ವುಡ್ ಬೆಳೆದು ನಿಂತಿದೆ. ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಕನ್ನಡದ ನಟರು ಎಂದರೆ ತಪ್ಪಾಗುವುದಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..