ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ಪುಟ್ಟ ಹುಡುಗಿ ವಂಶಿಕಾ ಅಂಜನಿ ಕಶ್ಯಪ. ತನ್ನ ಪಟ ಪಟ ಮಾತುಗಳ ಮೂಲಕ ಎಲ್ಲರ ಹೃದಯ ಗೆದ್ದಿರುವ ವಂಶಿಕಾ ಸದ್ಯ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಇನ್ನು ವಂಶಿಕಾ ತನ್ನ ತಂದೆ ತಾಯಿ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾಳೆ ಎಂದರೆ ತಪ್ಪಾಗುವುದಿಲ್ಲ.
ಸದ್ಯ ವಂಶಿಕಾ ಕಿರುತೆರೆಯ ನಿರೂಪಕಿಯಾಗಿ ಸಹ ಎಂಟ್ರಿ ಕೊಟ್ಟಿದ್ದಾಳೆ. ನಮ್ಮಮ್ಮ ಸೂಪರ್ ಸ್ಟಾರ್ 2 ಕಾರ್ಯಕ್ರಮಕ್ಕೆ ನಿರೂಪಕ ನಿರಂಜನ್ ಜೊತೆಗೆ ವಂಶಿಕಾ ಕೂಡ ನಿರೂಪಣೆ ಮಾಡುತ್ತಿದ್ದು, ಇನ್ನು ವಂಶಿಕಾ ಮಾತುಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ. ಇನ್ನು ವಂಶಿಕಾ ಅವರ ಬೆಳವಣಿಗೆ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಇನ್ನು ಮಾಸ್ಟರ್ ಆನಂದ್ ಸಹ ತಮ್ಮ ಸಿನಿಮಾಗಳು ಹಾಗೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದು, ಆಗಾಗ ತಮ್ಮ ಕುಟುಂಬಕ್ಕೂ ಸಹ ಸಮಯ ನೀಡುತ್ತಿರುತ್ತಾರೆ. ಇನ್ನು ಇದೀಗ ಮಾಸ್ಟರ್ ಆನಂದ್ ತಮ್ಮ ಪತ್ನಿ ಯಶಸ್ವಿನಿ ಹಾಗೂ ಮಗಳು ವಂಶಿಕಾ ಜೊತೆಗೆ ಸಮಯ ಕಳೆಯಲು ಹೊರಗೆ ಹೋಗಿದ್ದಾರೆ.
ಮಾಸ್ಟರ್ ಆನಂದ ಹಾಗೂ ಅವರ ಪತ್ನಿ ಯಶಸ್ವಿನಿ ತಮ್ಮ ಮಗಳಾದ ವಂಶಿಕಾ ಜೊತೆಗೆ ಊಟಕ್ಕೆ ಹೊರಗೆ ಹೋಗಿದ್ದಾರೆ. ಬೆಂಗಳೂರಿನ ಜೆ ಪಿ ನಗರದ ರಾಮೇಶ್ವರಮ್ ಹೋಟೆಲ್ ಗೆ ಭೇಟಿ ನೀಡಿದ್ದು, ಅಲ್ಲಿನ ವಿಶೇಷ ಹಾಗೂ ವಿಭಿನ್ನ ಶೈಲಿಯ ಮಾಹಿತಿಯನ್ನು ಮಾಸ್ಟರ್ ಆನಂದ್ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
ಹೌದು ಜೆ ಪಿ ನಗರದ ರಾಮೇಶ್ವರಮ್ ಹೋಟೆಲ್ ನಲ್ಲಿ ಅಪ್ಪು ಅವರಿಗೆ ಇಷ್ಟವಾದ ಆಹಾರವನ್ನು ನೀವು ಆರ್ಡರ್ ಮಾಡಿದರೆ ನಿಮಗೆ ಅಪ್ಪು ಅವರ ಗಂಧದಗುಡಿಯ ಪೋಸ್ಟರ್ ನ ಫೋಟೋ ಹಿಂದೆ ಅಪ್ಪು ಅವರ ಆಟೋಗ್ರಾಫ್ ಇರುವ ಒಂದು ಗ್ರೀಟಿಂಗ್ ಕಾರ್ಡ್ ಉಡುಗೊರೆಯಾಗಿ ನೀಡಲಾಗುತ್ತಿದೆ.
ಇನ್ನು ಈ ಬಗ್ಗೆ ಮಾಹಿತಿ ಹಂಚಿಕೊಂಡ ಮಾಸ್ಟರ್ ಆನಂದ್ ಇದೆ 28ಕ್ಕೆ ಗಂಧದ ಗುಡಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು ಕನ್ನಡಿಗರಾಗಿ ಪ್ರತಿಯೊಬ್ಬರು ಈ ಸಿನಿಮಾ ನೋಡಲೆ ಬೇಕು. ಹಾಗೆ ಇದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿ, ಆ ಹೋಟೆಲ್ ನ ಅಪ್ಪು ಅವರ ವಿಶೇಷ ಗ್ರೀಟಿಂಗ್ ಕಾರ್ಡ್ ಅನಾವರಣ ಮಾಡಿದ್ದಾರೆ.
ಹೀಗೆ ನಿಮಗೂ ಸಹ ಅಪ್ಪು ಅವರ ಗ್ರೀಟಿಂಗ್ ಕಾರ್ಡ್ ಹಾಗೂ ಅವರ ಆಟೋಗ್ರಾಫ್ ಬೇಕು ಎಂದಲ್ಲಿ, ಜೆ ಪಿ ನಗರದ ಈ ಹೋಟೆಲ್ ಗೆ ಭೇಟಿ ಮಾಡಿ ಅಪ್ಪು ಅವರಿಗೆ ಇಷ್ಟವಾದ ಆಹಾರವನ್ನು ಆರ್ಡರ್ ಮಾಡಿ, ಅಪ್ಪು ಅವರ ಆಟೋಗ್ರಾಫ್ ನಿಮಾಧಾಗಿಸಿಕೊಳ್ಳಿ, ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ..