ಬಿಗ್ ಬಾಸ್ ಈ ವಾರದ ಎಲಿಮಿನೇಷನ್ ಮುಕ್ತಾಯ. ಮನೆಯಿಂದ ಹೊರ ಬಂದ ಸ್ಪರ್ಧಿ ಇವರೇ ನೋಡಿ..!!!

Bigboss News

ಬಿಗ್ ಬಾಸ್ ಸೀಸನ್ 9 ನಾಲ್ಕು ವಾರಗಳು ಕಳೆದಿದ್ದು 5 ನೆ ವಾರಕ್ಕೆ 14 ಜನ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಬಿಗ್ ಬಾಸ್ ನಾಲ್ಕನೇ ವಾರದ ಎಲಿಮಿನೇಷನ್ ಮುಕ್ತಾಯವಾಗಿದ್ದು, ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೊರ ನಡೆದಿದ್ದಾರೆ. ಅಷ್ಟಕ್ಕೂ ಆ ಸ್ಪರ್ಧಿ ಯಾರು? ಈ ವಾರ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಯಾರು ತಿಳಿಸುತ್ತೇವೆ ಬನ್ನಿ..

ಬಿಗ್ ಬಾಸ್ ಸೀಸನ್ 9 ರ ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೇ ಬೇರೆಯದ್ದೇ ರೀತಿಯಲ್ಲೇ ನಡೆದಿದೆ. ಇನ್ನು ಇಷ್ಟು ವಾರಗಳು ಕಿಚ್ಚ ಸುದೀಪ್ ಅವರು ಶನಿವಾರ ಹಾಗೂ ಭಾನುವಾರ ಸ್ಪರ್ಧಿಗಳ ಜೊತೆ ಮಾತನಾಡಿ ನಂತರ ಭಾನುವಾರ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಎಲಿಮಿನೇಟ್ ಮಾಡುತ್ತಿದ್ದರು.

ಇನ್ನು ಈ ವಾರ ಸುದೀಪ್ ವಾರಾಂತ್ಯದ ಕಾರ್ಯಕ್ರಮವನ್ನು ನಡೆಸಿಕೊಡಲು ಸಾಧ್ಯವಾಗಿಲ್ಲ. ಹೌದು ಕಿಚ್ಚ ಸುದೀಪ್ ಅವರು ತಮ್ಮ ಪತ್ನಿಯ ಜೊತೆ ವಿದೇಶಕ್ಕೆ ಪ್ರವಾಸಕ್ಕೆ ಹೋಗಿರುವ ಕಾರಣ ಅವರು ಈ ವಾರದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಭಾಗಿಯಾಗಲು ಸಾಧ್ಯವಾಗಿಲ್ಲ.

ಆದರೆ ಬಿಗ್ ಬಾಸ್ ಮನೆಯಿಂದ ಪ್ರತಿ ವಾರ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗುವುದು ಪ್ರತಿಥಿ ಅದೇ ರೀತಿ ಈ ವಾರ ಕೂಡ ಒಬ್ಬ ಸ್ಪರ್ಧಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ವಿಭಿನ್ನವಾಗಿ ಎಲಿನೇಷನ್ ಪ್ರಕ್ರಿಯೆ ನಡೆದಿದೆ.

ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಕಳೆದ ವಾರ ಎಲಿಮಿನೇಟ್ ಆದ ದರ್ಶ್ ಚಂದ್ರಪ್ಪ, ರೂಪೇಶ್ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಜೊತೆಗೆ ಆರ್ಯವರ್ಧನ್ ಗುರೂಜಿ, ಮೈಯೂರಿ, ಸಾನಿಯಾ ಐಯರ್, ನೇಹಾ ಗೌಡ, ಕಾವ್ಯಾ ಗೌಡ, ಪ್ರಶಾಂತ್ ಸಂಬರ್ಗಿ, ದಿವ್ಯ ಉರುಡುಗ ಸೇರಿ ಒಟ್ಟು 8 ಜನ ಸ್ಪರ್ಧಿ ನಾಮಿನೇಟ್ ಆಗಿದ್ದರು.

ಇನ್ನು ಎಲಿಮಿನೇಷನ್ ಪ್ರಕ್ರಿಯೆಯನ್ನು ವಿಭಿನ್ನ ರೀತಿಯಲ್ಲಿ ಮಾಡಲಾಗಿದ್ದು, ಕೆಲವೊಂದು ಚಟುವಟಿಕೆಗಳ ಮೂಲಕ ಯಾವ ಸದಸ್ಯ ಈ ಬಾರಿ ಸೇಫ್ ಎನ್ನುವುದನ್ನು ತಿಳಿಸಲಾಗಿದೆ. ಒಂದೊಂದು ಹಂತದಲ್ಲಿ ಒಬ್ಬೊಬ್ಬರನ್ನು ಸೇಫ್ ಮಾಡುತ್ತಾ, ಕೊನೆಯ ಮೂವರನ್ನ ಗಾರ್ಡನ್ ಏರಿಯಾದಲ್ಲಿ ತಂದು ನಿಲ್ಲಿಸಲಾಯಿತು.

ಆ ಮೂವರಲ್ಲಿ ಎಲಿಮಿನೇಟ್ ಆದ ಸದಸ್ಯನನ್ನು ಬಿಗ್ ಬಾಸ್ ಮನೆಯ ಗಾರ್ಡ್ ಗಳು ಬೈಕ್ ನಲ್ಲಿ ಬಂದು ಕರೆದುಕೊಂಡು ಹೋದರು. ಇನ್ನು ಮೂಲಗಳ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಿಂದ ಮೈಯೂರಿ ಅವರು ಹೊರ ಹೋಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *