ಪುನೀತ್ ರಾಜ್ ಕುಂಡೆ ಅವರ ಕೊನೆಯ ಸಿನಿಮಾ ಆದಂತಹ ಗಂಧದಗುಡಿ, ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಅನ್ನು ಬಹಳ ಅದ್ದೂರಿಯಾಗಿ ಪುನೀತಪರ್ವ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಇನ್ನು ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಕಲಾವಿದರು ಭಾಗಿಯಾಗಿದ್ದರು.
ಆದರೆ ಈ ಪುನೀತಪರ್ವ ಕಾರ್ಯಕ್ರಮಕ್ಕೆ ದರ್ಶನ್ ಅವರು ಮಾತ್ರ ಭಾಗಿಯಾಗಿರಲಿಲ್ಲ. ಇನ್ನು ದರ್ಶನ್ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದ ಕಾರಣ ಈ ಕಾರ್ಯಕ್ರಮ ಬರಲು ಸಾಧ್ಯವಾಗಿರಲಿಲ್ಲ ಎನ್ನಲಾಗಿತ್ತು. ಆದರೆ ದರ್ಶನ್ ಅವರು ಹುಬ್ಬಳ್ಳಿಯಲ್ಲಿ ನಡೆದ ಬನಾರಸ್ ಸಿನಿಮಾದ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು.
ಆದರೆ ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿಯಾಗಿದ್ದರೂ ಸಹ, ಅವರು ಮೊದಲಿಗೆ ಮಾಡುವ ಕೆಲಸ ಅಪ್ಪು ಅವರಿಗೆ ನಮನ ಸಲ್ಲಿಸುವುದು. ಇನ್ನು ಕಾರ್ಯಕ್ರಮ ಶುರುವಾಗುವ ಮುನ್ನ ಅಪ್ಪು ಅವರಿಗೆ ನಮನ ಸಲ್ಲಿಸಿ ಎಂದು ಸ್ವತಃ ಡಿ ಬಾಸ್ ಅವರೇ ಹೇಳಿದ್ದರು, ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಅಪ್ಪು ಅವರ ಮೇಲೆ ಡಿ ಬಾಸ್ ಅವರಿಗೆ ಎಷ್ಟು ಗೌರವವಿದೆ ಎನ್ನುವುದು ಎಲ್ಲರಿಗೂ ಸಹ ಗೊತ್ತೇ ಇದೆ. ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ವಿಚಾರ ತಿಳಿದಾಗ ಡಿ ಬಾಸ್ ಅವರು ಬರೋಬ್ಬರಿ 12 ದಿನಗಳ ಶೂಟಿಂಗ್ ನಿಲ್ಲಿಸಿದ್ದರು. ಇನ್ನು ಯಾವಾಗಲೂ ಸಹ ಡಿ ಬಾಸ್ ಒಂದು ಮಾತನ್ನು ಹೇಳುತ್ತಿರುತ್ತಾರೆ.
ದೊಡ್ಮನೆ ಯಾವತ್ತಿದ್ದರೂ ದೊಡ್ಮನೆಯೇ, ಅವರ ಪಾದದ ಧೂಳಿಗೂ ಸಹ ನಾವು ಸಮ ಬರುವುದಿಲ್ಲ ಎಂದು ದರ್ಶನ್ ಅವರು ಆಗಾಗ ಹೇಳುತ್ತಿರುತ್ತಾರೆ. ಅಷ್ಟು ದೊಡ್ಡ ಸ್ಟಾರ್ ನಟನಾಗಿದ್ದರೂ ಸಹ ದರ್ಶನ್ ಅವರ ಅಪ್ಪು ಅವರ ಬಗ್ಗೆ ಅಷ್ಟು ಪ್ರೀತಿಯ ಮಾತುಗಳನ್ನು ಹೇಳುತ್ತಾರೆ.
ಇನ್ನು ಅಶ್ವಿನಿ ಮೇಡಂ ಅವರು ಯವಾಗಲೇ ಕರೆ ಮಾಡಿದರು ಸಹ ನಟ ದರ್ಶನ್ ಮೊದಲು ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಾರೆ ನಂತರ ಅವರು ಕರೆ ಮಾಡಿದ ಉದ್ದೇಶದ ಬಗ್ಗೆ ಮಾತನಾಡುತ್ತಾರಂತೆ, ಇನ್ನು ದರ್ಶನ್ ಅವರ ಈ ಗುಣದಿಂದಲೇ ಅವರು ಎಲ್ಲರಿಗೂ ಸಹ ಬಹಕ ಇಷ್ಟ.
ಇನ್ನು ಪುನೀತಪರ್ವ ಕಾರ್ಯಕ್ರಮಕ್ಕೆ ದರ್ಶನ್ ಅವರು ಬರದೆ ಇರಲು ಮುಖ್ಯ ಕಾರಣ ಅವರು ತಮ್ಮ ಕ್ರಾಂತಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಹಾಗೆ ಈ ಪೋಸ್ಟ್ ಗೆ ಒಂದು ಲೈಕ್ ಕೊಟ್ಟು, ಕಾಮೆಂಟ್ ಮಾಡಿ, ಶೇರ್ ಮಾಡಿ..